ಟೆಸ್ಲಾ ಗ್ರಾಹಕರು ತಮ್ಮ ಕಾರುಗಳಿಗೆ ಬಿಟ್ ಕಾಯಿನ್ ಮೂಲಕ ಪಾವತಿಸಬಹುದು: ಎಲಾನ್ ಮಸ್ಕ್
ಅತ್ಯಾಧುನಿಕ ಹಾಗೂ ಐಷರಾಮಿ ಫೀಚರ್ಗಳನ್ನು ಹೊಂದಿರುವ ವಿಶ್ವದ ಬಹುಬೇಡಿಕೆಯ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಟೆಸ್ಲಾ ಇಂಕಾ ಮುಖ್ಯಸ್ಥ ಎಲಾನ್ ಮಸ್ಕ್ ದೊಡ್ಡ ಆಫರ್'ವೊಂದನ್ನು ನೀಡಿದ್ದಾರೆ.
Published: 25th March 2021 01:52 PM | Last Updated: 25th March 2021 02:09 PM | A+A A-

ಎಲಾನ್ ಮಸ್ಕ್
ನವದೆಹಲಿ: ಅತ್ಯಾಧುನಿಕ ಹಾಗೂ ಐಷರಾಮಿ ಫೀಚರ್ಗಳನ್ನು ಹೊಂದಿರುವ ವಿಶ್ವದ ಬಹುಬೇಡಿಕೆಯ ಟೆಸ್ಲಾ ಎಲೆಕ್ಟ್ರಿಕ್ ಕಾರು ಖರೀದಿದಾರರಿಗೆ ಟೆಸ್ಲಾ ಇಂಕಾ ಮುಖ್ಯಸ್ಥ ಎಲಾನ್ ಮಸ್ಕ್ ದೊಡ್ಡ ಆಫರ್'ವೊಂದನ್ನು ನೀಡಿದ್ದಾರೆ.
ಟೆಸ್ಲಾ ವಾಹನವನ್ನು ಬಿಟ್ಕಾಯಿನ್ ಬಳಸಿ ಖರೀದಿಸಬಹುದು. ಈ ವರ್ಷದ ಕೊನೆಯಲ್ಲಿ ಈ ಆಯ್ಕೆ ಅಮೆರಿಕದ ಹೊರಗೆ ಲಭ್ಯ ಇರಲಿದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ.
ನೀವು ಈಗ ಬಿಟ್ ಕಾಯಿನ್ನೊಂದಿಗೆ ಟೆಸ್ಲಾವನ್ನು ಖರೀದಿಸಬಹುದು. ಟೆಸ್ಲಾಗೆ ಪಾವತಿಸಿದ ಬಿಟ್ಕಾಯಿನ್ ಅನ್ನು ಬಿಟ್ಕಾಯಿನ್ ಆಗಿ ಉಳಿಸಿಕೊಳ್ಳಲಾಗುವುದು, ಅದನ್ನು ಫಿಯೆಟ್ ಕರೆನ್ಸಿಯಾಗಿ ಪರಿವರ್ತಿಸಲಾಗುವುದಿಲ್ಲ. ಕಂಪನಿಯ ಆಂತರಿಕ ವ್ಯವಹಾರವನ್ನು ಸಹ ಬಿಟ್ಕಾಯಿನ್ಗಳ ಮೂಲಕವೇ ನಡೆಸಲಾಗುವುದು. ಅಮೆರಿಕ ಹೊರತುಪಡಿಸಿ ಇತರ ದೇಶಗಳ ಗ್ರಾಹಕರಿಗೆ ವರ್ಷಾಂತ್ಯಕ್ಕೆ ಈ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಕಳೆದ ತಿಂಗಳು, ಟೆಸ್ಲಾ ತಾನು 1.5 ಬಿಲಿಯನ್ ಡಾಲರ್ ಬಿಟ್ಕಾಯಿನ್ ಖರೀದಿಸಿರುವುದನ್ನು ಬಹಿರಂಗಪಡಿಸಿತ್ತು. ಶೀಘ್ರದಲ್ಲೇ ಅದನ್ನು ಕಾರುಗಳಿಗೆ ಪಾವತಿಸುವ ರೂಪವಾಗಿ ಸ್ವೀಕರಿಸಲಿದ್ದು, ಇದು ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದು ಹೇಳಿತ್ತು.
ಎಲಾನ್ ಮಸ್ಕ್ ಅವರ ಬಹು ಜನಪ್ರಿಯ ಮತ್ತು ಅಮೆರಿಕಾ ದೇಶದ ದೈತ್ಯ ಎಲೆಕ್ರಿಕ್ ಕಾರು 2021ಕ್ಕೆ ಭಾರತಕ್ಕೆ ಬರುವ ನಿರೀಕ್ಷೆಗಳಿವೆ. ಟೆಸ್ಲಾ ಕಂಪನಿಯ ಮಾಡೆಲ್ 3 ಕಾರು ಭಾರತದ ಮಾರುಕಟ್ಟೆಗೆ ಕಾಲಿಡುವ ಮೊದಲ ಕಾರಾಗಲಿದ್ದು, ಭಾರತದಲ್ಲಿ ಈ ಕಾರು ರೂ. 55 ಲಕ್ಷದಿಂದ 60 ಲಕ್ಷಕ್ಕೆ ಲಭ್ಯವಾಗಬಹುದು ಎಂದು ವರದಿಗಳು ತಿಳಿಸಿವೆ.