ಜಿಯೋಮಾರ್ಟ್‌ನಿಂದ “ಫುಲ್‌ ಪೈಸಾ ವಸೂಲ್‌” ಆರಂಭ

ರಿಲಯನ್ಸ್‌ ರಿಟೇಲ್‌ ದಿನಸಿ ಮಳಿಗೆಯು ತನ್ನ ಬಹುನಿರೀಕ್ಷಿತ ಮೆಗಾ ಸೇಲ್‌ ಫೆಸ್ಟಿವಲ್‌ ಫುಲ್‌ ಪೈಸಾ ವಸೂಲ್‌ ಸೇಲ್ (ಎಫ್‌ಪಿವಿಎಸ್‌) ಅನ್ನು ಜನವರಿ 23 ರಿಂದ 26 ರ ವರೆಗೆ ನಡೆಸಲಿದೆ. 

Published: 24th January 2021 12:40 PM  |   Last Updated: 24th January 2021 12:40 PM   |  A+A-


JioMart Full Paisa Vasool Sale 2021: India’s Biggest Grocery Sale Offers & Discounts

ಜಿಯೋಮಾರ್ಟ್‌ನಿಂದ “ಫುಲ್‌ ಪೈಸಾ ವಸೂಲ್‌” ಆರಂಭ

Posted By : Srinivas Rao BV
Source : UNI

ಮುಂಬೈ: ರಿಲಯನ್ಸ್‌ ರಿಟೇಲ್‌ ದಿನಸಿ ಮಳಿಗೆಯು ತನ್ನ ಬಹುನಿರೀಕ್ಷಿತ ಮೆಗಾ ಸೇಲ್‌ ಫೆಸ್ಟಿವಲ್‌ ಫುಲ್‌ ಪೈಸಾ ವಸೂಲ್‌ ಸೇಲ್ (ಎಫ್‌ಪಿವಿಎಸ್‌) ಅನ್ನು ಜನವರಿ 23 ರಿಂದ 26 ರ ವರೆಗೆ ನಡೆಸಲಿದೆ. 

ಕಂಪನಿಯ ಹೊಸ ಮತ್ತು ಆಕರ್ಷಕ ಡಿಜಿಟಲ್‌ ಪ್ಲಾಟ್‌ಫಾರಂ ಜಿಯೋಮಾರ್ಟ್‌ ಈ ಸೇಲ್‌ನಲ್ಲಿ ಮುಂಚೂಣಿಯಲ್ಲಿರಲಿದ್ದು, ಸ್ಮಾರ್ಟ್ ಸೂಪರ್ ಸ್ಟೋರ್‌ ಗಳು, ಸ್ಮಾರ್ಟ್‌ ಪಾಯಿಂಟ್‌ ಮತ್ತು ರಿಲಾಯನ್ಸ್‌ ಫ್ರೆಶ್‌ ನಲ್ಲೂ ಈ ಸೇಲ್‌ ನಡೆಯಲಿದೆ. 

ಜಿಯೋಮಾರ್ಟ್‌, ರಿಲಯನ್ಸ್‌ ಫ್ರೆಶ್‌ ಮತ್ತು ರಿಲಯನ್ಸ್‌ ಸ್ಮಾರ್ಟ್ ಸ್ಟೋರ್‌ಗಳಲ್ಲಿ ದಿನಸಿ ಸಾಮಗ್ರಿಗಳು, ಪ್ಯಾಕೇಜ್ಡ್‌ ಆಹಾರ, ಮನೆ ಮತ್ತು ವೈಯಕ್ತಿಕ ಆರೈಕೆ ಸಾಮಗ್ರಿಗಳು, ಹಣ್ಣು ಮತ್ತು ತರಕಾರಿಗಳು, ಡೈರಿ, ಸಾಮಾನ್ಯ ಸಾಮಗ್ರಿಗಳು ಮತ್ತು ಉಡುಪಿನ ಮೇಲೆ “ಫುಲ್‌ ಪೈಸಾ ವಸೂಲ್‌ ಸೇಲ್ಸ್‌ 2021” ಭಾರಿ ರಿಯಾಯಿತಿಗಳನ್ನು ನೀಡಲಿದೆ. ಇದರ ಜೊತೆಗೆ, ಜಿಯೋಮಾರ್ಟ್‌ ನಲ್ಲಿ ಶಾಪಿಂಗ್‌ ಮಾಡುವ ಗ್ರಾಹಕರಿಗೆ ಮನೆಗೆ ಉಚಿತವಾಗಿ ಯಾವುದೇ ಕನಿಷ್ಠ ಶಾಪಿಂಗ್‌ ಮಿತಿ ಇಲ್ಲದೇ ಡೆಲಿವರಿ ಮಾಡಲಾಗುತ್ತದೆ.

ವಿಶಿಷ್ಟ ಮತ್ತು ನವೀನ ಜಾಹೀರಾತು ಕ್ಯಾಂಪೇನ್‌ ಗಳಿಗೆ ಎಫ್‌ಪಿವಿಎಸ್‌ ಫೆಸ್ಟಿವಲ್‌ ಹೆಸರಾಗಿದೆ. ಈ ಹಿಂದಿನ ಆವೃತ್ತಿಯಲ್ಲಿ, ಎಫ್‌ಪಿವಿಎಸ್‌ ಅಂಬಾಸಿಡರ್ ಜೀನಿ ಅನ್ನು ಪರಿಚಯಿಸಲಾಗಿತ್ತು. ಗ್ರಾಹಕರಿಗೆ ಮನರಂಜನೆಯನ್ನು ಒದಗಿಸುತ್ತಲೇ ಕೊಡುಗೆಗಳನ್ನೂ ಇದು ಒದಗಿಸುತ್ತಿತ್ತು. ರಿಲಯನ್ಸ್‌ ರಿಟೇಲ್‌ ಪರವಾಗಿ ಜನಪ್ರಿಯ ಮಹಿಳಾ ಸೆಲೆಬ್ರಿಟಿ ರಶ್ಮಿ ದೇಸಾಯಿ ಮತ್ತು ಜೀನಿ ಇರಲಿದ್ದು, ಅವರು ಎಲ್ಲ 13 ಟಿವಿಸಿಗಳು ಮತ್ತು ಡಿಜಿಟಲ್‌ ಕಂಟೆಂಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಾಂಡ್‌ನ 360 ಡಿಗ್ರಿ ಕ್ಯಾಂಪೇನ್‌ ಟಿವಿಸಿಗಳನ್ನು ಒಳಗೊಂಡಿರುತ್ತದೆ ಮತ್ತು ಫೇಸ್‌ಬುಕ್‌ ಮತ್ತು ಇನ್‌ ಸ್ಟಾಗ್ರಾಮ್‌ ನಂತಹ ಸಾಮಾಜಿಕ ಮಾಧ್ಯಮಗಳಲ್ಲೂ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ. ಸಂವಹನದ ಧ್ವನಿಯು ಅತಿ ಲಘು, ಖುಷಿ ಮತ್ತು ಸ್ನೇಹಪರವಾಗಿರುತ್ತದೆ. ಜ.18 ರಿಂದ ಕ್ಯಾಂಪೇನ್ ಆರಂಭವಾಗಲಿದ್ದು, ಸೇಲ್‌ ಫೆಸ್ಟಿವಲ್‌ನ ಕೊನೆಯ ದಿನ ಜನವರಿ 26ರ ವರೆಗೆ ನಡೆಯಲಿದೆ.


Stay up to date on all the latest ವಾಣಿಜ್ಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp