ಜಿಎಸ್‌ಟಿ ಹೊಸ ದಾಖಲೆ: ಏಪ್ರಿಲ್‌ನಲ್ಲಿ 1.41 ಲಕ್ಷ ಕೋಟಿ ರೂ. ಸಂಗ್ರಹ

ಏಪ್ರಿಲ್ 2021ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು ದಾಖಲೆಯ ಗರಿಷ್ಠ ರೂ. 1,41,384 ಕೋಟಿ ರೂ,ಗೆ ಹೆಚ್ಚಳವಾಗಿದೆ. ಇದರಲ್ಲಿ ಸಿಜಿಎಸ್‌ಟಿ ರೂ. 27,837 ಕೋಟಿ, ಎಸ್‌ಜಿಎಸ್‌ಟಿ ರೂ. 35,621, ಐಜಿಎಸ್‌ಟಿ 68,481 ಕೋಟಿ ರೂ. (ಸರಕುಗಳ ಆಮದುಗಾಗಿ ಸಂಗ್ರಹಿಸಿದ 29,599 ಕೋಟಿ ರೂ. ಸೇರಿದಂತೆ) ಸೇರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಏಪ್ರಿಲ್ 2021ರಲ್ಲಿ ಒಟ್ಟು ಜಿಎಸ್‌ಟಿ ಆದಾಯವು ದಾಖಲೆಯ ಗರಿಷ್ಠ ರೂ. 1,41,384 ಕೋಟಿ ರೂ. ಗೆ ಹೆಚ್ಚಳವಾಗಿದೆ. ಇದರಲ್ಲಿ ಸಿಜಿಎಸ್‌ಟಿ ರೂ. 27,837 ಕೋಟಿ, ಎಸ್‌ಜಿಎಸ್‌ಟಿ ರೂ. 35,621, ಐಜಿಎಸ್‌ಟಿ 68,481 ಕೋಟಿ ರೂ. (ಸರಕುಗಳ ಆಮದುಗಾಗಿ ಸಂಗ್ರಹಿಸಿದ 29,599 ಕೋಟಿ ರೂ. ಸೇರಿದಂತೆ) ಸೇರಿದೆ. ಅಲ್ಲದೆ ಸೆಸ್ ರೂ. 9,445 ಕೋಟಿ (ಸರಕುಗಳ ಆಮದಿಗೆ ಸಂಗ್ರಹಿಸಿದ ರೂ. 981 ಕೋಟಿ ಸೇರಿದಂತೆ) ಒಳಗೊಂಡಿದೆ.

ಏಪ್ರಿಲ್ ನಲ್ಲಿ ಒಟ್ಟು ಆದಾಯ ಸಂಗ್ರಹವು ಹಿಂದಿನ ಗರಿಷ್ಠ 14 ಶೇಕಡಾವನ್ನು ಮೀರಿದೆ. ಮಾರ್ಚ್‌ನಲ್ಲಿ ದೇಶೀಯ ವಹಿವಾಟಿನ ಆದಾಯವು ಶೇಕಡಾ 21 ರಷ್ಟು ಹೆಚ್ಚಾಗಿದೆ. ಜಿಎಸ್‌ಟಿ ಆದಾಯ 1 ಲಕ್ಷ ಕೋಟಿ ದಾಟಿರುವುದು ಇದು ಸತತ ಏಳನೇ ತಿಂಗಳಿನಲ್ಲಿ ಎನ್ನುವುದು ಗಮನಾರ್ಹ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com