ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆ: 50 ಸಾವಿರ ಗಡಿ ದಾಟಿ ಮುನ್ನುಗ್ಗಿದ ಸೆನ್ಸೆಕ್ಸ್, ನಿಫ್ಟಿ ಏರಿಕೆ 

ಕೋವಿಡ್-19 ಲಾಕ್ ಡೌನ್, ಸ್ಥಬ್ದಗೊಂಡಿದ್ದ ಚಟುವಟಿಕೆಗಳು ಹೊಸ ವರ್ಷ 2021ರ ಆರಂಭದಲ್ಲಿ ನಿಧಾನವಾಗಿ ಪುನರಾರಂಭವಾಗುತ್ತಿದೆ. ಈ ಮಧ್ಯೆ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಕೂಡ ಏರಿಕೆಯಾಗುತ್ತಿದೆ.

Published: 21st January 2021 09:59 AM  |   Last Updated: 21st January 2021 10:25 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ಮುಂಬೈ: ಕೋವಿಡ್-19 ಲಾಕ್ ಡೌನ್, ಸ್ಥಬ್ದಗೊಂಡಿದ್ದ ಚಟುವಟಿಕೆಗಳು ಹೊಸ ವರ್ಷ 2021ರ ಆರಂಭದಲ್ಲಿ ನಿಧಾನವಾಗಿ ಪುನರಾರಂಭವಾಗುತ್ತಿದೆ. ಈ ಮಧ್ಯೆ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಕೂಡ ಏರಿಕೆಯಾಗುತ್ತಿದೆ.

ಇಂದು ಬೆಳಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 50 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇಂದು ಬೆಳಗ್ಗೆ 9.30ಕ್ಕೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆ 300ಕ್ಕೂ ಹೆಚ್ಚು ಅಂಕಗಳಷ್ಟು ಏರಿಕೆಯಾಗಿ ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿದೆ. 

ಪ್ರಮುಖ ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಮತ್ತು ಐಸಿಐಸಿಐ ಬ್ಯಾಂಕ್ ನ ಷೇರುಗಳು ಇಂದು ಉತ್ತಮ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಸುತ್ತಿವೆ. ಇವುಗಳ ಸಂವೇದಿ ಸೂಚ್ಯಂಕ ಏರುಗತಿಯಲ್ಲಿವೆ. 

ಮುಂಬೈ ಷೇರು ಮಾರುಕಟ್ಟೆಯ ಇಂದು ಬೆಳಗಿನ ಆರಂಭಿಕ ವಹಿವಾಟಿನಲ್ಲಿ 300.09 ಅಂಕಗಳಷ್ಟು ಏರಿಕೆಯಾಗಿ 50 ಸಾವಿರದ 126.73ಕ್ಕೆ ಸೂಚ್ಯಂಕ ತಲುಪಿತು. ಬೆಳಗಿನ ಆರಂಭ ವಹಿವಾಟಿನಲ್ಲಿ ಶೇಕಡಾ 0.60 ಶೇಕಡಾದಷ್ಟು ಏರಿಕೆಯಾಗಿ 50 ಸಾವಿರದ 092.21ರಷ್ಟಾಗಿತ್ತು. 

ನಿಫ್ಟಿ ಸಹ 85.40 ಅಂಕ ಅಥವಾ ಶೇಕಡಾ 0.58ರಷ್ಟು ಏರಿಕೆಯಾಗಿ 14 ಸಾವಿರದ 730ರಲ್ಲಿ ವಹಿವಾಟು ನಡೆಸುತ್ತಿದೆ. 
ಇಂದಿನ ವಹಿವಾಟಿನಲ್ಲಿ ಬಜಾಜ್ ಫಿಸರ್ವ್ ಅತಿ ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ಶೇಕಡಾ 4ರಷ್ಟು, ನಂತರ ಬಜಾಜ್ ಫೈನಾನ್ಸ್, ರಿಲಯನ್ಸ್ ಇಂಡಸ್ಟ್ರೀಸ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ ಗಳ ಷೇರುಗಳು ಮಾರಾಟವಾಗುತ್ತಿವೆ.

ಇತ್ತೀಚಿನ ವರದಿ ಬಂದಾಗ ಮುಂಬೈ ಷೇರು ಮಾರುಕಟ್ಟೆಯ ಸೆನ್ಸೆಕ್ಸ್ 50 ಸಾವಿರದ 056.10ರಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 14 ಸಾವಿರದ 719.60ರಲ್ಲಿ ವಹಿವಾಟು ನಡೆಸುತ್ತಿತ್ತು. ಈ ಮಧ್ಯೆ, ಜಾಗತಿಕ ಕಚ್ಚಾತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇಕಡಾ 0.30ರಷ್ಟು ಏರಿಕೆಯಾಗಿದ್ದು ಪ್ರತಿ ಬ್ಯಾರಲ್ ಗೆ 55.91 ಡಾಲರ್ ಆಗಿದೆ. 

Stay up to date on all the latest ವಾಣಿಜ್ಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp