ಪಿಪಿಎಫ್, ಕೆವಿಪಿ, ಇನ್ನಿತರ ಸಣ್ಣ ಉಳಿತಾಯದ ಮೇಲಿನ ಬಡ್ಡಿ ದರ ಕಡಿತಗೊಳಿಸಿದ ಮೋದಿ ಸರ್ಕಾರ!

ಕೊರೋನಾ ಸಂಕಷ್ಟದಲ್ಲಿ ಸಿಲುಕಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಹೊಡೆತ ನೀಡಿದ್ದು, ಪಿಪಿಎಫ್, ಕೆವಿಪಿ, ಇನ್ನಿತರ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. 

Published: 31st March 2021 11:16 PM  |   Last Updated: 01st April 2021 12:28 PM   |  A+A-


For representational purposes (File Photo | AFP)

ಸಾಂಕೇತಿಕ ಚಿತ್ರ

Posted By : Srinivas Rao BV
Source : The New Indian Express

ನವದೆಹಲಿ: ಕೊರೋನಾ ಸಂಕಷ್ಟದಲ್ಲಿ ಸಿಲುಕಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಹೊಡೆತ ನೀಡಿದ್ದು, ಪಿಪಿಎಫ್, ಕೆವಿಪಿ, ಇನ್ನಿತರ ಉಳಿತಾಯಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. 

2021-22 ರ ಮೊದಲ ತ್ರೈಮಾಸಿಕದಲ್ಲಿ ಮೋದಿ ಸರ್ಕಾರ ಎನ್ಎಸ್ ಸಿ, ಪಿಪಿಎಫ್ ಉಳಿತಾಯದ ಮೇಲಿನ ಬಡ್ಡಿ ದರವನ್ನು ಶೇ.1.1 ರಷ್ಟು ಕಡಿಮೆ ಮಾಡಿದೆ. 

ಬ್ಯಾಂಕ್ ಗಳಲ್ಲಿ ಸ್ಥಿರ ಠೇವಣಿ ಕುಸಿತವಾಗುತ್ತಿರುವುದರ ಬೆನ್ನಲ್ಲೇ ಮೋದಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಪಿಪಿಎಫ್ ಮೇಲಿನ ಬಡ್ಡಿ ದರವನ್ನು ಶೇ.0.7 ರಷ್ಟು ಅಂದರೆ  ಶೇ. 6.4 ರಷ್ಟಕ್ಕೆ ಕಡಿತಗೊಳಿಸಲಾಗಿದೆ. ಎನ್ಎಸ್ ಸಿ ಮೇಲಿನ ಬಡ್ಡಿ ದರವನ್ನು ಶೇ.5.9 ರಷ್ಟಕ್ಕೆ ಇಳಿಕೆ ಮಾಡಲಾಗಿದೆ. 

ಏಪ್ರಿಲ್ 1 ರಿಂದ ಜೂ.30 ವರೆಗೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಬದಲಾವಣೆ ತರಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 

ಮೂರು ತಿಂಗಳಿಗೊಮ್ಮೆ ಪಾವತಿಯಾಗುವ ನಾಗರಿಕರ ಉಳಿತಾಯ ಯೋಜನೆಗಳಿಗೂ ಕತ್ತರಿ ಬಿದ್ದಿದ್ದು ಶೇ.6.5 ರಷ್ಟಕ್ಕೆ ಇಳಿಕೆ ಮಾಡಲಾಗಿದ್ದರೆ ಇದೇ ಮೊದಲ ಬಾರಿಗೆ ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.0.5 ರಷ್ಟು ಅಂದರೆ ಈಗಿದ್ದ ಶೇ.4 ರಿಂದ ಶೇ.3.5 ರಷ್ಟಕ್ಕೆ ಇಳಿಕೆ ಮಾಡಲಾಗಿದೆ. 

ಎರಡು ವರ್ಷಗಳ ಸ್ಥಿರ ಠೇವಣಿಗೆ ಶೇ.5 ಕ್ಕಿಂತ ಕಡಿಮೆ ಬಡ್ಡಿ ದೊರೆತರೆ ಮೂರು ವರ್ಷಗಳ ಠೇವಣಿಯ ಮೇಲಿನ ಬಡ್ಡಿದರವನ್ನು ಶೇ.0.4 ರಷ್ಟು ಕಡಿಮೆ ಮಾಡಲಾಗಿದೆ.  5 ವರ್ಷಗಳ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ.5.8 ರಷ್ಟಕ್ಕೆ ಇಳಿಕೆ ಮಾಡಲಾಗಿದೆ. 

ಸುಕನ್ಯ ಸಮೃದ್ಧಿ ಯೋಜನೆ, ಮುಂದಿನ ತ್ರೈಮಾಸಿಕದ ವೇಳೆಗೆ ಶೇ.6.9 ರಷ್ಟು ಬಡ್ಡಿ ದರ ನೀಡಲಿದ್ದರೆ, ಕಿಸಾನ್ ವಿಕಾಸ್ ಪತ್ರ ಯೋಜನೆಯ ಬಡ್ಡಿ ದರ ಶೇ.6.9 ರಿಂದ ಶೇ.6.2 ಕ್ಕೆ ಇಳಿಕೆ ಮಾಡಲಾಗಿದೆ.


Stay up to date on all the latest ವಾಣಿಜ್ಯ news
Poll
Yediyurappa

ಕರ್ನಾಟಕ ಸಿಎಂ ಆಗಿ ಬಿ.ಎಸ್. ಯಡಿಯೂರಪ್ಪ ನಿರ್ಗಮನವು ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆಯೇ?


Result
ಹೌದು
ಇಲ್ಲ
flipboard facebook twitter whatsapp