ಜಿಎಸ್ ಟಿ: 8 ತಿಂಗಳಲ್ಲಿ ಮೊದಲ ಬಾರಿಗೆ 1 ಲಕ್ಷ ಕೋಟಿ ರೂ. ಗಿಂತ ಕಡಿಮೆ; ಜೂನ್ ನಲ್ಲಿ 92 ಸಾವಿರ ಕೋಟಿ ರೂ. ಸಂಗ್ರಹ

ಸತತ 8 ತಿಂಗಳ ಕಾಲ 1 ಲಕ್ಷ ಕೋಟಿ ರೂಪಾಯಿಗಳ ವರೆಗೂ ಸಂಗ್ರಹವಾಗಿದ್ದ ಜಿಎಸ್ ಟಿ ಸಂಗ್ರಹ ಈಗ ಜೂನ್ ತಿಂಗಳಲ್ಲಿ 92,849 ಕೋಟಿ ರೂಪಾಯಿ ಸಂಗ್ರಹವಾಗಿದೆ. 
ಜಿಎಸ್ ಟಿ
ಜಿಎಸ್ ಟಿ

ನವದೆಹಲಿ: ಸತತ 8 ತಿಂಗಳ ಕಾಲ 1 ಲಕ್ಷ ಕೋಟಿ ರೂಪಾಯಿಗಳ ವರೆಗೂ ಸಂಗ್ರಹವಾಗಿದ್ದ ಜಿಎಸ್ ಟಿ ಸಂಗ್ರಹ ಈಗ ಜೂನ್ ತಿಂಗಳಲ್ಲಿ 92,849 ಕೋಟಿ ರೂಪಾಯಿ ಸಂಗ್ರಹವಾಗಿದೆ. 

ಕೊರೋನಾ ಎರಡನೇ ಅಲೆಯ ಪರಿಣಾಮ 8 ತಿಂಗಳಲ್ಲಿ ಮೊದಲ ಬಾರಿಗೆ 1 ಕೋಟಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಜಿಎಸ್ ಟಿ ಸಂಗ್ರಹವಾಗಿದೆ. 

ಹಿಂದಿನ ತಿಂಗಳಿಗಿಂತ ಕಡಿಮೆ ಇದ್ದರೂ ಕಳೆದ ವರ್ಷ ಇದೇ ತಿಂಗಳಲ್ಲಿ ಸಂಗ್ರಹವಾಗಿದ್ದ ಜಿಎಸ್ ಟಿ ಮೊತ್ತಕ್ಕಿಂತಲೂ ಶೇ.2 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. 

ಜೂನ್ ನಲ್ಲಿ ಸಂಗ್ರಹವಾದ ಜಿಎಸ್ ಟಿ ವಿವರ ಹೀಗಿದೆ...

ಸಿಜಿಎಸ್: 16,424 ಕೋಟಿ ರೂಪಾಯಿ 
ಎಸ್ ಜಿಎಸ್ ಟಿ: 20,397 ಕೋಟಿ ರೂಪಾಯಿ 
ಐಜಿಎಸ್ ಟಿ: 49,079 ಕೋಟಿ ರೂಪಾಯಿ 
ಸರಕುಗಳ ಆಮದು ಮೇಲಿನ ತೆರಿಗೆ: 25,762 ಕೋಟಿ ರೂಪಾಯಿ 
ಸೆಸ್: 6,949 ಕೋಟಿ ರೂಪಾಯಿ 

ಜೂ.5 ರಿಂದ ಜುಲೈ 5 ವರೆಗೆ ನಡೆದಿದ ದೇಶೀಯ ವಹಿವಾಟುಗಳಿಂದ ಸಂಗ್ರಹವಾದ ಜಿಎಸ್ ಟಿ ಮೊತ್ತವೂ ಇದರಲ್ಲಿ ಸೇರ್ಪಡೆಯಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಕೋವಿಡ್-19 ಎರಡನೇ ಅಲೆಯ ಹಿನ್ನೆಲೆಯಲ್ಲಿ ತೆರಿಗೆದಾರರಿಗೆ ಹಲವು ವಿನಾಯಿತಿಗಳನ್ನು ನೀಡಲಾಗಿತ್ತು. ಆದ್ದರಿಂದ ರಿಟರ್ನ್ ಫೈಲಿಂಗ್ 15 ದಿನಗಳ ಕಾಲ ವಿಳಂಬವಾಗಿದೆ. 

2021 ರ ಮೇ ತಿಂಗಳಲ್ಲಿ ಹಲವು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ಲಾಕ್ ಡೌನ್ ಆಗಿದ್ದವು. 2021 ರ ಏಪ್ರಿಲ್ ತಿಂಗಳಲ್ಲಿ ಸಲ್ಲಿಕೆಯಾಗಿದ್ದ 5.88 ಕೋಟಿ ಇ-ವೇ ಬಿಲ್ ಗಳಿಗೆ ಹೋಲಿಕೆ ಮಾಡಿದಲ್ಲಿ ಮೇ ತಿಂಗಳಲ್ಲಿ 3.99 ಕೋಟಿ ಇ-ವೇ ಬಿಲ್ ಗಳು ಸಲ್ಲಿಕೆಯಾಗಿದ್ದು ಶೇ.30 ರಷ್ಟು ಕಡಿಮೆಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com