ಕರ್ನಾಟಕ, ಗೋವಾ ರಾಜ್ಯಗಳಲ್ಲಿ ಇಪಿಎಸ್ ಪೆನ್ಷನ್ಗೆ 76.72% ಸದಸ್ಯರಿಂದ ಜೀವನ ಪ್ರಮಾಣಪತ್ರ ಸಲ್ಲಿಕೆ
ಕರ್ನಾಟಕ ಮತ್ತು ಗೋವಾ ರಾಜ್ಯಗಳ ಎಲ್ಲಾ ಪ್ರಾದೇಶಿಕ ಕಚೇರಿಗಳನ್ನು ಪಿಂಚಣಿಗೆ ಅರ್ಹರಾದ ಎಲ್ಲ ಸದಸ್ಯರು ಸಲ್ಲಿಸಿದ ಜೀವನ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಯಿತು.
Published: 02nd March 2021 05:33 PM | Last Updated: 02nd March 2021 05:33 PM | A+A A-

ಇಪಿಎಫ್ಒ
ಶ್ರೀ ಆರ್.ಕೆ. ಸಿಂಗ್, ಹೆಚ್ಚುವರಿ ಕೇಂದ್ರ ಭವಿಷ್ಯ ನಿಧಿ ಆಯುಕ್ತ (ಹೆಚ್ ಕ್ಯೂ), ಕರ್ನಾಟಕ ಮತ್ತು ಗೋವಾ, ಇವರ ನಿರ್ದೇಶನದಲ್ಲಿ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ಎಲ್ಲಾ ಪ್ರಾದೇಶಿಕ ಕಚೇರಿಗಳನ್ನು ಪಿಂಚಣಿಗೆ ಅರ್ಹರಾದ ಎಲ್ಲ ಸದಸ್ಯರು ಸಲ್ಲಿಸಿದ ಜೀವನ ಪ್ರಮಾಣಪತ್ರಗಳನ್ನು ಪರಿಶೀಲಿಸಲಾಯಿತು.
ಈ ಸಂದರ್ಭ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಇರುವ ಒಟ್ಟು 5,95,021 ಪಿಂಚಣಿದಾರರಲ್ಲಿ, ಕೇವಲ 4,56,480 ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ, ಇದು ಒಟ್ಟು 76.72% ಆಗಿದೆ ಎಂಬುದು ತಿಳಿದುಬಂದಿದೆ.
ಕೋವಿಡ್ -19 ಸಾಂಕ್ರಾಮಿಕದ ಪ್ರಭಾವದ ನಡುವೆಯೂ 76.72% ಗುರಿಯನ್ನು ಸಾಧಿಸಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ಗರಿ. ಪಿಂಚಣಿ ಕೆಲಸಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಈ ಪ್ರಶಂಸೆ ಸಲ್ಲುತ್ತದೆ. ಅವರು ಕೋವಿಡ್ -19 ರ ಕಾರಣದಿಂದಾಗಿ "ಸಾಮಾಜಿಕ ಅಂತರದ"ದ ಬಗ್ಗೆ ವಿಶೇಷ ಕಾಳಜಿ ವಹಿಸಿ ಈ ಕಾರ್ಯವನ್ನು ನಿರ್ವಹಿಸಿದರು. ಜೀವನ ಪ್ರಮಾಣಪತ್ರಗಳನ್ನು ಪಡೆಯಲು ಮತ್ತು ನವೀಕರಿಸಲು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳಲ್ಲೂ ಸಹ ಅವಕಾಶ ಕಲ್ಪಿಸಲಾಗಿತ್ತು ಎಂದು ಆರ್.ಕೆ. ಸಿಂಗ್ ಹೇಳಿದರು.
ಈ ಸಂಬಂಧ 100% ಗುರಿಯನ್ನು ಸಾಧಿಸಲು ಅವರು ಎಲ್ಲಾ ಪ್ರಾದೇಶಿಕ ಕಚೇರಿಗಳಿಗೆ ನಿರ್ದೇಶಿಸಿದ್ದಾರೆ. ಅದೇ ಸಮಯದಲ್ಲಿ, ಯಾವುದೇ ಕಾರಣಕ್ಕೂ ತಮ್ಮ ಜೀವನ ಪ್ರಮಾಣಪತ್ರವನ್ನು ಇನ್ನೂ ಸಲ್ಲಿಸದವರು, ಆದಷ್ಟು ಬೇಗ ಅದನ್ನು ಸಲ್ಲಿಸಬೇಕು, ಇದರಿಂದಾಗಿ ಅವರ ಪಿಂಚಣಿಗಳನ್ನು ತಡೆರಹಿತವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಕಳುಹಿಸಬಹುದು ಎಂದು ಅವರು ಪಿಂಚಣಿದಾರರಿಗೆ ಮನವಿ ಮಾಡಿದ್ದಾರೆ. ಸಾಮಾನ್ಯ ಸೇವಾ ಕೇಂದ್ರಗಳಿಗೆ (ಸಿಎಸ್ಸಿ) ಭೇಟಿ ನೀಡಿ, ಸಂಬಂಧಪಟ್ಟ ಬ್ಯಾಂಕುಗಳ ಶಾಖೆಗಳಲ್ಲಿ ಅಥವಾ ಯಾವುದೇ ಅಂಚೆ ಕಚೇರಿಯಲ್ಲಿ, ಉಮಾಂಗ್ ಆ್ಯಪ್ ಬಳಸಿ ಮತ್ತು ಪೋಸ್ಟ್ಮ್ಯಾನ್ ಸಹಾಯದಿಂದ ಜೀವ ಪ್ರಮಾಣಪತ್ರಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು ಎಂದು ಆರ್.ಕೆ. ಸಿಂಗ್ ಅರಿವು ಮೂಡಿಸಿದರು.