
ಜಿಎಸ್ ಟಿ
ನವದೆಹಲಿ: ಕೇಂದ್ರ ಸರ್ಕಾರ ಫೆಬ್ರವರಿ ತಿಂಗಳಲ್ಲಿ ಸಂಗ್ರಹವಾದ ಜಿಎಸ್ ಟಿ ಅಂಕಿ-ಅಂಶಗಳನ್ನು ಪ್ರಕಟಿಸಿದ್ದು, 1 ಲಕ್ಷ ಕೋಟಿ ರೂಪಾಯಿ ದಾಟಿದೆ.
ಸತತ 5 ನೇ ತಿಂಗಳು ಜಿಎಸ್ ಟಿ ಸಂಗ್ರಹ 1 ಲಕ್ಷ ಕೋಟಿ ರೂಪಾಯಿ ದಾಟಿದೆ. ಜನವರಿಯಲ್ಲಿ ದಾಖಲೆಯ 1.19 ಲಕ್ಷ ಕೋಟಿ ಮತ್ತು 2020ರ ಡಿಸೆಂಬರ್ ನಲ್ಲಿ 1.15 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿತ್ತು.
ಫೆಬ್ರವರಿಯಲ್ಲಿ ಸಂಗ್ರವಾದ ಜಿಎಸ್ ಟಿಯಲ್ಲಿ ಸಿಜಿಎಸ್ ಟಿ 21,092 ಕೋಟಿ ರೂಪಾಯಿಯಷ್ಟಿದ್ದರೆ, ಎಸ್ ಜಿಎಸ್ ಟಿ 27,273 ಕೋಟಿ ರೂಪಾಯಿಗಳು ಸಂಗ್ರವಾಗಿದೆ.
ಕಳೆದ ವರ್ಷದ ಫೆಬ್ರವರಿ ತಿಂಗಳ ಜಿಎಸ್ ಟಿ ಸಂಗ್ರಹಕ್ಕೆ ಹೋಲಿಸಿದರೆ ಈ ವರ್ಷದ ಫೆಬ್ರವರಿ ತಿಂಗಳ ಜಿಎಸ್ ಟಿ ಸಂಗ್ರಹ ಶೇ.7 ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಆರ್ಥಿಕ ಚೇತರಿಕೆ ಹಾಗೂ ಸುಧಾರಣೆಗಳಿಗೆ ಕೈಗೊಂಡ ವಿವಿಧ ಕ್ರಮಗಳ ಪರಿಣಾಮವಾಗಿ ಸತತ 5 ತಿಂಗಳಿನಿಂದ ಜಿಎಸ್ ಟಿ ಸಂಗ್ರಹ 1 ಲಕ್ಷ ಕೋಟಿ ದಾಟಿದೆ ಎಂದು ಸಚಿವಾಲಯ ತಿಳಿಸಿದೆ.