ಕೊರೋನಾ ಸಂಕಷ್ಟದಲ್ಲೂ ಬಿಲಿಯನೇರ್ ಗಳ ಪಟ್ಟಿಗೆ ಹೊಸದಾಗಿ 40 ಭಾರತೀಯರು ಸೇರ್ಪಡೆ: ಅಂಬಾನಿ, ಅದಾನಿ ಸಂಪತ್ತು ಏರಿಕೆ!
ಮಹಾಮಾರಿ ಕೊರೋನಾ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಆದರೆ ಭಾರತದ ಶ್ರೀಮಂತರ ಆದಾಯದಲ್ಲಿ ಮಾತ್ರ ಸಿಕ್ಕಾಪಟ್ಟೆ ಏರಿಕೆಯಾಗಿದ್ದು,...
Published: 02nd March 2021 03:51 PM | Last Updated: 02nd March 2021 04:02 PM | A+A A-

ಅಂಬಾನಿ - ಅದಾನಿ
ಮುಂಬೈ: ಮಹಾಮಾರಿ ಕೊರೋನಾ ಲಾಕ್ ಡೌನ್ ನಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಆದರೆ ಭಾರತದ ಶ್ರೀಮಂತರ ಆದಾಯದಲ್ಲಿ ಮಾತ್ರ ಸಿಕ್ಕಾಪಟ್ಟೆ ಏರಿಕೆಯಾಗಿದ್ದು, ಸಾಂಕ್ರಾಮಿಕ ಸಂಕಷ್ಟದಲ್ಲೂ ಹೊಸದಾಗಿ 40 ಭಾರತೀಯರು ಬಿಲಿಯನೇರ್ ಕ್ಲಬ್ ಗೆ ಸೇರ್ಪಡೆಯಾಗಿದ್ದಾರೆ. ಇದರೊಂದಿಗೆ ಭಾರತೀಯ ಬಿಲಿಯನೇರ್ ಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
ನಮ್ಮ ದೇಶದ ಶತಕೋಟಿ ಶ್ರೀಮಂತರ ಆರ್ಥಿಕ ಸ್ಥಿತಿ ಮೇಲೆ ಕೊರೋನಾ ಹೆಮ್ಮಾರಿಯಿಂದ ಯಾವುದೇ ಪರಿಣಾಮ ಆಗಿಲ್ಲ. ಹೀಗಾಗಿ ಮುಖೇಶ್ ಅಂಬಾನಿ ಅವರು 83 ಬಿಲಿಯನ್ ಅಮೆರಿಕನ್ ಡಾಲರ್ ನೊಂದಿಗೆ ಶ್ರೀಮಂತ ಭಾರತೀಯರಾಗಿ ಮುಂದುವರೆದಿದ್ದಾರೆ.
ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರ ಆದಾಯ ಶೇಕಡಾ 24 ರಷ್ಟು ಏರಿಕೆಯಾಗಿದ್ದು, ಮುಖೇಶ್ ಅಂಬಾನಿ ವಿಶ್ವದ ಎಂಟನೇ ಶ್ರೀಮಂತ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇನ್ನು ಗುಜರಾತ್ ನ ಗುಜರಾತ್ನ ಗೌತಮ್ ಅದಾನಿ ಅವರ ಸಂಪತ್ತು ಸಹ ಏರಿಕೆಯಾಗಿದ್ದು, 2020ರಲ್ಲಿ 32 ಬಿಲಿಯನ್ ಡಾಲರ್ಗೆ ದ್ವಿಗುಣಗೊಂಡಿದೆ ಮತ್ತು 20 ಸ್ಥಾನಗಳನ್ನು ಏರಿ ಜಾಗತಿಕವಾಗಿ 48ನೇ ಶ್ರೀಮಂತ ವ್ಯಕ್ತಿ ಮತ್ತು ಎರಡನೇ ಶ್ರೀಮಂತ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ವಿಶ್ವಕ್ಕೆ ಅಪ್ಪಳಿಸಿದ ಪರಿಣಾಮ ಪ್ರಪಂಚವೇ ಲಾಕ್ಡೌನ್ ಆಗಿತ್ತು. ಜಾಗತಿಕ ಆರ್ಥಿಕ ಸ್ಥಿತಿ ಸ್ತಬ್ಧವಾಗಿತ್ತು. ಬೃಹತ್ ಕಂಪನಿಗಳು ಮುಚ್ಚಲ್ಪಟ್ಟವು. ಆದರೆ ಆರ್ಥಿಕ ಸ್ಥಿತಿ ದುಸ್ಥಿತಿಗೆ ತಲುಪಿದ್ದ ಈ ಅವಧಿ ಭಾರತೀಯ ಬಿಲಿಯನೇರ್ ಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದಾಗಿ ಹುರುನ್ ವರದಿ ಮಾಡಿದೆ.