ಫೆ.1ಕ್ಕೆ ಕೇಂದ್ರ ಬಜೆಟ್ ಮಂಡನೆ: ಉದ್ಯೋಗ ನಷ್ಟ, ಹೂಡಿಕೆಗಳ ಕೊರತೆ, ಹಣದುಬ್ಬರ ಹೆಚ್ಚಳ ಪ್ರಮುಖ ಸವಾಲುಗಳು

ನಾಡಿದ್ದು ಫೆಬ್ರವರಿ 1ರಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಸಾಮಾನ್ಯವಾಗಿ ಬಜೆಟ್ ಮಂಡನೆಗೆ ಮುನ್ನ ದೇಶದ ಆರ್ಥಿಕ ಸ್ಥಿತಿಗತಿ, ಸವಾಲುಗಳ ಬಗ್ಗೆ ಚರ್ಚೆಯಾಗುತ್ತವೆ.
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್

ನವದೆಹಲಿ: ನಾಡಿದ್ದು ಫೆಬ್ರವರಿ 1ರಂದು ಲೋಕಸಭೆಯಲ್ಲಿ ಕೇಂದ್ರ ಬಜೆಟ್ ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಸಾಮಾನ್ಯವಾಗಿ ಬಜೆಟ್ ಮಂಡನೆಗೆ ಮುನ್ನ ದೇಶದ ಆರ್ಥಿಕ ಸ್ಥಿತಿಗತಿ, ಸವಾಲುಗಳ ಬಗ್ಗೆ ಚರ್ಚೆಯಾಗುತ್ತವೆ.

ಈ ಬಾರಿ ಕೋವಿಡ್-19ನಿಂದ ಆರ್ಥಿಕ ಸ್ಥಿತಿ ನಮ್ಮ ದೇಶದ್ದು ತೀವ್ರ ಹದಗೆಟ್ಟಿದೆ. ಈ ವರ್ಷ ಬಜೆಟ್ ಮಂಡನೆ ಸಂದರ್ಭದಲ್ಲಿ ಮೂರು ಮುಖ್ಯ ಸವಾಲುಗಳು ಎದುರಾಗಿವೆ ಎನ್ನುತ್ತಾರೆ ಆರ್ಥಿಕ ತಜ್ಞರು. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ, ರಾಜ್ಯಗಳಿಂದ ಹೆಚ್ಚಿನ ವೆಚ್ಚನ ಹೊರೆ ಬರುತ್ತಿದೆ, ಕೈಗಾರಿಕೆಗಳಿಗೆ ಸರ್ಕಾರ ಹೆಚ್ಚಿನ ಸಬ್ಸಿಡಿ ನೀಡಬೇಕಾಗಿದೆ ಅಲ್ಲದೆ ಸಾಮಗ್ರಿಗಳ ಹಣದುಬ್ಬರ ಪ್ರಮುಖ ಸಮಸ್ಯೆಯಾಗಿದೆ.

ಬಂಡವಾಳ ಹೂಡಿಕೆ: ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ಚಟುವಟಿಕೆಗಳು ಈಗ ಮತ್ತೆ ಚೇತರಿಕೆಯಾಗುತ್ತಿದ್ದು ಖಾಸಗಿ ವಲಯಗಳಲ್ಲಿ ಹೂಡಿಕೆದಾರರು ಮಾರುಕಟ್ಟೆಯಲ್ಲಿ ಯಾವ ರೀತಿ ಬೇಡಿಕೆ ಹೆಚ್ಚುತ್ತಿದೆ ಎಂದು ನೋಡಿಕೊಂಡು ಸುಗಮವಾಗಿ ಹಣದ ಹರಿಯುವಿಕೆಯನ್ನು ಮಾಡಲು ನಿರ್ಧರಿಸಿದ್ದಾರೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ.

ಕಳೆದ ಡಿಸೆಂಬರ್ ಹೊತ್ತಿಗೆ ತ್ರೈಮಾಸಿಕ ಅಂತ್ಯದ ವೇಳೆಗೆ ಹೊಸ ಯೋಜನೆಗಳು ಕೇವಲ 87 ಸಾವಿರ ಕೋಟಿ ರೂಪಾಯಿಗಳಿದ್ದು ಕಳೆದ ವರ್ಷ ಮಾರ್ಚ್ ಅಂತ್ಯದ ವೇಳೆಗೆ 3.8 ಲಕ್ಷ ಕೋಟಿಯಾಗಿತ್ತು. ಪೂರ್ಣಗೊಂಡ ಯೋಜನೆಗಳ ಮೌಲ್ಯ ಕೇವಲ 61 ಸಾವಿರ ಕೋಟಿ ರೂಪಾಯಿಯಾಗಿತ್ತು. ಒಟ್ಟಾರೆ, ಬಜೆಟ್ ನಲ್ಲಿ 5ರಿಂದ 5.5 ಲಕ್ಷ ಕೋಟಿಯನ್ನು ಬಂಡವಾಳ ವೆಚ್ಚಕ್ಕೆ ವಲಯಗಳಿಗೆ ನೀಡುವ ಸಾಧ್ಯತೆಯಿದೆ. 

ಉದ್ಯೋಗ ನಷ್ಟ: ಕಳೆದೊಂದು ವರ್ಷದಿಂದ ಉತ್ಪಾದನಾ ವಲಯದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಹೆಚ್ಚಾಗಿದ್ದು ಒಟ್ಟಾರೆ ನಿರುದ್ಯೋಗ ಸಮಸ್ಯೆ ಈ ತಿಂಗಳಲ್ಲಿ ಶೇಕಡಾ 6.5ಕ್ಕೆ ಇಳಿದಿದೆ. ಡಿಸೆಂಬರ್ ತ್ರೈಮಾಸಿಕ ಕೊನೆಗೆ ಕೋವಿಡ್ ಪೂರ್ವ ಸಮಯಕ್ಕೆ ಹೋಲಿಸಿದರೆ ಉತ್ಪಾದನಾ ವಲಯದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ 11 ದಶಲಕ್ಷ ಮಂದಿ.

ಕೃಷಿ ವಲಯದಲ್ಲಿ ಮಾತ್ರ ಉದ್ಯೋಗ ಸೃಷ್ಟಿಯಾಗಿದ್ದು ನರೇಗಾ ಯೋಜನೆಯಡಿ ಡಿಸೆಂಬರ್ ಹೊತ್ತಿಗೆ 26.34 ದಶಲಕ್ಷ ಜನರು ಉದ್ಯೋಗ ಪಡೆದುಕೊಂಡಿದ್ದಾರೆ. ಈ ಪ್ರಮಾಣ 2019ರ ಡಿಸೆಂಬರ್ ಹೊತ್ತಿಗೆ ಶೇಕಡಾ 113ರಾಗಿತ್ತು.

ಹಣದುಬ್ಬರ: ಮತ್ತೊಂದು ಕೇಂದ್ರ ಸರ್ಕಾರಕ್ಕೆ ಎದುರಾಗಿರುವ ಮತ್ತೊಂದು ಬಹಳ ಮುಖ್ಯ ಸವಾಲು ಹಣದುಬ್ಬರ. ಪ್ರಪಂಚವು ಕೋವಿಡ್ ಲಾಕ್ ಡೌನ್ ಸಡಿಲಿಕೆಯಾದ ನಂತರ ತೆರೆದುಕೊಳ್ಳುತ್ತಿದ್ದಂತೆ ಸರಕುಗಳ ಬೆಲೆಗಳು ತೀವ್ರವಾಗಿ ಏರುತ್ತಿವೆ, ಚೀನಾದ ಖನಿಜಗಳ ಬೇಡಿಕೆಯ ಹೆಚ್ಚಳದಿಂದ ಹೆಚ್ಚಿನ ಪ್ರಮಾಣದಲ್ಲಿ ಇಂಧನಗೊಂಡಿದೆ, ಅವರ ಆರ್ಥಿಕತೆಯು ಸಾಂಕ್ರಾಮಿಕ ರೋಗದಿಂದ ಹೆಚ್ಚಿನದನ್ನು ಪಡೆದುಕೊಂಡಿದೆ ಎಂದು ತೋರುತ್ತದೆ.ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಆರ್ಥಿಕತೆಗಳಿಗೆ ಜಾಗತಿಕ ಹಣಕಾಸಿನ ಬೆಂಬಲವು 2020 ರ ಡಿಸೆಂಬರ್ ವೇಳೆಗೆ ಬಾಕಿ 14 ಶತಕೋಟಿ ಡಾಲರ್ ಗೆ ಏರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com