ಯುಪಿಎ ಅವಧಿಯಲ್ಲಿ ಎನ್ ಡಿಎ ಅವಧಿಗಿಂತಲೂ ಎನ್ ಪಿಎ 3 ಪಟ್ಟು ಹೆಚ್ಚು!

ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯ 6 ವರ್ಷಗಳಲ್ಲಿ ವಸೂಲಾಗದ ಸಾಲ (ಎನ್ ಪಿಎ) ಯುಪಿಎ ಯ 6 ವರ್ಷಗಳ ಅವಧಿಗಿಂತ ಶೇ.365 ರಷ್ಟು ಏರಿಕೆಯಾಗಿದೆ. 

Published: 11th January 2021 10:58 AM  |   Last Updated: 11th January 2021 12:30 PM   |  A+A-


RBI

ಆರ್ ಬಿಐ

Posted By : Srinivas Rao BV
Source : The New Indian Express

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತಾವಧಿಯ 6 ವರ್ಷಗಳಲ್ಲಿ ವಸೂಲಾಗದ ಸಾಲ (ಎನ್ ಪಿಎ) ಯುಪಿಎ ಯ 6 ವರ್ಷಗಳ ಅವಧಿಗಿಂತ ಶೇ.365 ರಷ್ಟು ಏರಿಕೆಯಾಗಿದೆ. 

ಆರ್ ಬಿಐ ವಸೂಲಾಗದ ಸಾಲ (ಎನ್ ಪಿಎ) ಕುರಿತ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ಮೋದಿ ಸರ್ಕಾರದಲ್ಲಿ ಎನ್ ಪಿಎ ಗಳು ಯುಪಿಎ ಅವಧಿಗಿಂತಲೂ 3 ಪಟ್ಟು ಹೆಚ್ಚಾಗಿದೆ ಎಂದು ತಿಳಿದುಬಂದಿದೆ. 

ಕಳೆದ 12 ವರ್ಷಗಳ ಬ್ಯಾಂಕಿಂಗ್ ಡಾಟಾ ಪರಿಶೀಲನೆ ನಡೆಸಿದ್ದು, ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ವಸೂಲಾಗದ ಸಾಲಗಳನ್ನು ಬರ್ಖಾಸ್ತು ಮಾಡಿರುವ ಪ್ರಮಾಣವೂ ಏರಿಕೆಯಾಗಿದ್ದು, 2008-14 ಕ್ಕೆ ಹೋಲಿಕೆ ಮಾಡಿದರೆ 2014-20 ಅವಧಿಯಲ್ಲಿ ಇದು 21 ಪಟ್ಟು ಏರಿಕೆಯಾಗಿದೆ. 

2008-09 ರಿಂದ 2013-14 ಅವಧಿಯ ಯುಪಿಎ ಆಡಳಿತಾವಧಿಯಲ್ಲಿ 5 ಲಕ್ಷ ಕೋಟಿ ಇದ್ದ ಪಿಎಸ್ ಬಿಗಳ ಎನ್ ಪಿಎ ಮೋದಿ ಸರ್ಕಾರದ 2014-15 ರಿಂದ 2019-20 ರ ಅವಧಿಯಲ್ಲಿ 18.28 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ 

ಕಳೆದ 6 ವರ್ಷಗಳಲ್ಲಿ ಪಿಎಸ್ ಬಿ ಗಳು 6,83,388 ಕೋಟಿ  ರೂಪಾಯಿ ಮೌಲ್ಯದ ವಸೂಲಾಗದ ಸಾಲವನ್ನು ಬರ್ಖಾಸ್ತುಗೊಳಿಸಲಾಗಿದೆ. 2008-2014 ರ ಅವಧಿಯಲ್ಲಿ 32,109 ಕೋಟಿ ರೂಪಾಯಿ ಮೌಲ್ಯದ ವಸೂಲಾಗದ ಸಾಲವನ್ನು ಬ್ಯಾಲೆನ್ಸ್ ಶೀಟ್ ಗಳಿಂದ ಹೊರಗೆ ಇಡಲಾಗಿದೆ.

ಬ್ಯಾಲೆನ್ಸ್ ಶೀಟ್ ನ್ನು ಸ್ವಚ್ಛವಾಗಿಡುವುದಕ್ಕಾಗಿ ಈ ರೀತಿ ಎನ್ ಪಿಎ ಗಳನ್ನು ಹೊರಗಿಡಲಾಗುತ್ತದೆಯಷ್ಟೇ ಆದರೆ ವಸೂಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಸಾಲ ಮಾಡಿರುವವರಿಗೆ ಮರುಪಾವತಿ ಮಾಡುವ ಹೊಣೆಗಾರಿಯೂ ಇದ್ದೇ ಇರುತ್ತದೆ. 

Stay up to date on all the latest ವಾಣಿಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp