ಆಗ್ರಾ-ಬೆಂಗಳೂರು ನಡುವೆ ಮಾರ್ಚ್ ನಿಂದ ಇಂಡಿಗೋ ವಿಮಾನ ಸಂಚಾರ
ಪ್ರಾದೇಶಿಕ ಸಂಪರ್ಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂಡಿಗೋ ವಿಮಾನ ಸಂಸ್ಥೆ ತನ್ನ 64 ನೇ ದೇಶೀಯ ವಿಮಾನವನ್ನು ಘೋಷಿಸಿದ್ದು ಆಗ್ರಾ- ಬೆಂಗಳೂರು ಹಾಗೂ ಭೋಪಾಲ್ ನ್ನು ನೇರವಾಗಿ ಸಂಪರ್ಕಿಸುವ ವಿಮಾನ ಸೇವೆಗಳಿಗೆ ಮಾ.28 ರಿಂದ ಚಾಲನೆ ನೀಡುವುದಾಗಿ ಘೋಷಿಸಿದೆ.
Published: 23rd January 2021 05:43 PM | Last Updated: 23rd January 2021 06:33 PM | A+A A-

ಇಂಡಿಗೋ ಏರ್ಲೈನ್ಸ್ (ಸಂಗ್ರಹ ಚಿತ್ರ)
ನವದೆಹಲಿ: ಪ್ರಾದೇಶಿಕ ಸಂಪರ್ಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂಡಿಗೋ ವಿಮಾನ ಸಂಸ್ಥೆ ತನ್ನ 64 ನೇ ದೇಶೀಯ ವಿಮಾನವನ್ನು ಘೋಷಿಸಿದ್ದು ಆಗ್ರಾ- ಬೆಂಗಳೂರು ಹಾಗೂ ಭೋಪಾಲ್ ನ್ನು ನೇರವಾಗಿ ಸಂಪರ್ಕಿಸುವ ವಿಮಾನ ಸೇವೆಗಳಿಗೆ ಮಾ.28 ರಿಂದ ಚಾಲನೆ ನೀಡುವುದಾಗಿ ಘೋಷಿಸಿದೆ.
ಇದಿಷ್ಟೇ ಅಲ್ಲದೇ ರಾಜ್ಯದಿಂದ ಗೋವಾಗೆ ವಾರಕ್ಕೊಮ್ಮೆ ವಿಮಾನ ಸೇವೆಗಳನ್ನು ಒದಗಿಸುವ ಯೋಜನೆ ಫೆಬ್ರವರಿ ತಿಂಗಳಿನಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಭೋಪಾಲ್ ಗೆ ವಿಮಾನ ಸೇವೆಗಳಿಗೆ ಈಗಾಗಲೇ ಏಕಮುಕಖ ಸಂಚಾರ ಬುಕಿಂಗ್ ಪ್ರಾರಂಭಗೊಂಡಿದ್ದು, 2,523 ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದರೆ ಬೆಂಗಳೂರಿಗೆ 3,789 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.
ಇಂಡಿಗೋ ಸಂಸ್ಥೆಯ ರೆವೆನ್ಯೂ ಅಧಿಕಾರಿ ಹಾಗೂ ಮುಖ್ಯ ಕಾರ್ಯತಂತ್ರದ ಅಧಿಕಾರಿ ಸಂಜಯ್ ಕುಮಾರ್ ಈ ಬಗ್ಗೆ ಮಾತನಾಡಿದ್ದು, 6E ನೆಟ್ವರ್ಕ್ ಅಡಿಯಲ್ಲಿ ಗೋಲ್ಡನ್ ಟ್ರಯಾಂಗಲ್ ಸಿಟಿಗಳನ್ನು ಸಂಪರ್ಕಿಸುವ ಯೋಜನೆಯನ್ನು ಘೋಷಿಸಲಾಗುತ್ತಿದೆ. ಇದರಿಂದ ಕೇವಲ ದೇಶೀಯ ವಿಮಾನಯಾನ ಉತ್ತೇಜನಗೊಳ್ಳುವುದಷ್ಟೇ ಅಲ್ಲದೇ ಆಗ್ರಾ ಹಲವು ಪಾರಂಪರಿಕ ತಾಣಗಳ ನಗರಿಯಾಗಿರುವುದರಿಂದ ಅಂತಾರಾಷ್ಟ್ರೀಯ ವಿಮಾನಯಾನವೂ ಉತ್ತಮಗೊಳ್ಳುವುದಕ್ಕೆ ಅವಕಾಶ ಒದಗಿಸಲಿದೆ ಎಂದು ಹೇಳಿದ್ದಾರೆ.