ಖಾಸಗಿತನ, ಗೌಪ್ಯತೆಯಲ್ಲಿ ದೋಷ: ವಾಟ್ಸಾಪ್ ಮೆಸೆಜ್ ಆಪ್ ವಿರುದ್ಧ ಆಕ್ರೋಶ, ಸಿಗ್ನಲ್, ಟೆಲಿಗ್ರಾಮ್ ನತ್ತ ಜನರ ಒಲವು
ವಾಟ್ಸಾಪ್ ನ ಹಲವು ಖಾಸಗಿ ಗ್ರೂಪ್ ಇನ್ವೈಟ್ ಲಿಂಕ್ ಗಳು ಮತ್ತು ಮೆಂಬರ್ ಪ್ರೊಫೈಲ್ ಗಳು ಗೂಗಲ್ ಸರ್ಚ್ ಎಂಜಿನ್ ಗಳಲ್ಲಿ ಸುಲಭವಾಗಿ ಲಭ್ಯವಾಗುತ್ತಿವೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಕೆ ನೀಡಿದ್ದು ಫೇಸ್ ಬುಕ್ ಒಡೆತನದ ಮೆಸೆಜಿಂಗ ಸರ್ವಿಸ್ ವಾಟ್ಸಾಪ್ ತೀವ್ರ ವಿವಾದ ಉಂಟಾಗಿದೆ.
Published: 12th January 2021 02:05 PM | Last Updated: 12th January 2021 02:05 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ವಾಟ್ಸಾಪ್ ನ ಹಲವು ಖಾಸಗಿ ಗ್ರೂಪ್ ಇನ್ವೈಟ್ ಲಿಂಕ್ ಗಳು ಮತ್ತು ಮೆಂಬರ್ ಪ್ರೊಫೈಲ್ ಗಳು ಗೂಗಲ್ ಸರ್ಚ್ ಎಂಜಿನ್ ಗಳಲ್ಲಿ ಸುಲಭವಾಗಿ ಲಭ್ಯವಾಗುತ್ತಿವೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಕೆ ನೀಡಿದ್ದು ಫೇಸ್ ಬುಕ್ ಒಡೆತನದ ಮೆಸೆಜಿಂಗ ಸರ್ವಿಸ್ ವಾಟ್ಸಾಪ್ ತೀವ್ರ ವಿವಾದ ಉಂಟಾಗಿದೆ.
ವಾಟ್ಸಾಪ್ ನಲ್ಲಿ ಈ ರೀತಿ ಮಾಹಿತಿ ಸೋರಿಕೆಯಾಗುವುದರಿಂದ ಹಲವು ಅನಗತ್ಯ ಬಳಕೆದಾರರನ್ನು ವಾಟ್ಸಾಪ್ ಗ್ರೂಪ್ ಗೆ ಸೇರಿಸಲಾಗುತ್ತದೆ ಮತ್ತು ಅನಗತ್ಯ ಮಾಹಿತಿಗಳು ಕೂಡ ಸೇರ್ಪಡೆಯಾಗುತ್ತವೆ ಎಂದು ಎಚ್ಚರಿಕೆ ನೀಡಿದ ಮೇಲೆ ವಾಟ್ಸಾಪ್ ನ ಲೋಪದೋಷವನ್ನು ಸರಿಪಡಿಸಲಾಯಿತು.
ವಾಟ್ಸಾಪ್ ನ ನವೀಕರಿಸಿದ ನೀತಿಯು ಗೌಪ್ಯತೆ ಕಾಳಜಿಗಳ ಮೇಲೆ ಭಾರತದಲ್ಲಿ ಹೆಚ್ಚುತ್ತಿರುವ ಟೀಕೆಗಳನ್ನು ಹುಟ್ಟುಹಾಕಿದ್ದು, ಕೆಲವು ಕಂಪನಿಯ ಸಿಇಒಗಳು ಮತ್ತು ವ್ಯಾಪಾರಿ ಸಂಸ್ಥೆಗಳು ತಮ್ಮ ಸದಸ್ಯರು ಮತ್ತು ಉದ್ಯೋಗಿಗಳನ್ನು ವಾಟ್ಸಾಪ್ ನಿಂದ ದೂರವುಳಿದು ಪರ್ಯಾಯ ಬಳಕೆ ಮಾಡುವಂತೆ ಸೂಚಿಸಿದ್ದಾರೆ. ಟೆಸ್ನ ಸಿಇಒ ಎಲೊನ್ ಮಸ್ಕ್ ಟ್ವೀಟ್ ಮಾಡಿ ವಾಟ್ಸಾಪ್ ಬದಲಿಗೆ ಮತ್ತೊಂದು ಸಂದೇಶ ಆಪ್ ಸಿಗ್ನಲ್ ಬಳಸುವಂತೆ ಸೂಚಿಸಿದ್ದಾರೆ. ವಾಟ್ಸಾಪ್, ಫೇಸ್ ಬುಕ್ ಭಾರತದಲ್ಲಿ ತನ್ನ ಏಕಸ್ವಾಮ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಪೆಟಿಎಂ ಸಿಇಒ ವಿಜಯ್ ಶೇಖರ್ ಶರ್ಮ, ಲಕ್ಷಾಂತರ ಬಳಕೆದಾರರ ಗೌಪ್ಯತೆಯನ್ನು ಕಿತ್ತುಕೊಳ್ಳುತ್ತಿವೆ ಎಂದು ಆರೋಪಿಸಿದ್ದಾರೆ.
ವ್ಯಾಪಾರ ಸಂಘವಾದ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಕೇಂದ್ರಕ್ಕೆ ಪತ್ರ ಬರೆದಿದ್ದು, ಫೇಸ್ಬುಕ್ ಮತ್ತು ವಾಟ್ಸಾಪ್ ಅನ್ನು ನಿಷೇಧಿಸಬೇಕು ಅಥವಾ ಕಂಪನಿಯು ತನ್ನ ಹೊಸ ನಿಯಮಗಳನ್ನು ರೂಪಿಸುವುದನ್ನು ತಡೆಯುವ ಕಟ್ಟುನಿಟ್ಟಾದ ನೀತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದೆ.ವಾಟ್ಸಾಪ್ ಬಳಸುತ್ತಿರುವ ವ್ಯಕ್ತಿಯ ಎಲ್ಲಾ ರೀತಿಯ ವೈಯಕ್ತಿಕ ಡೇಟಾ, ಪಾವತಿ ವ್ಯವಹಾರಗಳು, ಸಂಪರ್ಕಗಳು, ಸ್ಥಳ ಮತ್ತು ಇತರ ಪ್ರಮುಖ ಮಾಹಿತಿಯನ್ನು ಸ್ವಾಧೀನಪಡಿಸಿಕೊಂಡು ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳಬಹುದು ಎಂದು ಹೇಳಿದೆ ಎಂದು ಸಿಎಐಟಿ ಆರೋಪಿಸಿದೆ.
ನಿನ್ನೆ ಮಾರುಕಟ್ಟೆಯಲ್ಲಿ ವಾಟ್ಸಾಪ್ ಗೆ ಬದಲಾಗಿ ಸಿಗ್ನಲ್ ಮತ್ತು ಟೆಲಿಗ್ರಾಮ್ ಆಪ್ ಸ್ಟೋರ್ ಗಳಿಗೆ ಬೇಡಿಕೆ ಹೆಚ್ಚು ಕಂಡುಬಂತು.