ಭಾರತದ ಆರ್ಥಿಕತೆ 2020-21 ರಲ್ಲಿ ಶೇ.9.6 ರಷ್ಟು ಕುಸಿತ: ವಿಶ್ವ ಬ್ಯಾಂಕ್

ಕೊರೋನಾದಿಂದ ತೀವ್ರವಾಗಿ ಕುಸಿತ ಕಂಡಿದ್ದ ಭಾರತದ ಆರ್ಥಿಕತೆ ಬಗ್ಗೆ ವಿಶ್ವ ಬ್ಯಾಂಕ್ ವರದಿ ಪ್ರಕಟಿಸಿದೆ.

Published: 06th January 2021 01:47 AM  |   Last Updated: 06th January 2021 12:32 PM   |  A+A-


Representational image. (Express Illustration)

ಭಾರತದ ಆರ್ಥಿಕತೆ 2020-21 ರಲ್ಲಿ ಶೇ.9.6 ರಷ್ಟು ಕುಸಿತ: ವಿಶ್ವ ಬ್ಯಾಂಕ್

Posted By : Srinivas Rao BV
Source : The New Indian Express

ವಾಷಿಂಗ್ ಟನ್: ಕೊರೋನಾದಿಂದ ತೀವ್ರವಾಗಿ ಕುಸಿತ ಕಂಡಿದ್ದ ಭಾರತದ ಆರ್ಥಿಕತೆ ಬಗ್ಗೆ ವಿಶ್ವ ಬ್ಯಾಂಕ್ ವರದಿ ಪ್ರಕಟಿಸಿದೆ.

ಮನೆಗಳಲ್ಲಿ ಖರ್ಚು ಮಾಡುವುದು ಹಾಗೂ ಖಾಸಗಿ ಹೂಡಿಕೆಗಳು ಕುಗ್ಗಿದ ಪರಿಣಾಮ 2020-21 ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.9.6 ರಷ್ಟು ಕುಸಿಯಲಿದ್ದು,  2021 ರಲ್ಲಿ ಆರ್ಥಿಕ ಬೆಳವಣಿಗೆ ಶೇ.5.4 ರಷ್ಟು ಇರಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.

ಜಾಗತಿಕ ಆರ್ಥಿಕ ನೋಟದ ವರದಿಯಲ್ಲಿ, ಒಟ್ಟಾರೆ ಉದ್ಯೋಗಗಳ ಪೈಕಿ 4 ಅಥವಾ 5 ರಷ್ಟನ್ನು ಹೊಂದಿರುವ ಅನೌಪಚಾರಿಕ ವಲಯಗಳ ಆದಾಯಕ್ಕೆ ಕೋವಿಡ್-19 ನಿಂದಾಗಿ ಭಾರಿ ಹೊಡೆತ ಬಿದ್ದಿದ್ದು

ಭಾರತದಲ್ಲಿ ಆರ್ಥಿಕತೆ ಕುಸಿತ ಕಾಣುತ್ತಿದ್ದಾಗಲೇ ಪ್ಯಾಂಡಮಿಕ್ ಸಹ ಎದುರಾಯ್ತು, ಪರಿಣಾಮವಾಗಿ ಮನೆಗಳಲ್ಲಿ ಖರ್ಚು ಮಾಡುವುದು ಹಾಗೂ ಖಾಸಗಿ ಹೂಡಿಕೆಗಳು ಮತ್ತಷ್ಟು ಕ್ಷೀಣಿಸಿತು. ಇದರ ಪರಿಣಾಮವಾಗಿ 2020-21 ರ ಆರ್ಥಿಕತೆಯಲ್ಲಿ ಶೇ.9.6 ರಷ್ಟು ಕುಸಿತ ಕಾಣಲಿದೆ ಎಂದು ಹೇಳಿದೆ.

ಆದರೆ ಬೆಳವಣಿಗೆ ಶೇ.5.4 ರಷ್ಟು ದಾಖಲಾಗಿ ಸಣ್ಣ ಪ್ರಮಾಣದ ಚೇತರಿಕೆ ದಾಖಲಾಗಿದೆ ಎಂದು ವಿಶ್ವ ಬ್ಯಾಂಕ್ ವಿಶ್ವಾಸ ವ್ಯಕ್ತಪಡಿಸಿದೆ.

Stay up to date on all the latest ವಾಣಿಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp