ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮಾರಾಟ ಶೇ.14 ರಷ್ಟು ವೃದ್ಧಿ

 ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿ 2020 ರ ಡಿಸೆಂಬರ್ ನಲ್ಲಿ ದೇಶೀಯ ಮಾರಾಟದಲ್ಲಿ ಶೇ 14 ರಷ್ಟು ಬೆಳವಣಿಗೆ ದಾಖಲಿಸಿದೆ

Published: 03rd January 2021 01:33 AM  |   Last Updated: 03rd January 2021 01:33 AM   |  A+A-


Toyota

ಟೊಯೊಟಾ

Posted By : Srinivas Rao BV
Source : UNI

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪೆನಿ 2020 ರ ಡಿಸೆಂಬರ್ ನಲ್ಲಿ ದೇಶೀಯ ಮಾರಾಟದಲ್ಲಿ ಶೇ 14 ರಷ್ಟು ಬೆಳವಣಿಗೆ ದಾಖಲಿಸಿದೆ.

ಟೊಯೋಟಾದಿಂದ ಹೊಸ ಮಾದರಿ ವಾಹನಗಳ ಬಿಡುಗಡೆ ನಡುವೆ ಗ್ರಾಹಕರ ಬೇಡಿಕೆ ಮತ್ತು ಚಿಲ್ಲರೆ ಮಾರಾಟಗಳು ಹೆಚ್ಚಾಗುತ್ತಿರುವುದರಿಂದ 2020 ರ ಕೊನೆಯ ತ್ರೈಮಾಸಿಕದಲ್ಲಿ  ಸಗಟು ಮಾರಾಟದಲ್ಲಿ ಶೇ 6ಕ್ಕೂ ಅಧಿಕ ಬೆಳವಣಿಗೆ ದಾಖಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ,2020 ರ ಡಿಸೆಂಬರ್ ತಿಂಗಳಲ್ಲಿ ಒಟ್ಟು 7,487 ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ 2019 ರ ಡಿಸೆಂಬರ್ ತಿಂಗಳ ಸಗಟು ಮಾರಾಟಕ್ಕೆ ಹೋಲಿಸಿದರೆ ಶೇ 14ರಷ್ಟು  ಬೆಳವಣಿಗೆ ದಾಖಲಿಸಿದೆ.

ಕಂಪೆನಿಯು ಸಗಟು ಮಾರಾಟದಲ್ಲಿ 2020 ರ ಕೊನೆಯ ತ್ರೈಮಾಸಿಕದಲ್ಲಿ ಕಳೆದ ವರ್ಷದ ಇದೇ ಅವಧಿಗೆ ಶೇ 6 ಬೆಳವಣಿಗೆಯನ್ನು ದಾಖಲಿಸಿದೆ. 2019 ರ ಡಿಸೆಂಬರ್ ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 6, 544 ವಾಹನಗಳನ್ನು ಮಾರಾಟ ಮಾಡಿರುವುದಾಗಿ ಕಂಪೆನಿ ತಿಳಿಸಿದೆ.


Stay up to date on all the latest ವಾಣಿಜ್ಯ news
Poll
Rahul gandhi

ಕಾಂಗ್ರೆಸ್‌ನಲ್ಲಿನ ಯುವ, ಕ್ರಿಯಾಶೀಲ ನಾಯಕರಿಂದ ರಾಹುಲ್ ಗಾಂಧಿಗೆ ಅಭದ್ರತೆ ಕಾಡುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp