ಮೊದಲ ಅಂತರಾಷ್ಟ್ರೀಯ ಚಹಾ ದಿನದ ವಿಶೇಷ ಹರಾಜಿನಲ್ಲಿ 'ಅಸ್ಸಾಂ ಟೀ' ಗೆ ದಾಖಲೆಯ ಬೆಲೆ!

ಟೀ ಬೋರ್ಡ್ ಆಫ್ ಇಂಡಿಯಾ ನಿಗದಿಪಡಿಸಿದಂತೆ, ಸೋಮವಾರ ನಡೆದ ಮೊದಲ ಅಂತರಾಷ್ಟ್ರೀಯ ಚಹಾ ದಿನದ ವಿಶೇಷ ಹರಾಜಿನಲ್ಲಿ ಅಸ್ಸಾಂನ ಪ್ರೀಮಿಯಂ ಚಹಾ ಮಾರಾಟಕ್ಕೆ ಬಂದಿದ್ದವು. 
ಅಸ್ಸಾಂನ ಟೀ ತೋಟ
ಅಸ್ಸಾಂನ ಟೀ ತೋಟ

ಗುವಾಹಟಿ: ಟೀ ಬೋರ್ಡ್ ಆಫ್ ಇಂಡಿಯಾ ನಿಗದಿಪಡಿಸಿದಂತೆ, ಸೋಮವಾರ ನಡೆದ ಮೊದಲ ಅಂತರಾಷ್ಟ್ರೀಯ ಚಹಾ ದಿನದ ವಿಶೇಷ ಹರಾಜಿನಲ್ಲಿ ಅಸ್ಸಾಂನ ಪ್ರೀಮಿಯಂ ಚಹಾ ಮಾರಾಟಕ್ಕೆ ಬಂದಿದ್ದವು. 

ಜೋರ್ಹತ್ ಟೀ ಇ-ಮಾರುಕಟ್ಟೆಯಲ್ಲಿ  ಪ್ರತಿ ಕೆಜಿಗೆ 4,000 ರೂ.ಗಳಷ್ಟು ದಾಖಲೆಯ ಬೆಲೆಯನ್ನು ಪಡೆದ ಹರಾಜನ್ನು ಭಾರತದ ಅತಿದೊಡ್ಡ B2B ಇ-ಕಾಮರ್ಸ್ ಕಂಪನಿಯಾದ ಎಂಜಂಕ್ಷನ್ ಸರ್ವೀಸಸ್ ಲಿಮಿಟೆಡ್ ಆಯೋಜಿಸಿದೆ.

ಅಧಿಕೃತ ಮೂಲಗಳ ಪ್ರಕಾರ ಒಟ್ಟು ಚಹಾಗಳಲ್ಲಿ 93% ಕ್ಕಿಂತ ಹೆಚ್ಚು ಮಾರಾಟವಾಗಿವೆ. ಖರೀದಿದಾರರು ಅಸ್ಸಾಂ, ಪಶ್ಚಿಮ ಬಂಗಾಳ, ದೆಹಲಿ, ಗುಜರಾತ್ ಮತ್ತು ರಾಜಸ್ಥಾನದಿಂದ ಲಾಗ್ ಇನ್ ಆಗಿದ್ದರು.

ಪಬೋಜನ್ ಆರ್ಥೊಡಾಕ್ಸ್ ಚಹಾವನ್ನು ಪ್ರತಿ ಕೆ.ಜಿ.ಗೆ 4,000 ರೂ. ಅಂತೆಯೇ, ಡಿರೊಯಿಬಾಮ್ ಸ್ಪೆಷಾಲಿಟಿ ಗ್ರೀನ್ ಟೀ ಅನ್ನು ಪ್ರತಿ ಕೆಜಿಗೆ 1,000 ರೂ.ಗೆ ಮಾರಾಟ ಮಾಡಲಾಯಿತು ಮತ್ತು ಪ್ರಸಿದ್ಧ ಹುಕ್ಮೋಲ್ ಸಿಟಿಸಿ ಚಹಾವು ಪ್ರತಿ ಕೆಜಿಗೆ 510 ರೂಗಳನ್ನು ಪಡೆಯಿತು

ಹುಕ್ಮೋಲ್ ಸಿಟಿಸಿಯನ್ನು ಪ್ಲಾಟ್‌ಫಾರ್ಮ್‌ನಿಂದ ಪ್ರತಿ ಕೆ.ಜಿ.ಗೆ 510 ರೂ.ಗೆ ಖರೀದಿಸಿದ ಟೀ ವರ್ಲ್ಡ್ ನಿರ್ದೇಶಕರಾದ ಕಮಲ್ ಶರ್ಮಾ ಮತ್ತು ಪ್ರದೀಪ್ ಶರ್ಮಾ, ಕಡಿಮೆ ಅವಧಿಯಲ್ಲಿ ಮಂಕ್ಷನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾರಾಟವಾಗುವ ಚಹಾಗಳು ಹೊಸತಾಗಿರಲಿದೆ ಎಂದರು. ಹುಕ್ಮೋಲ್ ಸಿಟಿಸಿಯನ್ನು ಸರಬರಾಜು ಮಾಡಿದ ರಿಯಲ್ ಅಸ್ಸಾಂ ಟೀ ಇಂಡಸ್ಟ್ರೀಸ್ ನಿರ್ದೇಶಕ ಭಾಸ್ಕರ್ ಹಜಾರಿಕಾ “ಅಂತರರಾಷ್ಟ್ರೀಯ ಚಹಾ ದಿನಾಚರಣೆಯ ಅಂಗವಾಗಿ  ವಿಶೇಷ ಚಹಾ ಹರಾಜನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ನಾನು ಅಭಿನಂದಿಸುತ್ತೇನೆ. ಎಲ್ಲಾ ಸಮಸ್ಯೆಗಳ ನಡುವೆಯೂ  ಎರಡು ಶತಮಾನಗಳಿಂದ ಅಸ್ಸಾಂನಲ್ಲಿ ಉಳಿದುಕೊಂಡಿರುವ ಏಕೈಕ ಖಾಸಗಿ ವಲಯದ ಉದ್ಯಮ ಎಂದರೆ ಅವು ಟೀ ಎಸ್ಟೇಟ್ ಕಂಪನಿಗಳು. ” ಎಂದಿದ್ದಾರೆ.

ಅಸ್ಸಾಂ ಚಹಾ ತೋಟಗಳು ಬಿಡ್ ಗಳ ರಾಷ್ಟ್ರೀಕರಣ, ತೀವ್ರವಾದ ಭೂ ಕಾಯ್ದೆನಿರ್ಬಂಧಗಳು ಮತ್ತು 1947 ರಿಂದ ಎಲ್ಲಾ ರೀತಿಯ ಹೋರಾಟಗಳು ಸೇರಿದಂತೆ ಹಲವು ಸವಾಲುಗಳನ್ನು ಎದುರಿಸಿದೆ.

ಗ್ರೀನ್ ಟೀ ಪ್ರತಿ ಕೆಜಿಗೆ 1,000 ರೂಗಳನ್ನು ಪಡೆದಿರುವ ಡಿರೊಯಿಬಾಮ್ ಟೀ ಎಸ್ಟೇಟಿನ  ನಜ್ರಾನಾ ಅಹ್ಮದ್, “ನಮ್ಮ ವಿಶೇಷ ಗ್ರೀ ಟೀಗಾಗಿ  ನಾವು ಹೆಚ್ಚಿನ ಬಿಡ್ ಪಡೆದಿರುವುದರಿಂದ ಇಂದಿನ ವಿಶೇಷ ಹರಾಜು ನಮಗೆಮಹತ್ವದ್ದಾಗಿದೆ. ಎಂಜಂಕ್ಷನ್ ತಂಡದ ವೃತ್ತಿಪರ ವಿಧಾನ ಮತ್ತು ಖರೀದಿದಾರರು ವೇದಿಕೆಯಲ್ಲಿ ಇಟ್ಟಿರುವ ವಿಶ್ವಾಸದಿಂದ ನಾವು ಸಂತೋಷವಾಗಿದ್ದೇವೆ. ” ಎಂದರು.

ಪಬೋಜನ್ ಆರ್ಥೊಡಾಕ್ಸ್ ಅನ್ನು ಪ್ರತಿ ಕೆ.ಜಿ.ಗೆ 4,000 ರೂ.ಗೆ ಖರೀದಿಸಿದ ಶಾಂಗ್ರಿಲಾ ಎಂಟರ್‌ಪ್ರೈಸ್‌ನ ನಿಲೇಶ್ ದಿನಕರ್  ಅತ್ಯುತ್ತಮವಾದ ಚಹಾಗಳು ಲಭ್ಯವಿರುವ ವೇದಿಕೆಯನ್ನು ಒದಗಿಸಿದ್ದಕ್ಕಾಗಿ ಮಂಕ್ಷನ್ ತಂಡವನ್ನು ಶ್ಲಾಘಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com