ವಿಶ್ವಾಸಾರ್ಹರಲ್ಲದವರಿಗೆ ಸಾಲ ನಿಲ್ಲಿಸಿ; ಹೆಚ್ಚು ಗುಣಮಟ್ಟದ ಬಗ್ಗೆ ಗಮನ ಹರಿಸಿ: ಹಣಕಾಸು ಸಂಸ್ಥೆಗಳಿಗೆ ಸಿಇಎ

ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕೆಂದರೆ ವಿಶ್ವಾಸಾರ್ಹತೆ ಇಲ್ಲದವರಿಗೆ ಸಾಲ ನೀಡುವುದನ್ನು ನಿಲ್ಲಿಸಿ, ಸ್ವತ್ತುಗಳ ಸೃಷ್ಟಿಗಾಗಿ ಹೆಚ್ಚಿನ ಗುಣಮಟ್ಟದ ಸಾಲಗಳತ್ತ ಗಮನಹರಿಸಿ ಎಂದು ಹಣಕಾಸು ಸಂಸ್ಥೆಗಳಿಗೆ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ ಸುಬ್ರಹ್ಮಣಿಯನ್ ಹೇಳಿದ್ದಾರೆ. 

Published: 09th March 2021 04:04 PM  |   Last Updated: 09th March 2021 04:04 PM   |  A+A-


Stay away from crony lending, focus on high quality loans: Chief Economic Adviser tells financial institutions

ವಿಶ್ವಾಸಾರ್ಹರಲ್ಲದವರಿಗೆ ಸಾಲ ನಿಲ್ಲಿಸಿ; ಹೆಚ್ಚು ಗುಣಮಟ್ಟದ ಬಗ್ಗೆ ಗಮನ ಹರಿಸಿ: ಹಣಕಾಸು ಸಂಸ್ಥೆಗಳಿಗೆ ಸಿಇಎ

Posted By : Srinivas Rao BV
Source : The New Indian Express

ನವದೆಹಲಿ: ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಬೇಕೆಂದರೆ ವಿಶ್ವಾಸಾರ್ಹತೆ ಇಲ್ಲದವರಿಗೆ ಸಾಲ ನೀಡುವುದನ್ನು ನಿಲ್ಲಿಸಿ, ಸ್ವತ್ತುಗಳ ಸೃಷ್ಟಿಗಾಗಿ ಹೆಚ್ಚಿನ ಗುಣಮಟ್ಟದ ಸಾಲಗಳತ್ತ ಗಮನಹರಿಸಿ ಎಂದು ಹಣಕಾಸು ಸಂಸ್ಥೆಗಳಿಗೆ ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ ಸುಬ್ರಹ್ಮಣಿಯನ್ ಹೇಳಿದ್ದಾರೆ. 

1990 ರಿಂದಲೂ ಬ್ಯಾಂಕಿಂಗ್ ಕ್ಷೇತ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಾಲಪಡೆಯಲು ಅತ್ಯಂತ ಯೋಗ್ಯ, ನಂಬಿಕಸ್ಥರಿಗೆ ಸಾಲ ಸಿಗದೇ ವಿಶ್ವಾಸಾರ್ಹತೆ ಇಲ್ಲದ ಉದ್ಯಮಿಗಳಿಗೆ ಸಾಲ ನೀಡಿದ್ದು ಪ್ರಮುಖ ಕಾರಣ ಎಂದು ಸುಬ್ರಹ್ಮಣಿಯನ್ ಹೇಳಿದ್ದಾರೆ.
 
ಸಾಲ ಪಡೆಯುವ ವ್ಯಕ್ತಿಗೆ ಅದನ್ನು ಮರುಪಾವತಿಸಲು ಸಾಧ್ಯವಾಗದೇ ತೀರಾ ನಂಬಿಕಸ್ಥರಲ್ಲದೇ ಇದ್ದರೂ ಹೆಚ್ಚು ಸಂಪರ್ಕ ಹೊಂದಿದ್ದ ಕಾರಣದಿಂದಾಗಿ ಸಾಲ ನೀಡಲಾಗುತ್ತಿತ್ತು. ಇದರಿಂದಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮಸ್ಯೆಗಳು ಪ್ರಾರಂಭವಾದವು ಎಂದು ಎಫ್ಐಸಿಸಿಐ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುಬ್ರಹ್ಮಣಿಯನ್ ಮಾತನಾಡಿದ್ದಾರೆ. ಹಣಕಾಸು ವಲಯ ಕರ್ತವ್ಯ ಆರ್ಥಿಕತೆಯಲ್ಲಿ ಬಂಡವಾಳ ಹಂಚಿಕೆ ಸೂಕ್ತವಾಗಿರುವಂತೆ ನೋಡಿಕೊಳ್ಳುವುದಾಗಿರುತ್ತದೆ.

ಅದಾಗಲೇ ಹಲವಾರು ರೀತಿಗಳ ಸಮಸ್ಯೆಗಳನ್ನು ಎದುರಿಸುತ್ತಿದ್ದ ಮೂಲಸೌಕರ್ಯದೆಡೆಗೆ ಬ್ಯಾಂಕ್ ಗಳು ಹೆಚ್ಚಾಗಿ ತೆರೆದುಕೊಂಡಿದ್ದೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬ್ಯಾಡ್ ಲೋನ್ (ವಸೂಲಾಗದ ಸಾಲ)ಗೆ ಪ್ರಮುಖ ಕಾರಣವಾಯಿತು 

ಈಗ ಆರ್ಥಿಕ ವಲಯ ವಿಶ್ವಾಸಾರ್ಹತೆ ಇಲ್ಲದವರಿಗೆ ಹೆಚ್ಚಿನ ಸಾಲ ನೀಡುವುದನ್ನು ನಿಲ್ಲಿಸಿ ಹೆಚ್ಚು ಗುಣಮಟ್ಟದ ಸಾಲ ಪ್ರಮುಖವಾಗಿ ಮೂಲಸೌಕರ್ಯದೆಡೆಗೆ ಬಂಡವಾಳ ಹೂಡಿಕೆ ಮಾಡುವ ಜವಾಬ್ದಾರಿಯನ್ನು ತುರ್ತಾಗಿ ತೆಗೆದುಕೊಳ್ಳಬೇಕಿದೆ, ಇದೇ ಆರ್ಥಿಕ ವಲಯದ ಮೂಲ ಮಂತ್ರ ಎಂದು ಸುಬ್ರಹ್ಮಣಿಯನ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಹೆಚ್ಚು ಗುಣಮಟ್ಟದ ಸಾಲ ನೀಡುವುದಕ್ಕಾಗಿ ಆರ್ಥಿಕ ವಲಯದಲ್ಲಿ ಕಾರ್ಪೊರೇಟ್ ಗೌರ್ನೆನ್ಸ್ ನ್ನು ಬಲಪಡಿಸಬೇಕೆಂದು ಸುಬ್ರಹ್ಮಣಿಯನ್ ಸಲಹೆ ನೀಡಿದ್ದಾರೆ.

Stay up to date on all the latest ವಾಣಿಜ್ಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp