ಸವಾರರ ಜೇಬಿಗೆ ಕತ್ತರಿ: 3 ದಿನದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ!

ತೈಲೋತ್ಪನ್ನಗಳ ದರಗಳು ಮತ್ತೆ ಏರಿಕೆ ಕಂಡಿದ್ದು ವಾಹನ ಸವಾರರಿಗೆ ಹೊರೆಯಾಗುತ್ತಿದೆ.

Published: 27th February 2021 12:59 PM  |   Last Updated: 27th February 2021 12:59 PM   |  A+A-


Petrol Rate

ಪೆಟ್ರೋಲ್ ದರ

Posted By : Vishwanath S
Source : Online Desk

ನವದೆಹಲಿ: ತೈಲೋತ್ಪನ್ನಗಳ ದರಗಳು ಮತ್ತೆ ಏರಿಕೆ ಕಂಡಿದ್ದು ವಾಹನ ಸವಾರರಿಗೆ ಹೊರೆಯಾಗುತ್ತಿದೆ. 

ಮೂರು ದಿನಗಳ ಬಳಿಕ ಮತ್ತೆ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಮತ್ತು ಡೀಸೆಲ್ ದರದಲ್ಲಿ 15 ಪೈಸೆ ಏರಿಕೆಯಾಗಿದೆ.

ಹೌದು..ಭಾರತದಲ್ಲಿ ತೈಲೋತ್ಪನ್ನಗಳ ದರಗಳಲ್ಲಿ 24 ರಿಂದ 15 ಪೈಸೆಯಷ್ಟು ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 91.17 ರೂ. ಗೆ ಏರಿಕೆಯಾಗಿದ್ದು, ಡೀಸೆಲ್ ದರ ಕೂಡ 81.47 ರೂ. ಗೆ ಏರಿಕೆಯಾಗಿದೆ.

ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 94.22 ರೂಗೆ ಏರಿಕೆಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರ 86.37 ರೂ ಗೆ ಏರಿಕೆಯಾಗಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 24 ಪೈಸೆ ಏರಿಕೆಯಾಗಿ ಪ್ರತೀ ಲೀಟರ್ ಪೆಟ್ರೋಲ್ ದರ 97.57 ಏರಿಕೆಯಾಗಿದ್ದು, ಡೀಸೆಲ್ ದರ 15 ಪೈಸೆ ಏರಿಕೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 88.60 ರೂ. ಗೆ ಏರಿಕೆಯಾಗಿದೆ.  

ಚೆನ್ನೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ 93.11 ರೂಗೆ ಮತ್ತು ಡೀಸೆಲ್ 86.45 ರೂಗೆ ಏರಿಕೆಯಾಗಿದ್ದು, ಕೋಲ್ಕತಾದಲ್ಲಿ ಪ್ರತೀ ಲೀಟರ್ ಪೆಟ್ರೋಲ್ 91.35 ರೂ.ಗೆ ಮತ್ತು ಡೀಸೆಲ್ 84.35 ರೂಗೆ ಏರಿಕೆಯಾಗಿದೆ.

Stay up to date on all the latest ವಾಣಿಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp