ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂದಿನ ವರ್ಷದಿಂದ ತಿಂಗಳ ಮಿತಿಗಿಂತ ಹೆಚ್ಚು ಬಾರಿ ಎಟಿಎಂ ಬಳಕೆಗೆ ಸೇವಾ ಶುಲ್ಕ: ಪ್ರತಿ ಬಳಕೆಗೆ ರೂ. 24.78!

ಮುಂದಿನ ವರ್ಷ ಜನವರಿ 1ರಿಂದ ಎಟಿಎಂನಿಂದ ಹಣ ತೆಗೆಯುವುದಕ್ಕೆ ವಿಧಿಸುವ ಸೇವಾ ಶುಲ್ಕ ಹೆಚ್ಚಳವಾಗಲಿದೆ. ಗ್ರಾಹಕರ ಮೇಲೆ ಜಿಎಸ್ ಟಿ ಸೇರಿ ಶೇಕಡಾ 21ರವರೆಗೆ ಶುಲ್ಕವಿಧಿಸಲು ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಪ್ರಸ್ತುತ ಜಿಎಸ್ ಟಿ ಸೇರಿದಂತೆ ಶೇಕಡಾ 20ರವರೆಗೆ ಎಟಿಎಂ ಬಳಕೆಗೆ ಬ್ಯಾಂಕುಗಳು ಸೇವಾಶುಲ್ಕ ವಿಧಿಸುತ್ತವೆ.

ನವದೆಹಲಿ: ಮುಂದಿನ ವರ್ಷ ಜನವರಿ 1ರಿಂದ ಎಟಿಎಂನಿಂದ ಹಣ ತೆಗೆಯುವುದಕ್ಕೆ ವಿಧಿಸುವ ಸೇವಾ ಶುಲ್ಕ ಹೆಚ್ಚಳವಾಗಲಿದೆ. ಗ್ರಾಹಕರ ಮೇಲೆ ಜಿಎಸ್ ಟಿ ಸೇರಿ ಶೇಕಡಾ 21ರವರೆಗೆ ಶುಲ್ಕವಿಧಿಸಲು ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ. ಪ್ರಸ್ತುತ ಜಿಎಸ್ ಟಿ ಸೇರಿದಂತೆ ಶೇಕಡಾ 20ರವರೆಗೆ ಎಟಿಎಂ ಬಳಕೆಗೆ ಬ್ಯಾಂಕುಗಳು ಸೇವಾಶುಲ್ಕ ವಿಧಿಸುತ್ತವೆ.

ಅಧಿಕ ಆಂತರಿಕ ಶುಲ್ಕ(Interchange charges) ಮತ್ತು ವೆಚ್ಚಗಳಲ್ಲಿ ಸಾಮಾನ್ಯ ಏರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅದಕ್ಕೆ ಪರಿಹಾರವಾಗಿ ಬ್ಯಾಂಕುಗಳು ಎಟಿಎಂ ಬಳಕೆ ಮೇಲೆ ಸೇವಾಶುಲ್ಕವನ್ನು ಹೆಚ್ಚಿಸುತ್ತಿದೆ. ತಮ್ಮ ಮಿತಿಯೊಳಗೆ ವಿವಿಧ ಬ್ಯಾಂಕುಗಳು ವಿವಿಧ ದರಗಳನ್ನು ವಿಧಿಸುತ್ತವೆ, ಉದಾಹರಣೆಗೆ ಎಸ್ ಬಿಐ ತಿಂಗಳಿಗೆ ಗ್ರಾಹಕರಿಗೆ 5 ಬಾರಿ ಎಟಿಎಂ ಉಚಿತ ಬಳಕೆಗೆ ಅವಕಾಶ ನೀಡುತ್ತದೆ.

ನಂತರ ಎಸ್ ಬಿಐ ಪ್ರತಿ ಬಾರಿ ಎಟಿಎಂ ಬಳಕೆಗೆ ಜಿಎಸ್ ಟಿ ಸೇರಿದಂತೆ 10 ರೂಪಾಯಿಗಳನ್ನು ಎಸ್ ಬಿಐ ಎಟಿಎಂಗಳಿಂದ ಹಣ ಪಡೆಯುವವರಿಗೆ ಮತ್ತು ಬೇರೆ ಬ್ಯಾಂಕುಗಳ ಎಟಿಎಂಗಳನ್ನು ಬಳಕೆ ಮಾಡಿದವರಿಗೆ ಜಿಎಸ್ ಟಿ ಸೇರಿದಂತೆ 20 ರೂಪಾಯಿ ದರ ಹೇರುತ್ತದೆ. 5 ಬಾರಿಯ ನಂತರ ಎಟಿಎಂ ಬಳಕೆಗೆ ಐಸಿಐಸಿಐ ಬ್ಯಾಂಕು ಜಿಎಸ್ ಟಿ ಸೇರಿ 20 ರೂಪಾಯಿ ದರ ವಿಧಿಸುತ್ತದೆ. ಆಂತರಿಕ ವ್ಯವಹಾರದ ದರವನ್ನು ಕೂಡ ಆರ್ ಬಿಐ ಹೆಚ್ಚಳ ಮಾಡಿದ್ದು ಪ್ರತಿ ಹಣಕಾಸು ವಹಿವಾಟಿಗೆ 15 ರೂಪಾಯಿಯಿಂದ 17 ರೂಪಾಯಿಗಳಿಗೆ ಏರಿಕೆ ಮಾಡಿದೆ ಮತ್ತು ಹಣಕಾಸೇತರ ವಹಿವಾಟಿಗೆ 5 ರಿಂದ 6 ರೂಪಾಯಿಗಳಿಗೆ ಹೆಚ್ಚಳ ಮಾಡಿದೆ.

ಇಂಟರ್ಚೇಂಜ್ ಶುಲ್ಕಗಳು, ಹಿಂದಿನ ಗ್ರಾಹಕನು ಹಣವನ್ನು ಹಿಂಪಡೆಯಲು ನಂತರದ ಎಟಿಎಂ ಅನ್ನು ಬಳಸುವಾಗ ಬ್ಯಾಂಕ್ ಇನ್ನೊಬ್ಬ ಸಾಲಗಾರನಿಗೆ ಪಾವತಿಸುವ ಶುಲ್ಕವಾಗಿದೆ. ಆರ್‌ಬಿಐ ಪ್ರಕಾರ, ಗ್ರಾಹಕರು ತಮ್ಮದೇ ಬ್ಯಾಂಕುಗಳ ಎಟಿಎಂಗಳನ್ನು ಬಳಸಿದರೆ ತಿಂಗಳಲ್ಲಿ ಮೊದಲ ಐದು ವಹಿವಾಟುಗಳು ಉಚಿತವಾಗಿರುತ್ತದೆ. ಇತರ ಬ್ಯಾಂಕ್ ಎಟಿಎಂಗಳಿಂದ ಉಚಿತ ವಹಿವಾಟುಗಳಿಗೆ (ಹಣಕಾಸು ಮತ್ತು ಹಣಕಾಸೇತರ ಸೇರಿದಂತೆ) ಅವರು ಅರ್ಹರಾಗಿದ್ದಾರೆ - ಮೆಟ್ರೋ ಕೇಂದ್ರಗಳಲ್ಲಿ ಮೂರು ವ್ಯವಹಾರಗಳು ಮತ್ತು ಉಳಿದ ಪಟ್ಟಣ ಮತ್ತು ಅರೆ ನಗರ ಪ್ರದೇಶಗಳಲ್ಲಿ 5 ವಹಿವಾಟುಗಳಿಗೆ ಅವಕಾಶವಿದೆ.

ಎಟಿಎಂ ಶುಲ್ಕವನ್ನು ಪರಿಶೀಲಿಸಲು ಕೇಂದ್ರ ಬ್ಯಾಂಕ್ 2019 ರಲ್ಲಿ ರಚಿಸಿದ ಸಮಿತಿಯ ವರದಿಯನ್ನು ಆಧರಿಸಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಸಮಿತಿಯು ಕಳೆದ ವರ್ಷ ಜುಲೈಯಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಕೊನೆಯ ಬಾರಿಗೆ ಎಟಿಎಂ ವಹಿವಾಟಿನ ಇಂಟರ್ಚೇಂಜ್ ಶುಲ್ಕವನ್ನು 2012ರ ಆಗಸ್ಟ್ ನಲ್ಲಿ ಬದಲಾಯಿಸಲಾಗಿತ್ತು. ಆದರೆ ಗ್ರಾಹಕರು ಪಾವತಿಸಬೇಕಾದ ಶುಲ್ಕಗಳನ್ನು ಕೊನೆಯದಾಗಿ 2014ರ ಆಗಸ್ಟ್ ನಲ್ಲಿ ಪರಿಷ್ಕರಿಸಲಾಯಿತು.

Related Stories

No stories found.

Advertisement

X
Kannada Prabha
www.kannadaprabha.com