ಕೃಷಿ ಕಾನೂನುಗಳು ಮಾರುಕಟ್ಟೆ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿ: ಆರ್ಥಿಕ ಸಮೀಕ್ಷೆ

ಸರ್ಕಾರದ ವಾರ್ಷಿಕ ಆರ್ಥಿಕ ಸಮೀಕ್ಷೆಯು ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ಬಲವಾಗಿ ಸಮರ್ಥಿಸಿಕೊಂಡಿದೆ, ಇದು ಮಾರುಕಟ್ಟೆಯ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿಯಾಗಲಿದೆ ಇದು ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನವನ್ನು ಸುಧಾರಿಸುವಲ್ಲಿ ದೀರ್ಘಕಾಲೀನ ಪರಿಹಾರವಾಗಿದೆ ಎಂದು ಹೇಳಿದೆ.
ಕೃಷಿ ಕಾನೂನುಗಳು ಮಾರುಕಟ್ಟೆ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿ: ಆರ್ಥಿಕ ಸಮೀಕ್ಷೆ

ನವದೆಹಲಿ: ಸರ್ಕಾರದ ವಾರ್ಷಿಕ ಆರ್ಥಿಕ ಸಮೀಕ್ಷೆಯು ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ಬಲವಾಗಿ ಸಮರ್ಥಿಸಿಕೊಂಡಿದೆ, ಇದು ಮಾರುಕಟ್ಟೆಯ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿಯಾಗಲಿದೆ ಇದು ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನವನ್ನು ಸುಧಾರಿಸುವಲ್ಲಿ ದೀರ್ಘಕಾಲೀನ ಪರಿಹಾರವಾಗಿದೆ ಎಂದು ಹೇಳಿದೆ.

ಈ ಕಾಯ್ದೆಗಳನ್ನು "ಪ್ರಾಥಮಿಕವಾಗಿ" "ಸಣ್ಣ ಮತ್ತು ಅತಿಸಣ್ಣ ರೈತರ" ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ, ಇದು ಒಟ್ಟೂ ರೈತರ ಸಂಖ್ಯೆಯ ಶೇ.85ರಷ್ಟು ಪಾಲು ಹೊಂದಿದೆ, ಹಾಗಾಗಿ ಅವರನ್ನು "ಹಿಂಜರಿತ" ಎಪಿಎಂಸಿ-ನಿಯಂತ್ರಿತ ಮಾರುಕಟ್ಟೆ ಆಡಳಿತದ ಕಷ್ಟದಿಂದ ಬಿಡುಗಡೆಗೊಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಈ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕೋರಿ ರಾಷ್ಟ್ರ ರಾಜಧಾನಿಯ ವಿವಿಧ ಗಡಿಗಳಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೃಷಿ ಕಾನೂನುಗಳನ್ನು ಬಜೆಟ್ ಪೂರ್ವದ ದಾಖಲೆಗಳು ಸಮರ್ಥಿಸಿರುವುದುಗಮನಾರ್ಹ ಅಂಶ. "ಹಲವಾರು ಆರ್ಥಿಕ ಸಮೀಕ್ಷೆಗಳು ಎಪಿಎಂಸಿಗಳ ಕಾರ್ಯನಿರ್ವಹಣೆಯ ಬಗ್ಗೆ ಮತ್ತು ಅವು ಏಕಸ್ವಾಮ್ಯವನ್ನು ಸ್ಥಾಪಿಸುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ನಿರ್ದಿಷ್ಟವಾಗಿ, 2011-12, 2012-13, 2013-14, 2014-15, 2016-17, 2019-20 ವರ್ಷಗಳ ಆರ್ಥಿಕ ಸಮೀಕ್ಷೆಗಳು ಈ ಸಂದರ್ಭದಲ್ಲಿ ಅಗತ್ಯವಿರುವ ಸುಧಾರಣೆಗಳ ಮೇಲೆ ಕೇಂದ್ರೀಕರಿಸಿದೆ "ಎಂದು ಸಮೀಕ್ಷೆ ತಿಳಿಸಿದೆ. ಎಂ ಎಸ್ ಸ್ವಾಮಿನಾಥನ್ ಅವರ ಅಧ್ಯಕ್ಷತೆಯ ರೈತರ ರಾಷ್ಟ್ರೀಯ ಆಯೋಗ ಮತ್ತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ ಉದ್ಯೋಗಾವಕಾಶಗಳ ಕಾರ್ಯಪಡೆ ಸೇರಿದಂತೆ 2001 ರಿಂದ ಕೃಷಿ ಮಾರುಕಟ್ಟೆ ಸುಧಾರಣೆಗಳ ಕುರಿತು ಮಾಡಿದ ಶಿಫಾರಸುಗಳನ್ನು ಇದು ಎತ್ತಿ ತೋರಿಸಿದೆ

ಕೃಷಿ ಉತ್ಪನ್ನಗಳ ಮಾರಾಟದ ಸಲಹೆಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಸಂಸ್ಕರಣಾ ಕಾರ್ಖಾನೆ ಅಥವಾ ಖಾಸಗಿ ವಲಯಕ್ಕೆ ಮಾರಾಟ ಮಾಡಲು ಆಯ್ಕೆ ಮಾಡುವ ಅಗತ್ಯತೆ, ಕೃಷಿ ಮಾರುಕಟ್ಟೆ ಮೂಲಸೌಕರ್ಯಗಳ ಅಭಿವೃದ್ಧಿ, ರಾಜ್ಯ ಎಪಿಎಂಸಿ ಕಾಯಿದೆಗಳ ತಿದ್ದುಪಡಿ ಮತ್ತು ಅಗತ್ಯ ಸರಕುಗಳ ತಡೆರಹಿತ ಸಂಗ್ರಹಣೆ ಮತ್ತು ಕೃಷಿ ಸರಕುಗಳ ವರ್ಗಾವಣೆ  ಕಾಯ್ದೆಸೇರಿವೆ. ರೈತರ ಉತ್ಪಾದನೆ, ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, 2020, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ, 2020 ರ ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ 2020ರ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 ಸಂಸತ್ತಿನಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಅಂಗೀಕಾರವಾದ ಪ್ರಮುಖ ಮೂರು ಕಾಯ್ದೆಗಳಾಗಿದೆ. 

"ಹೊಸದಾಗಿ ಪರಿಚಯಿಸಲಾದ ಕೃಷಿ ಕಾನೂನುಗಳು ಮಾರುಕಟ್ಟೆಯ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿಯಾಗಲಿದೆ. ಇದು ಭಾರತದಲ್ಲಿ ರೈತ ಕಲ್ಯಾಣ ಸುಧಾರಣೆಯಲ್ಲಿ ಸುದೀರ್ಘ ಪರಿಣಾಮವನ್ನು ಬೀರಬಹುದು" ಎಂದು ಸಮೀಕ್ಷೆ ತಿಳಿಸಿದೆ. ಹೊಸ ಕೃಷಿ ಕಾನೂನುಗಳ ಪ್ರಯೋಜನಗಳನ್ನು ಎತ್ತಿ ತೋರಿಸುತ್ತಾ, ಭಾರತದಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಲ್ಲಿ ವಿವಿಧ ನಿರ್ಬಂಧಗಳಿಂದ ಬಸವಳಿದಿದ್ದಾರೆ.ಧಿಸೂಚಿತ ಎಪಿಎಂಸಿ ಮಾರುಕಟ್ಟೆ ಅಂಗಣದ ಹೊರಗೆ ಗೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ನಿರ್ಬಂಧಗಳಿವೆ. ರೈತರು ಉತ್ಪನ್ನಗಳನ್ನು ರಾಜ್ಯ ಸರ್ಕಾರಗಳ ನೋಂದಾಯಿತ ಪರವಾನಗಿದಾರರಿಗೆ ಮಾತ್ರ ಮಾರಾಟ ಮಾಡಲು ಹೇಳಲಾಗಿದೆ. ಇದಲ್ಲದೆ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ವಿವಿಧ ಎಪಿಎಂಸಿ ಶಾಸನಗಳ ಪ್ರತಿಫಲವಾಗಿ ವಿವಿಧ ರಾಜ್ಯಗಳ ನಡುವೆ ಕೃಷಿ ಉತ್ಪನ್ನಗಳ ಮುಕ್ತ ಹರಿವಿನಲ್ಲಿ ಅಡೆತಡೆಗಳಿದೆ. ಎಪಿಎಂಸಿ ನಿಯಮಗಳು ಹಲವಾರು "ಅಸಮರ್ಥ" ನಿಯಮಗಳಿಂದ ಕೂಡಿ ರೈತರಿಗೆ ನಷ್ಟವನ್ನುಂಟುಮಾಡಿದೆ" ಎಂದು  ಸಮೀಕ್ಷೆ ಹೇಳಿದೆ.

"ರೈತರು ಮತ್ತು ಅಂತಿಮ ಗ್ರಾಹಕರ ನಡುವೆ ಅನೇಕ ಮಧ್ಯವರ್ತಿಗಳ ಉಪಸ್ಥಿತಿಯು ರೈತರ ಕಡಿಮೆ ಆದಾಯಕ್ಕೆ ಕಾರಣವಾಗಿದೆ. ಎಪಿಎಂಸಿಗಳು ವಿಧಿಸುವ ದೊಡ್ಡ ಪ್ರಮಾಣದ ತೆರಿಗೆಗಳು ಮತ್ತು ಸೆಸ್ ಗಳು ರೈತರಿಗೆ ದೊರಕುವ ಆದಾಯಕ್ಕೆ ಕಡಿವಾಣ ಹಾಕುತ್ತವೆ, ಆದರೆ ಒಂದು ಸಣ್ಣ ಪ್ರಮಾಣವನ್ನು ಮಾತ್ರ ಮಂಡಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ. ಮಂಡಿಗಳಲ್ಲಿನ  ಮೂಲಸೌಕರ್ಯವು ರೈತರಿಗೆ ಆದಾಯದ ಸಮಸ್ಯೆಯನ್ನು ಹೆಚ್ಚಿಸುತ್ತದೆ" ಸಮೀಕ್ಷೆ ಹೇಳಿದೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com