ದೇಶದ ಪ್ರತಿಷ್ಠಿತ ಸಿಇಒಗಳು, ಜಾವಗಲ್ ಶ್ರೀನಾಥ್ ರಿಂದ 'ಕೂ' ಆಪ್ ನ ಚೀನಾ ಹೂಡಿಕೆ ಪಾಲು ಖರೀದಿ!

ಭಾರತದ ಪ್ರತಿಷ್ಠಿತ ಸಿಇಒ ಗಳು ಹಾಗೂ ಮಾಜಿ ಕ್ರಿಕೆಟಿಗ ಜಾವ್ಗಲ್ ಶ್ರೀನಾಥ್ ಕೂ ಆಪ್ ನ ಚೀನಾ ಹೂಡಿಕೆಯ ಪಾಲನ್ನು ಖರೀದಿಸಿದ್ದಾರೆ. 

Published: 17th March 2021 08:56 PM  |   Last Updated: 18th March 2021 01:00 PM   |  A+A-


Koo

'ಕೂ' ಆ್ಯಪ್‌

Posted By : Srinivas Rao BV
Source : The New Indian Express

ಬೆಂಗಳೂರು: ಭಾರತದ ಪ್ರತಿಷ್ಠಿತ ಸಿಇಒ ಗಳು ಹಾಗೂ ಮಾಜಿ ಕ್ರಿಕೆಟಿಗ ಜಾವ್ಗಲ್ ಶ್ರೀನಾಥ್ ಕೂ ಆಪ್ ನ ಚೀನಾ ಹೂಡಿಕೆಯ ಪಾಲನ್ನು ಖರೀದಿಸಿದ್ದಾರೆ. 

ಚೀನಾದ ಶುನ್ವೇ ಕ್ಯಾಪಿಟಲ್ ಬಾಂಬಿನೇಟ್ ಟೆಕ್ನಾಲಜೀಸ್ ಸಾಮಾಜಿಕ ಜಲಾತಾಣ ಕೂ ಆಪ್ ನಲ್ಲಿ ಹೂಡಿಕೆ ಮಾಡಿತ್ತು

ಭಾರತದ ಕಾನೂನಿಗೆ ಟ್ವಿಟರ್ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬ ಕಾರಣಕ್ಕಾಗಿ ಟ್ವಿಟರ್ ಗೆ ಭಾರತ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ವಿಟರ್ ಮಾದರಿಯ ಕೂ ಆಪ್ ಗೆ ಕಳೆದ ತಿಂಗಳಿನಿಂದ ಹೆಚ್ಚಿನ ಮನ್ನಣೆ ದೊರೆತಿದೆ. 

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕೂ ಆಪ್  ಈ ಬಗ್ಗೆ ಮಾಹಿತಿ ನೀಡಿದ್ದು ಜಾವ್ಗಲ್ ಶ್ರೀನಾಥ್, ಬುಕ್ ಮೈ ಶೋನ ಸ್ಥಾಪಕ ಅಶೀಶ್ ಹೇಮರಜನಿ, ಉಡಾನ್ ನ ಸಹ ಸಂಸ್ಥಾಪಕ ಸುಜೀತ್ ಕುಮಾರ್, ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣ ಮೂರ್ತಿ ಹಾಗೂ ಜಿರೋಧಾ ಸ್ಥಾಪಕ ನಿಖಿಲ್ ಕಾಮತ್ ಶುನ್ವೇ ಕ್ಯಾಪಿಟಲ್ ನ ಷೇರುಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿಸಿದೆ. 2018 ರಲ್ಲಿ ಕೂ ಆಪ್ ನಲ್ಲಿ ಶೇ.11 ರಷ್ಟಿದ್ದ ಶುನ್ವೇ ಕ್ಯಾಪಿಟಲ್  ಪಾಲುದಾರಿಕೆ ಇತ್ತೀಚೆಗೆ ಶೇ.9 ಕ್ಕೆ ಕುಸಿದಿತ್ತು. 

Stay up to date on all the latest ವಾಣಿಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp