ಆಭರಣ ಖರೀದಿಗೆ ಹೊಸ ಕೆವೈಸಿ ಮಾನದಂಡಗಳಿಲ್ಲ: ವಿತ್ತ ಸಚಿವಾಲಯ ಸ್ಪಷ್ಟನೆ

ಚಿನ್ನ, ಬೆಳ್ಳಿ ಅಥವಾ ಅಮೂಲ್ಯ ರತ್ನಗಳು ಮತ್ತು ಇತರೆ ಆಭರಣ ಹರಳುಗಳನಗದು ಖರೀದಿಗೆ ಯಾವುದೇ ಹೊಸ ಕೆವೈಸಿ ಪ್ರಕಟಿಸುವುದು ಕಡ್ಡಾಯವಾಗಿಲ್ಲ, ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳಿಗೆ ಮಾತ್ರ ಆದಾಯ ತೆರಿಗೆ ಪ್ಯಾನ್ ಅಥವಾ ಬಯೋಮೆಟ್ರಿಕ್ ಐಡಿ ಆಧಾರ್‌ನಂತಹ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುತ್ತದೆ ಎಂದು ಹಣಕಾಸು ಸಚಿವಾಲಯ ಮೂಲಗಳು ತಿಳಿಸಿವೆ.

Published: 11th January 2021 08:34 PM  |   Last Updated: 11th January 2021 08:34 PM   |  A+A-


Posted By : Raghavendra Adiga
Source : PTI

ನವದೆಹಲಿ: ಚಿನ್ನ, ಬೆಳ್ಳಿ ಅಥವಾ ಅಮೂಲ್ಯ ರತ್ನಗಳು ಮತ್ತು ಇತರೆ ಆಭರಣ ಹರಳುಗಳನಗದು ಖರೀದಿಗೆ ಯಾವುದೇ ಹೊಸ ಕೆವೈಸಿ ಪ್ರಕಟಿಸುವುದು ಕಡ್ಡಾಯವಾಗಿಲ್ಲ, ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳಿಗೆ ಮಾತ್ರ ಆದಾಯ ತೆರಿಗೆ ಪ್ಯಾನ್ ಅಥವಾ ಬಯೋಮೆಟ್ರಿಕ್ ಐಡಿ ಆಧಾರ್‌ನಂತಹ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುತ್ತದೆ ಎಂದು ಹಣಕಾಸು ಸಚಿವಾಲಯ ಮೂಲಗಳು ತಿಳಿಸಿವೆ.

2020 ರ ಡಿಸೆಂಬರ್ 28 ರ ಅಧಿಸೂಚನೆಯ ಸಂಬಂಧ ಸ್ಪಷ್ಟನೆ ನಿಡಿರುವಸಚಿವಾಲಯದ ಕಂದಾಯ ಇಲಾಖೆಯು ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ಕೆವೈಸಿ ಇಲ್ಲದೆ ಆಭರಣ ಬೆಳ್ಳಿ ಹಾಗೂ ಮೂಲ್ಯ ರತ್ನಗಳು ಮತ್ತು 2 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಅಮೂಲ್ಯ ಹರಳುಗಳನ್ನು ಖರೀದಿಸಲು ಅನುಮತಿಸುವುದಿಲ್ಲ ಎಂದು ಹೇಳಲಾಗಿದ್ದು ಈ ನಿಯಮ ಯಥಾವತ್ ಹಾಗೆಯೇ ಮುಂದುವರಿಯಲಿದೆ.

ಡಿಸೆಂಬರ್ 28 ರಂದು ಪಿಎಂಎಲ್ ಕಾಯ್ದೆ ಅಡಿಯಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ 'ನಗದು ವಹಿವಾಟಿನಲ್ಲಿ' ಚಿನ್ನ, ಬೆಳ್ಳಿ, ಆಭರಣ ಅಥವಾ ಅಮೂಲ್ಯವಾದ ಹರಳುಗಳನ್ನು ಖರೀದಿಸುವ ವ್ಯಕ್ತಿಗಳು ಅಥವಾ ಘಟಕಗಳು ಕೆವೈಸಿ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಹೇಳಿದೆ. ಇದು ಎಫ್‌ಎಟಿಎಫ್ (ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್) ನ ಅವಶ್ಯಕತೆಯಾಗಿದೆ

ಎಫ್‌ಎಟಿಎಫ್ ಅಂತರ್-ಸರ್ಕಾರಿ ಸಂಸ್ಥೆಯಾಗಿದ್ದು, ಭಯೋತ್ಪಾದನೆಗೆ ಧನಸಹಾಯ ಮತ್ತು ಹಣ ವರ್ಗಾವಣೆಯ ಮೇಲಿನ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವ ಉದ್ದೇಶದಿಂದ ಅಂತರರಾಷ್ಟ್ರೀಯ ಮಾನದಂಡಗಳನ್ನು ನಿಗದಿಪಡಿಸಲಿದೆ.ಭಾರತ 2010 ರಿಂದ ಎಫ್‌ಎಟಿಎಫ್ ಸದಸ್ಯ ರಾಷ್ಟ್ರವಾಗಿದೆ. ಭಾರತದಲ್ಲಿ, ಕೆವೈಸಿ ಇಲ್ಲದೆ 2 ಲಕ್ಷ ರೂ.ಗಿಂತ ಹೆಚ್ಚಿನ ಆಭರಣಗಳನ್ನು ಖರೀದಿಸಲು ಅನುಮತಿಸಲಾಗುವುದಿಲ್ಲ, ಆದ್ದರಿಂದ ಈ ಅಧಿಸೂಚನೆಯಡಿಯಲ್ಲಿ ಯಾವುದೇ ಹೊಸ ವಿಭಾಗವನ್ನು ರಚಿಸಿಲ್ಲ ಆದರೆ, ಇದನ್ನು ಎಫ್‌ಎಟಿಎಫ್ ಅಡಿಯಲ್ಲಿ ಪೂರೈಸುವ ಅವಶ್ಯಕತೆಯಿದೆ ಎಂದು ಅವರು ಹೇಳಿದರು. ಅಧಿಸೂಚನೆಯ ಮೂಲಕ ಬಹಿರಂಗಪಡಿಸಲು ಯಾವುದೇ ಹೊಸ ವಿಭಾಗವನ್ನು ರಚಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

Stay up to date on all the latest ವಾಣಿಜ್ಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp