ದೆಹಲಿಯಲ್ಲಿ ಪೆಟ್ರೋಲ್ ಬೆಲೆ 85 ರೂಪಾಯಿಗೆ ಏರಿಕೆ, ಮುಂಬೈ ನಲ್ಲಿ ಪ್ರತಿ ಲೀಟರ್ ಗೆ 92 ರೂಪಾಯಿ!
ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 85 ರೂಪಾಯಿಗಳಷ್ಟಾಗಿದ್ದರೆ, ವಾಣಿಜ್ಯ ನಗರಿ ಮುಂಬೈ ನಲ್ಲಿ 92 ರೂಪಾಯಿಗಳಿಗೆ ಏರಿಕೆಯಾಗಿದೆ.
Published: 19th January 2021 03:48 PM | Last Updated: 19th January 2021 03:55 PM | A+A A-

ದೆಹಲಿಯಲ್ಲಿ ಪೆಟ್ರೋಲ್ ಬೆಲೆ 85 ರೂಪಾಯಿಗೆ ಏರಿಕೆ, ಮುಂಬೈ ನಲ್ಲಿ ಪ್ರತಿ ಲೀಟರ್ ಗೆ 92 ರೂಪಾಯಿ!
ನವದೆಹಲಿ: ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 85 ರೂಪಾಯಿಗಳಷ್ಟಾಗಿದ್ದರೆ, ವಾಣಿಜ್ಯ ನಗರಿ ಮುಂಬೈ ನಲ್ಲಿ 92 ರೂಪಾಯಿಗಳಿಗೆ ಏರಿಕೆಯಾಗಿದೆ.
ಸತತ ಎರಡನೇ ದಿನದ ತೈಲ ಬೆಲೆ ಏರಿಕೆಯ ಪರಿಣಾಮವಾಗಿ ಈ ರೀತಿಯ ಏರಿಕೆ ದಾಖಲಾಗಿದೆ.
ಪೆಟ್ರೋಲ್ ಹಾಗೂ ಡಿಸೆಲ್ ಬೆಲೆ ಸತತ ಎರಡನೇ ದಿನ ತಲಾ 25 ಪೈಸೆಯಷ್ಟು ಏರಿಕೆಯಾಗಿದೆ. ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಡೀಸಲ್ ದರ ಪ್ರತಿ ಲೀಟರ್ ಗೆ 75.38 ರೂಪಾಯಿಗಳಷ್ಟಾಗಿದ್ದರೆ, ಮುಂಬೈ ನಲ್ಲಿ ಡಿಸೆಲ್ ದರ 82.13 ರೂಪಾಯಿಗಳಿಗೆ ಏರಿಕೆಯಾಗಿದೆ.
ಜ.18 ರಂದು ಪೆಟ್ರೋಲ್ ಡಿಸೆಲ್ ದರ ತಲಾ 25 ಪೈಸೆಯಷ್ಟು ಏರಿಕೆಯಾಗಿದ್ದವು. ಮುಂಬೈ ನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿದ್ದರೆ, ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ ಸಾರ್ವಕಾಲಿಕ ದಾಖಲೆಯ ಏರಿಕೆ ಕಂಡಿದೆ.