ಸಬ್ಸಿಡಿ, ಸಬ್ಸಿಡಿ ರಹಿತ ಎಲ್‌ಪಿಜಿ ಬೆಲೆ ಮತ್ತೆ 25 ರೂ. ಏರಿಕೆ, ಕಂಗಾಲಾದ ಜನ

ಪೆಟ್ರೋಲ್, ಡೀಸೆಲ್ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ದರ ಏರಿಕೆ ಆಘಾತ ನೀಡಿದ್ದು, ಸಬ್ಸಿಡಿ ಹಾಗೂ ಸಬ್ಸಿಡಿ ರಹಿತ ಅಡುಗೆ....

Published: 25th February 2021 04:21 PM  |   Last Updated: 25th February 2021 04:21 PM   |  A+A-


LPG prices cut by up to Rs 65 per cylinder; second cost reduction in two months 

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಇತರೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬೇಸತ್ತಿದ್ದ ಜನರಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ದರ ಏರಿಕೆ ಆಘಾತ ನೀಡಿದ್ದು, ಸಬ್ಸಿಡಿ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ಎಲ್‌ಪಿಜಿ ಬೆಲೆಯನ್ನು ಗುರುವಾರ ಪ್ರತಿ ಸಿಲಿಂಡರ್‌ಗೆ 25 ರೂ.ಗೆ ಏರಿಸಲಾಗಿದೆ.

ತೈಲ ಕಂಪನಿಗಳು ಈ ತಿಂಗಳಲ್ಲೇ ಮೂರು ಬಾರಿ ಎಲ್ ಪಿಜಿ ದರ ಏರಿಕೆ ಮಾಡಿದ್ದು, ದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್​ನ ಬೆಲೆ 794 ರೂಪಾಯಿಗೆ ಮುಟ್ಟಿದೆ.

ಫೆ.4ರಂದು 25 ರೂ. ಫೆ. 15ರಂದು 50 ರೂ. ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 25 ರೂಪಾಯಿ ಹೆಚ್ಚಿಸಲಾಗಿದ್ದು, ಬೆಂಗಳೂರಿನಲ್ಲಿ ಪ್ರತಿ ಸಿಲಿಂಡರ್​ ಬೆಲೆ 794ಕ್ಕೆ ಏರಿಕೆಯಾಗಿದೆ. ಕೊಲ್ಕತ್ತಾದಲ್ಲಿ 820 ರೂ, ಮುಂಬೈನಲ್ಲಿ 794 ರೂ, ಚೆನ್ನೈನಲ್ಲಿ 810 ರೂ, ಹೈದರಾಬಾದ್​ನಲ್ಲಿ 846.50 ರೂ ಆಗಿದೆ.

ಕಳೆದ ಡಿಸೆಂಬರ್ ನಿಂದ ಇಲ್ಲಿಯವರಿಗೆ ಎಲ್ ಪಿಜಿ ದರ 150 ರೂಪಾಯಿ ಹೆಚ್ಚಾಗಿದ್ದು, ಜನವರಿ ತಿಂಗಳಲ್ಲಿ ಹೆಚ್ಚಳ ಕಂಡಿರಲಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದ ಈ ಸಿಲಿಂಡರ್ ಬೆಲೆ ಹೆಚ್ಚಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

Stay up to date on all the latest ವಾಣಿಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp