ಇಂದೂ ತೈಲೋತ್ಪನ್ನಗಳ ಬೆಲೆ ಹೆಚ್ಚಳ: ಪೆಟ್ರೋಲ್ ದರದಲ್ಲಿ 25 ಪೈಸೆ ಏರಿಕೆ

ದೇಶದಲ್ಲಿ ಸತತ ಮೂರನೇ ದಿನ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಇಂದು ಪೆಟ್ರೋಲ್ ದರದಲ್ಲಿ 25 ಪೈಸೆ ಮತ್ತು ಡೀಸೆಲ್ ದರದಲ್ಲಿ 27 ಪೈಸೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ ಸತತ ಮೂರನೇ ದಿನ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಇಂದು ಪೆಟ್ರೋಲ್ ದರದಲ್ಲಿ 25 ಪೈಸೆ ಮತ್ತು ಡೀಸೆಲ್ ದರದಲ್ಲಿ 27 ಪೈಸೆ ಏರಿಕೆಯಾಗಿದೆ.

ಬುಧವಾರ ಮತ್ತೆ ದೇಶದಲ್ಲಿ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ 25 ಪೈಸೆ ಮತ್ತು ಡೀಸೆಲ್ ದರ 27 ಪೈಸೆಯಷ್ಟು ಏರಿಕೆಯಾಗಿದೆ. ಆ ಮೂಲಕ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 92.05 ರೂಗೆ ಏರಿಕೆಯಾಗಿದ್ದು, ಡೀಸೆಲ್ ದರ 82.61ರೂಗೆ ಏರಿಕೆಯಾಗಿದೆ.

ಇನ್ನು ವಾಣಿಜ್ಯ ನಗರಿ ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 98.36ಕ್ಕೆ ಏರಿಕೆಯಾಗಿದ್ದು, ಡೀಸೆಲ್ ದರ 89.75ರೂ ಗೆ ಏರಿಕೆಯಾಗಿದೆ. ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಮೊದಲ ಬಾರಿಗೆ ಪೆಟ್ರೋಲ್ ದರ 100 ರೂ ಗಡಿ ದಾಟಿದ್ದು, ಇಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 100.08ರೂ ಗೆ  ಏರಿಕೆಯಾಗಿದೆ. ಅಂತೆಯೇ ಡೀಸೆಲ್ ದರ 90.05ರೂ ಗೆ ಏರಿಕೆಯಾಗಿದೆ. ಆ ಮೂಲಕ ಪೆಟ್ರೋಲ್ ದರ 100ರೂ ಗಡಿ ದಾಟಿದ ದೇಶದ ರಾಜಧಾನಿ ಎಂಬ ಕುಖ್ಯಾತಿಗೆ ಭೋಪಾಲ್ ಪಾತ್ರವಾದಂತಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 26 ಪೈಸೆ ಏರಿಕೆಯಾಗಿದ್ದು, ಆ ಮೂಲಕ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 95.17ಕ್ಕೆ ಏರಿಕೆಯಾಗಿದ್ದು, ಡೀಸೆಲ್ ದರ ಕೂಡ 27 ಪೈಸೆ ಏರಿಕೆಯಾಗಿ ಪ್ರತೀ ಲೀಟರ್ ಡೀಸೆಲ್ ದರ 87.63 ರೂಗೆ ಏರಿಕೆಯಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com