ಕೋವಿಡ್-19 ಸಂಬಂಧಿತ ಹೆಲ್ತ್ ಕೇರ್ ಮೂಲಸೌಕರ್ಯಕ್ಕೆ ಆರ್ ಬಿಐ ನಿಂದ 50,000 ಕೋಟಿ ರೂಪಾಯಿ ನಿಗದಿ!

ರಿಸರ್ವ್ ಬ್ಯಾಂಕ್ ನ ಗೌರ್ನರ್ ಶಕ್ತಿಕಾಂತ್ ದಾಸ್ ಅನಿಗದಿತ ಭಾಷಣ ಮಾಡಿದ್ದು, ಆರ್ಥಿಕತೆ ಮೇಲೆ ಕೋವಿಡ್-19 ಎರಡನೇ ಅಲೆಯ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. 
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್

ನವದೆಹಲಿ: ರಿಸರ್ವ್ ಬ್ಯಾಂಕ್ ನ ಗೌರ್ನರ್ ಶಕ್ತಿಕಾಂತ್ ದಾಸ್ ಅನಿಗದಿತ ಭಾಷಣ ಮಾಡಿದ್ದು, ಆರ್ಥಿಕತೆ ಮೇಲೆ ಕೋವಿಡ್-19 ಎರಡನೇ ಅಲೆಯ ಪರಿಣಾಮಗಳ ಬಗ್ಗೆ ಮಾತನಾಡಿದ್ದಾರೆ. 

ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆ ಕಂಡಿದ್ದು, ಒಟ್ಟಾರೆ 2 ಕೋಟಿ ಮಂದಿ ಸೋಂಕಿಗೆ ಗುರಿಯಾಗಿದ್ದಾರೆ. 

ಆರ್ ಬಿಐ ಗೌರ್ನರ್ ಕೋವಿಡ್ ಪರಿಸ್ಥಿತಿಯ ಬಗ್ಗೆ ಮಾತನಾಡಿದ್ದು, "ಬಲಿಷ್ಠ ಆರ್ಥಿಕ ಚೇತರಿಕೆಯಿಂದ ಹೊಸ ಸಮಸ್ಯೆಗಳನ್ನು ಎದುರಿಸುವ ರೀತಿಯಲ್ಲಿ ಪರಿಸ್ಥಿತಿಗಳು ಬದಲಾಗಿವೆ. 

ಕೋವಿಡ್-19 ಬಿಕ್ಕಟ್ಟಿನ ಪರಿಸ್ಥಿತಿಯಿಂದ ಭಾರತ ಹೊರಬರಲಿದೆ ಎಂಬ ವಿಶ್ವಾಸವಿರಲಿ" ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 

ಕೋವಿಡ್-19 ಪರಿಸ್ಥಿತಿಯನ್ನು ಆರ್ ಬಿಐ ಗಮನಿಸುವುದನ್ನು ಮುಂದುವರೆಸಲಿದ್ದು, ಕೋವಿಡ್-19 ವಿರುದ್ಧ ಹೋರಾಡಲು ಅಗತ್ಯವಿರುವ ತನ್ನ ಎಲ್ಲಾ ಸಂಪನ್ಮೂಲಗಳನ್ನೂ ನಿಯೋಜನೆ ಮಾಡಲಿದೆ.

ವ್ಯಾಪಕವಾದ, ಕ್ಷಿಪ್ರಗತಿಯ ಕ್ರಮಗಳನ್ನು ಕೋವಿಡ್-19 ವಿರುದ್ಧ ಹೋರಾಡಲು ಕೈಗೊಳ್ಳಬೇಕಿದೆ. 

"ಆರ್ ಬಿಐ ಕೋವಿಡ್-19 ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ, ಕೋವಿಡ್-19 ಹೆಲ್ತ್ ಕೇರ್ ಗೆ ಮಾರ್ಚ್ 2022 ರ ವರೆಗೂ 50,000 ಕೋಟಿ ರೂಪಾಯಿಗಳನ್ನು ನೀಡಲಿದೆ. ಲಸಿಕೆ ಉತ್ಪಾದಕರಿಗೆ ಆಕ್ಸಿಜನ್ ಸಿಲೆಂಡರ್ ಹಾಗೂ ವೆಂಟಿಲೇಟರ್ ಗಳನ್ನು ಖರೀದಿಸುವುದಕ್ಕಾಗಿ ಈ ಹಣ ಬಳಕೆಯಾಗಲಿದೆ" ಎಂದು ಆರ್ ಬಿಐ ಗೌರ್ನರ್ ಹೇಳಿದ್ದಾರೆ. 

"ದುರ್ಬಲ ಕ್ಷೇತ್ರದವರಿಗೆ ಕ್ಷಿಪ್ರ ಸಾಲ ನೀಡುವುದಕ್ಕಾಗಿ ಬ್ಯಾಂಕ್ ಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಬ್ಯಾಂಕ್ ಗಳು ತಮ್ಮ ಬ್ಯಾಲೆನ್ಸ್ ಶೀಟ್ ನಲ್ಲಿ ಕೋವಿಡ್-19 ಲೋನ್ ಬುಕ್ ನ್ನು ಪ್ರಾರಂಭಿಸಲಿದ್ದು, ಕೋವಿಡ್-19 ಬುಕ್ ಗೆ ಸಮನಾದ ಹೂಡಿಕೆಯನ್ನು ಆರ್ ಬಿಐ ನಲ್ಲಿ 40 ಬಿಪಿಎಸ್ ಹಾಗೂ ಅದಕ್ಕಿಂತ ಮೇಲ್ಪಟ್ಟ ರಿವರ್ಸ್ ರೆಪೋ ದರದಲ್ಲಿ ಮಾಡಬಹುದಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ. 

ಸಾಲ ಪಡೆಯುವ ಖಾಸಗಿ ಹಾಗೂ ಎಂಎಸ್ಎಂಇಗಳಿಗೆ ಸೆ.30, 2021 ವರೆಗೂ ಒನ್-ಟೈಮ್ ರಿಸ್ಟ್ರಕ್ಚರಿಂಗ್ ಗೆ ಅವಕಾಶ ಇರಲಿದೆ. ಪುನಾರಚನೆಯ 1.0 ರ ಅಡಿಯಲ್ಲಿ ಮೊರಾಟೋರಿಯಮ್ ನ್ನು ಒಟ್ಟಾರೆ 2 ವರ್ಷಗಳ ಕಾಲ ವಿಸ್ತರಣೆ ಮಾಡಬಹುದಾಗಿದೆ ಎಂದು ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com