ಸತತ ಎರಡನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಕಡಿತ: ಇಂದಿನ ದರ ಎಷ್ಟಿದೆ ನೋಡಿ!
ಸತತ ದರ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರು ತುಸು ನಿಟ್ಟಿಸಿರು ಬಿಡುವಂತೆ ಆಗಿದೆ. ಹೌದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸತತ ಎರಡನೇ ಬಾರಿಗೆ ದರ ಇಳಿಕೆಯಾಗಿದೆ.
Published: 25th March 2021 03:12 PM | Last Updated: 25th March 2021 03:16 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಸತತ ದರ ಏರಿಕೆಯಿಂದ ಕಂಗಾಲಾಗಿದ್ದ ವಾಹನ ಸವಾರರು ತುಸು ನಿಟ್ಟಿಸಿರು ಬಿಡುವಂತೆ ಆಗಿದೆ. ಹೌದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಸತತ ಎರಡನೇ ಬಾರಿಗೆ ದರ ಇಳಿಕೆಯಾಗಿದೆ.
ಗುರುವಾರ ಪೆಟ್ರೋಲ್ ದರ 21 ಪೈಸೆ ಮತ್ತು ಡೀಸೆಲ್ ದರ ಲೀಟರ್ ಗೆ 20 ಪೈಸೆ ಇಳಿಕೆಯಾಗಿದೆ. ಫೆಬ್ರವರಿ ತಿಂಗಳ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಇಂದು 90 ರೂಪಾಯಿ 99 ಪೈಸೆಯಿಂದ 90 ರೂಪಾಯಿ 78 ಪೈಸೆಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆ 81 ರೂಪಾಯಿ 30 ಪೈಸೆಯಿಂದ 81 ರೂಪಾಯಿ 10 ಪೈಸೆಗೆ ಇಳಿದಿದೆ. ದೇಶಾದ್ಯಂತ ಈ ಇಳಿಕೆ ದರ ಅನ್ವಯವಾಗುತ್ತಿದ್ದು, ಸ್ಥಳೀಯ ತೆರಿಗೆ ಪದ್ಧತಿಯ ಲೆಕ್ಕಾಚಾರದಿಂದ ರಾಜ್ಯದಿಂದ ರಾಜ್ಯಕ್ಕೆ ಇಂಧನ ದರ ವ್ಯತ್ಯಾಸವಿರುತ್ತದೆ.
ಕೋಲ್ಕತ್ತಾದಲ್ಲಿ ಪೆಟ್ರೋಲ್ ಇಂದಿನ ದರ 90.98 ರೂ. ಮುಂಬೈ 97.19 ರೂ. ಚೆನ್ನೈ 92.77 ರೂ. ಇನ್ನು ಬೆಂಗಳೂರಿನಲ್ಲಿ 93.28 ರೂಪಾಯಿ ಇದೆ.
ಕೋಲ್ಕತ್ತಾದಲ್ಲಿ ಡೀಸೆಲ್ ಬೆಲೆ 83.98 ರೂ. ಮುಂಬೈನಲ್ಲಿ 88.20 ರೂ. ಚೆನ್ನೈನಲ್ಲಿ 86.10 ರೂ. ಇನ್ನು ಬೆಂಗಳೂರಿನಲ್ಲಿ 85.99 ರೂಪಾಯಿ ಇದೆ.
ಇನ್ನು ನಿನ್ನೆಯಷ್ಟೇ ಪೆಟ್ರೋಲ್ ಬೆಲೆಯಲ್ಲಿ 18 ಪೈಸೆ ಮತ್ತು ಡೀಸೆಲ್ ಬೆಲೆಯಲ್ಲಿ 17 ಪೈಸೆ ಇಳಿಯಾಗಿತ್ತು.