100, 10 ಹಾಗೂ 5 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವುದಿಲ್ಲ: ಆರ್‌ಬಿಐ ಸ್ಪಷ್ಟನೆ

ಕೇಂದ್ರ ಸರ್ಕಾರ 100, 10 ಹಾಗೂ 5 ರೂ. ಮೊತ್ತದ ಹಳೆಯ ನೋಟುಗಳನ್ನು ಹಿಂಪಡೆಯಲಿದೆ ಎಂಬ ವದಂತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ತೆರೆ ಎಳೆದಿದೆ. 

Published: 25th January 2021 05:23 PM  |   Last Updated: 25th January 2021 05:23 PM   |  A+A-


Representation purpose only

ಸಂಗ್ರಹ ಚಿತ್ರ

Posted By : Vishwanath S
Source : UNI

ನವದೆಹಲಿ: ಕೇಂದ್ರ ಸರ್ಕಾರ 100, 10 ಹಾಗೂ 5 ರೂ. ಮೊತ್ತದ ಹಳೆಯ ನೋಟುಗಳನ್ನು ಹಿಂಪಡೆಯಲಿದೆ ಎಂಬ ವದಂತಿಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ ತೆರೆ ಎಳೆದಿದೆ. 

ಈ ಕುರಿತು ತಮ್ಮ ಟ್ವೀಟ್‌ನಲ್ಲಿ ಸ್ಪಷ್ಟನೆ ನೀಡಿರುವ ಆರ್‌ಬಿಐ, "100, 10 ಹಾಗೂ 5 ರೂ. ಮೊತ್ತದ ಹಳೆಯ ನೋಟಿನ ಸರಣಿಯನ್ನು ರದ್ದುಗೊಳಿಸುವ ಕುರಿತು ಮಾಧ್ಯಮ ವರದಿಗಳು ಸತ್ಯಕ್ಕೆ ದೂರವಾದವು ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ" ಎಂದಿದೆ.

2016ರಲ್ಲಿ ಕೇಂದ್ರ ಸರ್ಕಾರ ಚಾಲ್ತಿಯಲ್ಲಿದ್ದ 1000 ಹಾಗೂ 500 ರೂ. ನೋಟುಗಳನ್ನು ರದ್ದುಗೊಳಿಸಿದ ಮಾದರಿಯಲ್ಲೇ 100,50 ಹಾಗೂ 10 ರೂ. ಮೊತ್ತದ ನೋಟುಗಳನ್ನು ಹಿಂಪಡೆಯಲಿದೆ ಎಂಬ ವದಂತಿಗಳು ಕೆಳ ದಿನಗಳಿಂದ ಸದ್ದು ಮಾಡುತ್ತಿದ್ದವು.
 

Stay up to date on all the latest ವಾಣಿಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp