ಬಜೆಟ್ 2021: ಪರೋಕ್ಷ ತೆರಿಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ

6.5 ಲಕ್ಷ ಕೋಟಿ ಆದಾಯ ಕೊರತೆಯ ಮುನ್ನೋಟದಿಂದಾಗಿ ಅಬಕಾರಿ ಸುಂಕ, ಸೆಸ್ ಸೇರಿದಂತೆ ಪರೋಕ್ಷ ತೆರಿಗೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

Published: 27th January 2021 11:27 AM  |   Last Updated: 29th January 2021 06:05 PM   |  A+A-


Casual_Images1

ಸಾಂದರ್ಭಿಕ ಚಿತ್ರ

Posted By : Nagaraja AB
Source : The New Indian Express

ನವದೆಹಲಿ: 6.5 ಲಕ್ಷ ಕೋಟಿ ಆದಾಯ ಕೊರತೆಯ ಮುನ್ನೋಟದಿಂದಾಗಿ ಅಬಕಾರಿ ಸುಂಕ, ಸೆಸ್ ಸೇರಿದಂತೆ ಪರೋಕ್ಷ ತೆರಿಗೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ತೆರಿಗೆ ಸಂಗ್ರಹವು ಹೆಚ್ಚಿಲ್ಲ ಮತ್ತು ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಟ್ರೆಂಡ್ ನಲ್ಲಿ ಮಹತ್ವದ ಪುನಶ್ಚೇತನ ನೋಡಿಲ್ಲ. ನೇರ ತೆರಿಗೆ ಹೆಚ್ಚಿಸುವುದೇ ಇದಕ್ಕಿರುವ ಮಾರ್ಗ.ಆದರೆ, ತೆರಿಗೆ ಸ್ಲಾಬ್ಸ್ ನಲ್ಲಿ ಯಾವುದೇ ಹೆಚ್ಚಳನ್ನು ಹಣಕಾಸು ಸಚಿವಾಲಯ ತಳ್ಳಿ ಹಾಕಿದೆ. 

ಆದಾಗ್ಯೂ, ನಷ್ಟವನ್ನು ಸರಿದೂಗಿಸಲು ಪರೋಕ್ಷ ತೆರಿಗೆ ಹೆಚ್ಚಿಸಬಹುದು, ಹೊಸ ಸೆಸ್, ಕೆಲ ಸುಂಕಗಳಲ್ಲಿ ಹೆಚ್ಚಳವಾಗಬಹುದು ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಮದು ಸುಂಕದಲ್ಲಿ ಹೆಚ್ಚಳವನ್ನು ನಾವು  ನಿರೀಕ್ಷಿಸಬಹುದು, ಇದನ್ನು ಸರ್ಕಾರದ ಆತ್ಮನಿರ್ಭರ ಭಾರತ್ ಉಪಕ್ರಮಕ್ಕೆ  ಹೊಂದಿಸಲಾಗುವುದು ಮತ್ತು ಸುಂಕ ಹೆಚ್ಚಳವಾಗುವಂತಹ ವಸ್ತುಗಳ ಕಿರುಪಟ್ಟಿಯನ್ನು ಈಗಾಗಲೇ ಮಾಡಲಾಗಿದೆ.  ಸರ್ಕಾರವು ಅನೇಕ ವಸ್ತುಗಳ ಆಮದು ಸುಂಕವನ್ನು ಹೆಚ್ಚಿಸಿದೆ ಮತ್ತು ಈಗ ಕೆಲವು ವಸ್ತುಗಳ ಮೇಲೆ ಹೊಸ ಸುಂಕ ವಿಧಿಸಬಹುದು. ಇದಲ್ಲದೆ, ಕೋವಿಡ್ -19 ಸೆಸ್ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದಾಗ್ಯೂ, ಕೊನೆ ಕ್ಷಣದಲ್ಲಿ ಬದಲಾವಣೆಯಾಗಬಹುದು ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹ ಮತ್ತು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದರಿಂದ ಬರುವ ಆದಾಯವು, ಅಂದಾಜು ಬಜೆಟ್  ಗುರಿ 6.5 ಲಕ್ಷ ಕೋಟಿ ರೂ. ಗಳಿಂದ ಕಡಿಮೆಯಾಗುವ ಸಾಧ್ಯತೆಯಿದೆ.

ಜಿಟಿಎಸ್ ವ್ಯವಸ್ಥೆ ಹಾಗೂ ತೆರಿಗೆ ಸಂಗ್ರಹವನ್ನು ಕಠಿಣಗೊಳಿಸಲಾಗುವುದು, ಆದ್ಗರಿಂದ ಆದಾಯ ಕೊರತೆಯಾಗದಂತೆ ನೋಡಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಜನವರಿ 29 ರಿಂದ ಏಪ್ರಿಲ್ 8ರವರೆಗೆ ಬಜೆಟ್  ಅಧಿವೇಶನ ನಡೆಯಲಿದ್ದು, ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ.

Stay up to date on all the latest ವಾಣಿಜ್ಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp