ವೈಯಕ್ತಿಕ ಐಟಿ ರಿಟರ್ನ್ಸ್ ಸಲ್ಲಿಕೆ ಗಡುವು; ಸೆಪ್ಟೆಂಬರ್ 30ವರೆಗೆ ವಿಸ್ತರಣೆ

ಕೊರೋನ ಸೋಂಕಿನ ಎರಡನೇ ಅಲೆಯಿಂದಾಗಿ 2020-21ನೇ ಹಣಕಾಸು ವರ್ಷಕ್ಕೆ ವೈಯಕ್ತಿಕ ಐಟಿ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಜುಲೈ 31 ರ ಬದಲಿಗೆ ಸೆಪ್ಟೆಂಬರ್ 30 ರವರೆಗೆ ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನ ಸೋಂಕಿನ ಎರಡನೇ ಅಲೆಯಿಂದಾಗಿ 2020-21ನೇ ಹಣಕಾಸು ವರ್ಷಕ್ಕೆ ವೈಯಕ್ತಿಕ ಐಟಿ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಜುಲೈ 31ರ ಬದಲಿಗೆ ಸೆಪ್ಟೆಂಬರ್ 30ರವರೆಗೆ ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ.

ಆದಾಯ ತೆರಿಗೆ ನಿಯಮಗಳ ಪ್ರಕಾರ, ಮಾರ್ಚ್ 31 ಕ್ಕೆ ಕೊನೆಗೊಂಡ ಹಿಂದಿನ ಹಣಕಾಸು ವರ್ಷಕ್ಕೆ (2020-21) ಐಟಿಆರ್-1 ಅಥವಾ ಐಟಿಆರ್ 4 ಸಲ್ಲಿಸುವ ವೈಯಕ್ತಿಕ ತೆರಿಗೆದಾರರಿಗೆ ಕೊನೆಯ ದಿನಾಂಕ ಸಾಮಾನ್ಯವಾಗಿ ಪ್ರತಿ ವರ್ಷ ಜುಲೈ 31 ಆಗಿದೆ. ಆದರೆ ತೆರಿಗೆದಾರರು ಈಗ ಜುಲೈ 31 ರ ಬದಲು ಸೆಪ್ಟೆಂಬರ್ 30 ರವರೆಗೂ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದಾಗಿದೆ.

ಅದೇ ರೀತಿ, ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ಕಂಪನಿಗಳು ಮತ್ತು ಸಂಸ್ಥೆಗಳಿಗೆ, ಗಡುವನ್ನು ಸಾಮಾನ್ಯವಾಗಿ ಅಕ್ಟೋಬರ್ 31 ಆಗಿರುತ್ತದೆ. ಆದರೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಕಂಪನಿಗಳಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ನವೆಂಬರ್ 30, ವರೆಗೂ ವಿಸ್ತರಿಸಲಾಗಿದೆ.

ಈ ನಡುವೆ ವಿಳಂಬವಾದ ಐಟಿಆರ್ ಅನ್ನು ದಂಡದೊಂದಿಗೆ ಸಲ್ಲಿಸಲು ಸರ್ಕಾರ ಗಡುವನ್ನು ವಿಸ್ತರಿಸಿದೆ.ಸೆಪ್ಟೆಂಬರ್ 30 ರ ಗಡುವಿನ ನಂತರವೂ ತಮ್ಮ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ವಿಫಲರಾದ ತೆರಿಗೆದಾರರಿಗೆ ಈ ನಿರ್ಧಾರ ಅನುಕೂಲವಾಗಿದೆ. ಆದರೆ ದಂಡದೊಂದಿಗೆ. ವಿಳಂಬವಾದ ಐಟಿಆರ್ ಅಥವಾ ಪರಿಷ್ಕೃತ ಐಟಿಆರ್ ಸಲ್ಲಿಸಲು ಈಗ ಕೊನೆಯ ದಿನಾಂಕ ಜನವರಿ 31 ಆಗಿರುತ್ತದೆ ಎಂದು ಇಲಾಖೆ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com