2 ದಿನಗಳ ನಂತರ ಮತ್ತೆ ತೈಲ ಬೆಲೆ ಏರಿಕೆ: ಇಂದಿನ ಪೆಟ್ರೋಲ್, ಡೀಸೆಲ್ ದರ ಇಂತಿದೆ...

ಗಾಯದ ಮೇಲೆ ಬರೆ ಎಳೆದಂತೆ ಕೊರೋನಾ ಸಂಕಷ್ಟದ ನಡುವಲ್ಲೇ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಲೇ ಇದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಗಾಯದ ಮೇಲೆ ಬರೆ ಎಳೆದಂತೆ ಕೊರೋನಾ ಸಂಕಷ್ಟದ ನಡುವಲ್ಲೇ ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಲೇ ಇದೆ. 

ಮೇ 6ರಿಂದ ಮೇ 7ರ ವರೆಗೂ ಸತತವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿದ್ದ ಕೇಂದ್ರ ಸರ್ಕಾರ 2 ದಿನಗಳ ವಿರಾಮದ ಬಳಿಕ ಇಂದು ಮತ್ತೆ ತೈಲ ದರವನ್ನು ಏರಿಕೆ ಮಾಡಿದೆ. 

ಮೇ 5 ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 13 ಪೈಸೆ ಮತ್ತು ಪ್ರತಿ ಡೀಸೆಲ್ ಮೇಲೆ 21 ಪೈಸೆ, ಮೇ 6ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 18 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 31 ಪೈಸೆ ಹಾಗೂ ಮೇ 7 ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 25 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 33 ಪೈಸೆ ಬೆಲೆ ಹೆಚ್ಚಿಸಿತ್ತು.

ಇದೀಗ ಮತ್ತೆ ಮೇ.10 ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 26 ಪೈಸೆ ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲೆ 33 ಪೈಸೆ ಹೆಚ್ಚಳ ಮಾಡಿದೆ. 

ದೇಶದ ಪ್ರಮುಖ ನಗರಗಳಲ್ಲಿನ ತೈಲ ದರ ಇಂತಿದೆ...

  • ಬೆಂಗಳೂರು: ಪೆಟ್ರೋಲ್ ರೂ.94.57 - ಡೀಸೆಲ್ ರೂ.86.99  
  • ದೆಹಲಿ: ಪೆಟ್ರೋಲ್ ರೂ.91.53- ಡೀಸೆಲ್ ರೂ.82.06
  • ಚೆನ್ನೈ: ಪೆಟ್ರೋಲ್ ರೂ.93.38 - ರೂ. ಡೀಸೆಲ್ 86.96
  • ಕೋಲ್ಕತಾ: ರೂ.ಪೆಟ್ರೋಲ್ 91.66 - ಡೀಸೆಲ್ ರೂ.84.90
  • ಮುಂಬೈ: ಪೆಟ್ರೋಲ್ ರೂ.97.86- ಡೀಸೆಲ್ ರೂ.89.17

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com