
ಜಿಯೋ
ನವದೆಹಲಿ: ರಿಲಯನ್ಸ್ ಜಿಯೋ ಹೊಸ ವರ್ಷದಲ್ಲಿ ಗ್ರಾಹಕರನ್ನು ಸೆಳೆಯಲು ಹೊಸ ಬಗೆಯ ರಿಚಾರ್ಜ್ ಪ್ಲ್ಯಾನ್ ಗಳ ಕೊಡುಗೆ ಪ್ರಕಟಿಸಿದೆ.
ಇದರಲ್ಲಿ 444 ರೂಪಾಯಿ ಪ್ಲ್ಯಾನ್ ನಲ್ಲಿ ದಿನಂಪ್ರತಿ 2ಜಿಡಾಟಾ ಉಪಯೋಗಿ ಸಬಹುದಾಗಿದೆ ಎಂದು ಜಿಯೋ ತಿಳಿಸಿದ್ದು, ಇದು ಇತರ ಖಾಸಗಿ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಬಹಳ ಕಡಿಮೆ ಬೆಲೆಯದ್ದಾಗಿದೆ ಎಂದೂ ತಿಳಿಸಿದೆ.
ರಿಲಯನ್ಸ್ 444 ರೂಪಾಯಿ ಪ್ಲ್ಯಾನ್: 56 ದಿನಗಳ ವ್ಯಾಲಿಡಿಟಿಯಿರಲಿದೆ. ಜೊತೆಗೆ ಪ್ರತಿ ದಿನ 2 ಜಿಬಿ ದಿನಂಪ್ರತಿಗ್ರಾಹಕರು 56 ದಿನಗಳಲ್ಲಿ ಒಟ್ಟು 112 ಜಿಬಿ ಡಾಟಾ ಬಳಸಬಹುದಾಗಿದೆ.
444 ರೂಪಾಯಿ ರಿಚಾರ್ಜ್ ಮಾಡಿದಲ್ಲಿ ಗ್ರಾಹಕರು ಅನಿಯಮಿತ ವಾಯ್ಸ್ ಕರೆಗಳನ್ನು ಜಿಯೋ ನೆಟ್ ವರ್ಕ್ ಹೊರತುಪಡಿಸಿಯೂ ಮಾಡಬಹುದಾಗಿದೆ.