ಗಗನಕ್ಕೇರಿದ ಪೆಟ್ರೋಲ್ ಬೆಲೆ: ದೆಹಲಿಯಲ್ಲಿ 85 ರೂ., ಮುಂಬೈನಲ್ಲಿ 92 ರೂ.; ಬೆಂಗಳೂರಿನಲ್ಲಿ ಎಷ್ಟು ಗೊತ್ತೆ?
ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 25 ಪೈಸೆ ಹೆಚ್ಚಿಸಿದ್ದು ಮುಂಬೈನಲ್ಲಿ ಡೀಸೆಲ್ ಬೆಲೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
Published: 22nd January 2021 06:12 PM | Last Updated: 22nd January 2021 06:22 PM | A+A A-

ಸಂಗ್ರಹ ಚಿತ್ರ
ನವದೆಹಲಿ: ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 25 ಪೈಸೆ ಹೆಚ್ಚಿಸಿದ್ದು ಮುಂಬೈನಲ್ಲಿ ಡೀಸೆಲ್ ಬೆಲೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.
25 ಪೈಸೆ ಏರಿಕೆಯೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತೀ ಲೀಟರ್ ಗೆ 85.45 ರೂ.ಗೆ ತಲುಪಿದೆ. ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 92.04 ರೂಪಾಯಿಗೆ ಏರಿಕೆಯಾಗಿದೆ.
ಇದೇ ವೇಳೆ ಡೀಸೆಲ್ ಬೆಲೆಯಲ್ಲೂ 25 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ 75.63 ರೂಪಾಯಿಗೆ ತಲುಪಿದೆ. ಇನ್ನು ಮುಂಬೈನಲ್ಲಿ ಡೀಸೆಲ್ ಸಾರ್ವಕಾಲಿಕ ದಾಖಲೆಯ 82.40 ರುಪಾಯಿಗೆ ತಲುಪಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಬೆಲೆ 88.33 ರುಪಾಯಿಗೆ ತಲುಪಿದ್ದು ಡೀಸೆಲ್ ಬೆಲೆ 80.20 ರುಪಾಯಿಗೆ ಏರಿಕೆಯಾಗಿದೆ.