ಭಾರತದಲ್ಲಿ ಕೊರೋನಾ ಸಾಂಕ್ರಾಮಿಕದ ನಡುವೆಯೂ ಆರ್ಥಿಕ ಸಂಪತ್ತು ಶೇ.11 ರಷ್ಟು ಜಿಗಿತ!

ಭಾರತದಲ್ಲಿ ಕೊರೋನಾ ಸಾಂಕ್ರಾಮಿಕದ ನಡುವೆಯೂ ಆರ್ಥಿಕ ಸಂಪತ್ತು 2020 ರಲ್ಲಿ 3.4 ಟ್ರಿಲಿಯನ್ ಡಾಲರ್ ಗೆ ತಲುಪಿದಿದ್ದು, ಶೇ.11 ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆ ಹೇಳಿದೆ.
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ಮುಂಬೈ: ಭಾರತದಲ್ಲಿ ಕೊರೋನಾ ಸಾಂಕ್ರಾಮಿಕದ ನಡುವೆಯೂ ಆರ್ಥಿಕ ಸಂಪತ್ತು 2020 ರಲ್ಲಿ 3.4 ಟ್ರಿಲಿಯನ್ ಡಾಲರ್ ಗೆ ತಲುಪಿದಿದ್ದು, ಶೇ.11 ರಷ್ಟು ಬೆಳವಣಿಗೆ ಸಾಧಿಸಿದೆ ಎಂದು ಜಾಗತಿಕ ಕನ್ಸಲ್ಟೆನ್ಸಿ ಸಂಸ್ಥೆ ಹೇಳಿದೆ.

ಆರ್ಥಿಕ ಸಂಪತ್ತಿನಲ್ಲಿ ಶೇ.11 ರಷ್ಟು ಬೆಳವಣಿಗೆ 2020ಕ್ಕೆ 5 ವರ್ಷಗಳ ಸಂಯೋಜಿತ ವಾರ್ಷಿಕ ಬೆಳವಣಿಗೆಯ ದರಕ್ಕೆ ಸಮವಾಗಿದೆ ಎಂದು ಬಿಸಿಜಿ ನೀಡಿರುವ ವರದಿ ಹೇಳಿದೆ.

ವ್ಯಕ್ತಿಯೋರ್ವನ ಹೊಣೆಗಾರಿಕೆಗಳನ್ನು ಹಾಗೂ ಚಿನ್ನಾಭರಣಗಳಂತಹ ನೈಜ ಸಂಪತ್ತನ್ನು ಹೊರತುಪಡಿಸಿ ಇರುವ ಒಟ್ಟಾರೆ ಸಂಪತ್ತನ್ನು ಆರ್ಥಿಕ ಸಂಪತ್ತು ಎನ್ನಲಾಗುತ್ತದೆ.

ಆರ್ಥಿಕ ಸಂಪತ್ತು ಏರಿಕೆಯಾಗಿರುವುದಕ್ಕೆ ಪೂರಕವೆಂಬಂತೆ ಕಳೆದ ಏಪ್ರಿಲ್ ನಿಂದ ಸ್ಟಾಕ್ ಗಳಲ್ಲಿ ಏರಿಕೆ ಮುಂದುವರೆದಿದೆ. ಈ ನಡುವೆ ಆದಾಯದಲ್ಲಿನ ಅಸಮಾನತೆ ಹಾಗೂ ಸಾಂಕ್ರಾಮಿಕದಿಂದ ಇನ್ನೂ ಹೆಚ್ಚುತ್ತಿರುವ ವಿಭಜನೆಗಳು ಆತಂಕಕಾರಿಯಾಗಿದೆ.

ಇನ್ನೂ 5 ವರ್ಷಗಳ ಕಾಲ ಆರ್ಥಿಕ ಸಂಪತ್ತಿನಲ್ಲಿ ವೇಗವಾದ ವಿಸ್ತರಣೆಯನ್ನು ಕಾಣಲಿದ್ದೇವೆ, 2025 ರ ವೇಳೆಗೆ ಈ ಬೆಳವಣಿಗೆ ದರ 5.5 ಟ್ರಿಲಿಯನ್ ಗೆ ತಲುಪುವ ವೇಳೆಗೆ ಶೇ.10 ರಷ್ಟು ಕುಸಿತ ಕಾಣಲಿದೆ ಎಂದು ವರದಿ ವಿಶ್ಲೇಷಿಸಿದೆ.

ವೈಯಕ್ತಿಕ ಬೆಳವಣಿಗೆಯ ಶೇಕಡಾವಾರಿನಲ್ಲಿ ಭಾರತ 2025 ರ ವೇಳೆಗೆ ಮುನ್ನಡೆ ಕಾಯ್ದುಕೊಳ್ಳುವ ನಿರೀಕ್ಷೆ ಇದೆ. ರಿಯಲ್ ಎಸ್ಟೇಟ್, ಕನ್ಸ್ಯೂಮರ್ ಡ್ಯೂರಬಲ್, ಬೆಲೆಬಾಳುವ ವಸ್ತುಗಳು, ಚಿನ್ನಾಭರಣಗಳ ಸೇರಿದಂತೆ ರಿಯಲ್ ಅಸೆಟ್ ಗಳ ದೃಷ್ಟಿಯಿಂದ ಇವುಗಳ ಮೌಲ್ಯ 2020 ರಲ್ಲಿ 12.4 ಟ್ರಿಲಿಯನ್ ಗೆ ಅಂದರೆ  ಶೇ.14 ರಷ್ಟು ಏರಿಕೆ ಕಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com