ಮೈಕ್ರೋಸಾಫ್ಟ್ ನ ನೂತನ ಅಧ್ಯಕ್ಷರಾಗಿ ಸತ್ಯ ನಾಡೆಲ್ಲಾ ಆಯ್ಕೆ

ಟೆಕ್ ದೈತ್ಯ ಮೈಕ್ರೋಸ್ಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಸತ್ಯ ನಾಡೆಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಸಂಸ್ಥೆಯ ಸಿಇಒ ಆಗಿರುವ ಸತ್ಯಾ ನಾಡೆಲ್ಲಾ ಅವರಿಗೆ ಇದು ಹೆಚ್ಚುವರಿ ಜವಾಬ್ದಾರಿಯಾಗಿದೆ.
ಸತ್ಯಾನಾಡೆಲ್ಲಾ
ಸತ್ಯಾನಾಡೆಲ್ಲಾ

ನವದೆಹಲಿ: ಟೆಕ್ ದೈತ್ಯ ಮೈಕ್ರೋಸ್ಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಸತ್ಯ ನಾಡೆಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ. ಈಗಾಗಲೇ ಸಂಸ್ಥೆಯ ಸಿಇಒ ಆಗಿರುವ ಸತ್ಯಾ ನಾಡೆಲ್ಲಾ ಅವರಿಗೆ ಇದು ಹೆಚ್ಚುವರಿ ಜವಾಬ್ದಾರಿಯಾಗಿದೆ.

ಸತ್ಯಾ ನಾಡೆಲ್ಲಾ ಅವರಿಗೆ ಸಂಸ್ಥೆಯ ಅಧ್ಯಕ್ಷರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದ್ದು, ಮಂಡಳಿಯ ಸ್ವತಂತ್ರ ನಿರ್ದೇಶಕರು ನಾಡೆಲ್ಲಾ ಅವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ಮೈಕ್ರೋಸಾಫ್ಟ್ ಕಾರ್ಪ್ ಬುಧವಾರ ಘೋಷಿಸಿದೆ.  ಅಂತೆಯೇ ಈ ಹಿಂದೆ ಅಧ್ಯಕ್ಷರಾಗಿದ್ದ ಜಾನ್ ಡಬ್ಲ್ಯೂ ಥಾಂಪ್ಸನ್ ಅವರನ್ನು ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಈ ಪಾತ್ರವನ್ನು ಅವರು 2012 ರಿಂದ 2014 ರವರೆಗೆ ನಿರ್ವಹಿಸಿದ್ದರು.

ಸಂಸ್ಥೆಯ ಕಾರ್ಯಸೂಚಿಯನ್ನು ನಿಗದಿಪಡಿಸುವ ಕೆಲಸವನ್ನು ಅವರು ಮುನ್ನಡೆಸುತ್ತಾರೆ. ಸರಿಯಾದ ಕಾರ್ಯತಂತ್ರದ ಅವಕಾಶಗಳನ್ನು ಹೆಚ್ಚಿಸಲು ಮತ್ತು ಮಂಡಳಿಯ ಪರಿಶೀಲನೆಗೆ ಪ್ರಮುಖ ಅಪಾಯಗಳನ್ನು ತಗ್ಗಿಸುವ ವಿಧಾನಗಳನ್ನು ಗುರುತಿಸಲು ವ್ಯವಹಾರದ ಬಗ್ಗೆ ಅವರ ಆಳವಾದ  ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.

53 ವರ್ಷದ ನಾಡೆಲ್ಲಾ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ, ಮಂಡಳಿಯ ಕಾರ್ಯಸೂಚಿಗಳಲ್ಲಿ ಸ್ವತಂತ್ರ ನಿರ್ದೇಶಕರ ಪರವಾಗಿ ಮಾಹಿತಿ ಒದಗಿಸುವುದು, ಸ್ವತಂತ್ರ ನಿರ್ದೇಶಕರ ಸಭೆಗಳನ್ನು ಕರೆಯುವುದು, ಕಾರ್ಯನಿರ್ವಾಹಕ ಅಧಿವೇಶನಗಳಿಗೆ ಕಾರ್ಯಸೂಚಿಗಳನ್ನು ನಿಗದಿಪಡಿಸುವುದು  ಮತ್ತು ಪ್ರಮುಖ ಕಾರ್ಯಕ್ಷಮತೆಯ ಮೌಲ್ಯಮಾಪನಗಳು ಸೇರಿದಂತೆ ಮಹತ್ವದ ಅಧಿಕಾರವನ್ನು ಉಳಿಸಿಕೊಳ್ಳುತ್ತಾರೆ ಎಂದು ಮೈಕ್ರೋಸಾಫ್ಟ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com