ಈ ವರ್ಷ ಪೇಪರ್ ಲೆಸ್ ಬಜೆಟ್, ಮಾಹಿತಿಗಾಗಿ ಮೊಬೈಲ್ ಆ್ಯಪ್” ಬಿಡುಗಡೆ ಮಾಡಿದ ನಿರ್ಮಲಾ ಸೀತಾರಾಮನ್

2021-22 ನೇ ಸಾಲಿನ ಕೇಂದ್ರ ಆಯವ್ಯಯದ ಅಂತಿಮ ಹಂತದ ರೂಪುರೇಷೆ ಸಿಹಿ ಹಲ್ವಾ ಸಮಾರಂಭದೊಂದಿಗೆ ಪ್ರಾರಂಭವಾಯಿತು.

Published: 23rd January 2021 07:08 PM  |   Last Updated: 29th January 2021 06:06 PM   |  A+A-


halwa1

ಹಲ್ವಾ ಸಮಾರಂಭ

Posted By : Lingaraj Badiger
Source : UNI

ನವದೆಹಲಿ: 2021-22 ನೇ ಸಾಲಿನ ಕೇಂದ್ರ ಆಯವ್ಯಯದ ಅಂತಿಮ ಹಂತದ ರೂಪುರೇಷೆ ಸಿಹಿ ಹಲ್ವಾ ಸಮಾರಂಭದೊಂದಿಗೆ ಪ್ರಾರಂಭವಾಯಿತು.

ನಾರ್ಥ್ ಬ್ಲಾಕ್ ನಲ್ಲಿ ಇಂದು ಮಧ್ಯಾಹ್ನ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅಂತಿಮ ಹಂತದ ಸಮಾರಂಭಕ್ಕೆ ಚಾಲನೆ ನೀಡಿದರು.

ಕೇಂದ್ರ ಬಜೆಟ್ ನ ಲಾಕ್ ಇನ್ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಪ್ರತಿವರ್ಷ ಸಾಂಪ್ರದಾಯಿಕ ಸಿಹಿ ಸಮಾರಂಭವನ್ನು ನಡೆಸಲಾಗುತ್ತದೆ.

ಬಜೆಟ್ ಅನ್ನು ಇದೇ ಮೊದಲ ಬಾರಿಗೆ ಕಾಗದರಹಿತವಾಗಿ ಮಂಡಿಸುತ್ತಿರುವುದು ವಿಶೇಷವಾಗಿದ್ದು, ಫೆಬ್ರವರಿ 1 ರಂದು ಆಯವ್ಯಯ ಮಂಡನೆಯಾಗುತ್ತಿದೆ.

ಡಿಜಿಟಲ್ ಆಡಳಿತದ ಅನುಕೂಲತೆಗಳನ್ನು ಬಳಸಿಕೊಂಡು ಸಂಸತ್ ಸದಸ್ಯರಿಗೆ[ಎಂ.ಪಿ] ಮತ್ತು ಸಾಮಾನ್ಯ ಜನರಿಗೆ ಬಜೆಟ್ ನ ದಾಖಲೆಗಳು ತಾಕಲಾಟವಿಲ್ಲದೇ ಸುಗಮವಾಗಿ ದೊರಕಿಸಿಕೊಡಲು “ಕೇಂದ್ರ ಬಜೆಟ್ ನ ಮೊಬೈಲ್ ಆ್ಯಪ್ “ ಅನ್ನು ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆ ಮಾಡಿದರು. 

ಈ ಮೊಬೈಲ್ ಆ್ಯಪ್ ನಲ್ಲಿ ನಲ್ಲಿ 14 ಕೇಂದ್ರ ಬಜೆಟ್ ಗಳ ದಾಖಲೆಗಳು ಸಹ ಲಭ‍್ಯವಿದ್ದು, ಇದರಲ್ಲಿ ವಾರ್ಷಿಕ ಹಣಕಾಸು ದಾಖಲೆಗಳು[ಸಾಮಾನ್ಯವಾಗಿ ಕರೆಯಲ್ಪಡುವ ಆಯವ್ಯಯ], ಪೂರಕ ಬೇಡಿಕೆಗಳು, ಹಣಕಾಸು ಮಸೂದೆಗಳು,, ಸಂವಿಧಾನಬದ್ಧ ದಾಖಲೆಗಳು, ಮತ್ತಿತರ ಮಾಹಿತಿಗಳು ದೊರೆಯಲಿವೆ.

ಈ ಮೊಬೈಲ್ ಆ್ಯಪ್ ಬಳಕೆ ಸ್ನೇಹಿಯಾಗಿದ್ದು, ಮುದ್ರಣ, ಹುಡುಕಾಟ, ಜೂಮ್ ಇನ್ ಮತ್ತು ಜೂಮ್ ಔಟ್, ದ್ವಿಮುಖ ಸ್ಕ್ರೋಲಿಂಗ್, ವಿಷಯಗಳ ಪಟ್ಟಿ ಮತ್ತು ಬಾಹ್ಯ ಲಿಂಕ್ ಇತ್ಯಾದಿ ವೈಶಿಷ್ಟ್ಯಗಳೊಂದಿಗೆ ಕೂಡಿದೆ. ಈ ಆ್ಯಪ್ ದ್ವಿಭಾಷಿಯಾಗಿದೆ [ಇಂಗ್ಲಿಷ್ ಮತ್ತು ಹಿಂದಿ] ಮತ್ತು ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್ ಫಾರ್ಮ್ ಗಳಲ್ಲಿ ಇದು ಲಭ್ಯವಿದೆ. ಈ ಆ್ಯಪ್ ಅನ್ನು ಕೇಂದ್ರ ಬಜೆಟ್ ನ ವೆಬ್ ಪೋರ್ಟಲ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. (www.indiabudget.gov.in). ಆರ್ಥಿಕ ವ್ಯವಹಾರಗಳ ಇಲಾಖೆಯ [ಡಿ.ಇ.ಎ] ಮಾರ್ಗದರ್ಶನದಲ್ಲಿ ನ್ಯಾಷನಲ್ ಇನ್ಫಾರ್ಮೇಟಿಕ್ಸ್ ಸೆಂಟರ್ [ಎನ್.ಐ.ಸಿ] ಈ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ. 

2021ರ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಹಣಕಾಸು ಸಚಿವರು ಬಜೆಟ್ ಭಾಷಣ ಪೂರ್ಣಗೊಳಿಸಿದ ನಂತರ ಮೊಬೈಲ್ ಆ್ಯಪ್ ನಲ್ಲಿ ಬಜೆಟ್ ದಾಖಲೆಗಳು ಲಭ್ಯವಾಗಲಿದೆ. 

ಹಲ್ವಾ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವರ ಜತೆ ಹಣಕಾಸು ಮತ್ತು ಕಾರ್ಪೋರೆಟ್ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಹಣಕಾಸು ಕಾರ್ಯದರ್ಶಿ[ಕಂದಾಯ] ಡಾ. ಎ..ಬಿ. ಪಾಂಡೆ, ವೆಚ್ಚಗಳ ವಿಭಾಗದ ಕಾರ್ಯದರ್ಶಿ ಟಿ.ವಿ. ಸೋಮನಾಥನ್, ಹಣಕಾಸು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ತರುಣ್ ಬಜಾಜ್, ಡಿ..ಐ.ಪಿ.ಎ.ಎಂ ನ ಕಾರ್ಯದರ್ಶಿ ತುಹಿನ್ ಕಾಂತ ಪಾಂಡೆ, ಹಣಕಾಸು ಸೇವೆಗಳ ಕಾರ್ಯದರ್ಶಿ ದೇಬಶಿಶ್ ಪಾಂಡೆ, ಮುಖ್ಯ ಆರ್ಥಿಕ ಸಲಹೆಗಾರ ಡಾ. ಕೆ.ವಿ. ಸುಬ್ರಮಣ್ಯನ್, ಹೆಚ್ಚುವರಿ ಕಾರ್ಯದರ್ಶಿ [ಬಜೆಟ್] ರಜತ್ ಕುಮಾರ್ ಮಿಶ್ರಾ ಹಾಗೂ ಮತ್ತಿತತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕ್ರಮೇಣ ಕೇಂದ್ರ ಹಣಕಾಸು ಸಚಿವರು 2021-22 ನೇ ಸಾಲಿನ ಕೇಂದ್ರ ಬಜೆಟ್ ನ ಸಂಕಲನದ ಸ್ಥಿತಿಯನ್ನು ಪರಾಮರ್ಶಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸಿದರು.


Stay up to date on all the latest ವಾಣಿಜ್ಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp