ಜಿಎಸ್ ಟಿ ಅಡಿ ಪೆಟ್ರೋಲ್ ಬೆಲೆಯನ್ನು 75 ರೂ. ಗಿಂತ ಕಡಿಮೆಗೆ ಇಳಿಸಬಹುದು; ರಾಜಕೀಯ ಇಚ್ಛಾಶಕ್ತಿಯ ಕೊರತೆಯಿದೆ: ಎಸ್ ಬಿಐ ತಜ್ಞರು

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವ್ಯಾಪ್ತಿಗೆ ತಂದರೆ ಪೆಟ್ರೋಲ್ ದರವನ್ನು ದೇಶಾದ್ಯಂತ ಲೀಟರಿಗೆ 75 ರೂಪಾಯಿಗಿಂತ ತಗ್ಗಿಸಬಹುದು, ಆದರೆ ಇಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿದೆ. ಇದರಿಂದಾಗಿ ಭಾರತದಲ್ಲಿ ತೈಲೋತ್ಪನ್ನಗಳ ಬೆಲೆ ಅಧಿಕವಾಗಿದೆ ಎಂದು ಎಸ್ ಬಿಐಯ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Published: 04th March 2021 11:59 AM  |   Last Updated: 04th March 2021 12:51 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ಮುಂಬೈ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವ್ಯಾಪ್ತಿಗೆ ತಂದರೆ ಪೆಟ್ರೋಲ್ ದರವನ್ನು ದೇಶಾದ್ಯಂತ ಲೀಟರಿಗೆ 75 ರೂಪಾಯಿಗಿಂತ ತಗ್ಗಿಸಬಹುದು, ಆದರೆ ಇಲ್ಲಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿದೆ. ಇದರಿಂದಾಗಿ ಭಾರತದಲ್ಲಿ ತೈಲೋತ್ಪನ್ನಗಳ ಬೆಲೆ ಅಧಿಕವಾಗಿದೆ ಎಂದು ಎಸ್ ಬಿಐಯ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮಟ್ಟದಲ್ಲಿ ಕಚ್ಚಾಬೆಲೆ ಪ್ರತಿ ಬ್ಯಾರಲ್ ಗೆ 60 ಡಾಲರ್ ಮತ್ತು ವಿನಿಮಯ ದರ ಪ್ರತಿ ಡಾಲರ್ ಗೆ 73 ಇದ್ದರೆ ಪೆಟ್ರೋಲ್ ದರವನ್ನು ಲೀಟರ್ ಗೆ 75 ರೂಪಾಯಿಗಿಂತ ಕಡಿಮೆ, ಡೀಸೆಲ್ ದರವನ್ನು ಲೀಟರ್ ಗೆ 68 ರೂಪಾಯಿಗಿಂತ ಕಡಿಮೆ ತಗ್ಗಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಆದಾಯ ನಷ್ಟವನ್ನು ಜಿಡಿಪಿಯ 1 ಲಕ್ಷ ಕೋಟಿಗೆ ಅಥವಾ ಶೇಕಡಾ 0.4ರಷ್ಟು ತರಬಹುದು ಎಂದು ಆರ್ಥಿಕ ತಜ್ಞರು ಲೆಕ್ಕಾಚಾರ ಹಾಕುತ್ತಾರೆ.

ಇಂದು ಪ್ರತಿಯೊಂದು ರಾಜ್ಯಗಳು ವಿಭಿನ್ನವಾಗಿ ಇಂಧನ ಬೆಲೆಯನ್ನು ಗ್ರಾಹಕರಿಗೆ ವಿಧಿಸುತ್ತದೆ. ಕೇಂದ್ರ ಸರ್ಕಾರ ಇದರ ಜೊತೆಗೆ ಸುಂಕ ಮತ್ತು ಸೆಸ್ ನ್ನು ಕೂಡ ಸಂಗ್ರಹಿಸುತ್ತದೆ. ದೇಶದ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ದರ ಈಗಾಗಲೇ ಲೀಟರ್ ಗೆ 100 ರೂಪಾಯಿಗೆ ತಲುಪಿದೆ. ಅಧಿಕ ತೆರಿಗೆಯಿಂದಾಗಿ ಇಂಧನ ದುಬಾರಿಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ ತರುವುದು ಜಿಎಸ್ಟಿ ಚೌಕಟ್ಟಿನ ಅಪೂರ್ಣ ಕಾರ್ಯಸೂಚಿಯಾಗಿದೆ ಮತ್ತು ಹೊಸ ಪರೋಕ್ಷ ತೆರಿಗೆ ಚೌಕಟ್ಟಿನಡಿಯಲ್ಲಿ ಬೆಲೆಗಳನ್ನು ಪಡೆಯುವುದು ಸಹಾಯ ಮಾಡುತ್ತದೆ ಎಂದು ಎಸ್ ಬಿಐ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

"ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಮಾರಾಟ ತೆರಿಗೆ / ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಅವರಿಗೆ ಸ್ವಂತ ತೆರಿಗೆ ಆದಾಯದ ಪ್ರಮುಖ ಮೂಲವಾಗಿರುವುದರಿಂದ ಜಿಎಸ್ಟಿಯಲ್ಲಿ ಕಚ್ಚಾ ತೈಲ ಉತ್ಪನ್ನಗಳನ್ನು ತರಲು ಕೇಂದ್ರ ಮತ್ತು ರಾಜ್ಯಗಳು ಒಪ್ಪುವುದಿಲ್ಲ. ಹೀಗಾಗಿ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಬೆಲೆ ಇಷ್ಟೊಂದು ಹೆಚ್ಚಾಗಿದೆ ಎಂದು ಹೇಳಿದರು.

ಎಲ್ ಪಿಜಿ ಸಿಲೆಂಡರ್ ಗಾಗಿ, ಅರ್ಥಶಾಸ್ತ್ರಜ್ಞರು ಬಡ ಗ್ರಾಹಕರಿಗೆ ಹೆಚ್ಚಿದ ಮತ್ತು ಶ್ರೇಣೀಕೃತ ಸಬ್ಸಿಡಿಯನ್ನು ನೀಡಬಹುದೆಂದು ಪ್ರಸ್ತಾಪಿಸಿದರು, ಇದನ್ನು 5 ವರ್ಷಗಳ ಅವಧಿಯಲ್ಲಿ ಹೇಳಬಹುದು. ಏತನ್ಮಧ್ಯೆ, ಇತ್ತೀಚಿನ ಆದಾಯ ಮತ್ತು ಖರ್ಚು ಸಂಖ್ಯೆಗಳು ಹಣಕಾಸಿನ ಕೊರತೆಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇಕಡಾ 8.7 ಕ್ಕೆ ಇಳಿಸಲು ಕಾರಣವಾಗಬಹುದು, ಇದು ಪರಿಷ್ಕೃತ ಬಜೆಟ್ ಅಂದಾಜುಗಳಲ್ಲಿ ಶೇ 9.5 ರಿಂದ ಕಡಿಮೆಯಾಗಿದೆ.

Stay up to date on all the latest ವಾಣಿಜ್ಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp