ನೋಕಿಯಾ ಸಂಸ್ಥೆಯಿಂದ 10 ಸಾವಿರ ಉದ್ಯೋಗಿಗಳ ನೌಕರಿಗೆ ಕತ್ತರಿ: 5 ಜಿ, ಕ್ಲೌಡ್ ಗೆ ಆದ್ಯತೆ

ಪ್ರತಿಷ್ಠಿತ ಮೊಬೈಲ್ ತಯಾರಕ ಸಂಸ್ಥೆ ನೋಕಿಯಾ ಸಂಸ್ಥೆಯ ಪುನಾರಚನೆ ಯೋಜನೆಯ ಭಾಗವಾಗಿ 10 ಸಾವಿರ ಉದ್ಯೋಗಿಗಳ ನೌಕರಿಗೆ  ಕತ್ತರಿ ಹಾಕಲು ಮುಂದಾಗಿದೆ. 

Published: 17th March 2021 05:25 PM  |   Last Updated: 17th March 2021 05:26 PM   |  A+A-


Nokia

ನೋಕಿಯಾ

Posted By : Srinivas Rao BV
Source : IANS

ನವದೆಹಲಿ: ಪ್ರತಿಷ್ಠಿತ ಮೊಬೈಲ್ ತಯಾರಕ ಸಂಸ್ಥೆ ನೋಕಿಯಾ ಸಂಸ್ಥೆಯ ಪುನಾರಚನೆ ಯೋಜನೆಯ ಭಾಗವಾಗಿ 10 ಸಾವಿರ ಉದ್ಯೋಗಿಗಳ ನೌಕರಿಗೆ  ಕತ್ತರಿ ಹಾಕಲು ಮುಂದಾಗಿದೆ. 

ಸಂಶೋಧನೆ ಅಭಿವೃದ್ಧಿ ಹಾಗೂ 5ಜಿ, ಕ್ಲೌಡ್, ಡಿಜಿಟಲ್ ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸಂಸ್ಥೆ ಯೋಜನೆಗಳನ್ನು ಹೊಂದಿದೆ. 

2023 ರ ವರ್ಷಾಂತ್ಯದ ವೇಳೆಗೆ 600 ಮಿಲಿಯನ್ ಯೂರೋಗಳನ್ನು ಉಳಿತಾಯ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ. ಉದ್ಯೋಗ ಕಡಿತದಿಂದ ಉಳಿತಾಯವಾಗುವ ಹಣವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ಬಳಕೆ ಮಾಡಲಾಗುತ್ತದೆ. 

"90000 ಉದ್ಯೋಗಿಗಳಿರುವ ಸಂಸ್ಥೆಯಲ್ಲಿ ಪುನಾರಚನೆಯ ಬಳಿಕ ಉದ್ಯೋಗಿಗಳ ಸಂಖ್ಯೆ 80000 ಕ್ಕೆ ಇಳಿಕೆಯಾಗಲಿದೆ ಎಂದು ಸಂಸ್ಥೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಹೊಸ ಕಾರ್ಯವಿಧಾನ ವಿನ್ಯಾಸವನ್ನು ನೋಕಿಯಾ ಘೋಷಿಸಿತ್ತು. 

Stay up to date on all the latest ವಾಣಿಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp