ಅಪೊಲೊ ಆಸ್ಪತ್ರೆ, ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಸಹಭಾಗಿತ್ವದಲ್ಲಿ ಸ್ಪುಟ್ನಿಕ್ ವಿ ಕೋವಿಡ್-19 ಲಸಿಕಾ ಕಾರ್ಯಕ್ರಮ!

ಅಪೊಲೊ ಆಸ್ಪತ್ರೆಗಳು ಮತ್ತು ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಸಹಭಾಗಿತ್ವದಲ್ಲಿ ದೇಶದಲ್ಲಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ  ಕೋವಿಡ್-19 ಲಸಿಕೆ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. 
ಸ್ಪುಟ್ನಿಕ್ ವಿ ಲಸಿಕೆ
ಸ್ಪುಟ್ನಿಕ್ ವಿ ಲಸಿಕೆ

ನವದೆಹಲಿ: ಅಪೊಲೊ ಆಸ್ಪತ್ರೆಗಳು ಮತ್ತು ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಸಹಭಾಗಿತ್ವದಲ್ಲಿ ದೇಶದಲ್ಲಿ ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ  ಕೋವಿಡ್-19 ಲಸಿಕಾ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿದೆ. ಹೀಗಂತಾ ಉಭಯ ಸಂಸ್ಥೆಗಳು ಸೋಮವಾರ ಹೇಳಿವೆ.

ಹೈದರಾಬಾದಿನಲ್ಲಿ ವ್ಯಾಕ್ಸಿನೇಷನ್ ನೊಂದಿಗೆ ಮೊದಲ ಹಂತದ ಕಾರ್ಯಕ್ರಮ ಇಂದು ಆರಂಭವಾಗುತ್ತಿದ್ದು,  ನಾಳೆ ವಿಶಾಖಪಟ್ಟಣಂನ ಅಪೊಲೊ ಆಸ್ಪತ್ರೆಯಲ್ಲಿ ನಡೆಯಲಿದೆ. ಕೋವಿನ್ ನಲ್ಲಿ ನೋಂದಣಿ ಸೇರಿದಂತೆ ಸರ್ಕಾರದಿಂದ ಶಿಫಾರಸುಗೊಂಡ ಮಾರ್ಗಸೂಚಿಗಳನ್ನು ವ್ಯಾಕ್ಸಿನೇಷನ್ ನಲ್ಲಿ ಪಾಲಿಸಲಾಗುತ್ತಿದೆ.

ವ್ಯವಸ್ಥೆಗಳ ಪರೀಕ್ಷೆ, ಕೋಲ್ಡ್ ಚೈನ್ ಲಾಜೆಸ್ಟಿಕ್ ಮತ್ತು ಲಸಿಕೆ ಸಿದ್ಧತೆಗಾಗಿ ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಮತ್ತು ಅಪೊಲೊ ಆಸ್ಪತ್ರೆಗಳಿಗೆ ಅವಕಾಶ ನೀಡಲಾಗಿದೆ. ಸ್ಪುಟ್ನಿಕ್ ವಿ ಲಸಿಕೆಯೊಂದಿಗೆ ಸಮುದಾಯಕ್ಕೆ ಕೋವಿಡ್ ಲಸಿಕೆಗಳ ಲಭ್ಯತೆಯನ್ನು ಸುಲಭಗೊಳಿಸಲು ನಾವು ಮಹತ್ವದ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಅಪೊಲೊ ಆಸ್ಪತ್ರೆ ವಿಭಾಗದ ಅಧ್ಯಕ್ಷ ಕೆ ಹರಿ ಪ್ರಸಾದ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಖಾಸಗಿ ಕ್ಷೇತ್ರಕ್ಕೆ ಲಿಸಿಕೆ ಕಾರ್ಯಕ್ರಮ ತೆರೆಯುವ ಮೂಲಕ ಹೆಲ್ ಕೇರ್ ವೇಗವನ್ನು ಹೆಚ್ಚಿಸಲು ತೀವ್ರ ಪ್ರಯತ್ನ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳ ಆವರಣಗಳಲ್ಲಿ ವಾಕ್ಸಿನೇಷನ್ ನಡೆಸಲು ಕಾರ್ಪೊರೇಟರ್ ಗಳೊಂದಿಗೆ ಚರ್ಚಿಸಲಾಗಿದೆ.ಪ್ರಸ್ತುತ ದೇಶಾದ್ಯಂತ 60 ಕಡೆಗಳಲ್ಲಿ ಲಸಿಕೆ ಹಾಕಲಾಗುತ್ತಿದೆ ಎಂದು ಪ್ರಸಾದ್ ಹೇಳಿದರು. 

ಪೈಲಟ್ ಕಾರ್ಯಕ್ರಮವನ್ನು ಹೆಚ್ಚಿಸಲು ಮತ್ತು ಸಾಧ್ಯವಾದಷ್ಟು ಮಟ್ಟಿಗೆ ದೇಶದ ಅನೇಕ ಜನರಿಗೆ ಲಸಿಕೆ ದೊರೆಯುವಂತೆ ಮಾಡಲು
ಇನ್ನಿತರ ನಗರಗಳಿಗೆ ಲಸಿಕೆ ಕೊಂಡೊಯ್ಯಲಾಗುವುದು ಎಂದು ಉಭಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದಾಗಿ ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಬ್ರಾಡೆಂಡ್  ಮಾರ್ಕೆಟ್  ಸಿಇಒ ಎಂ ವಿ. ರಮಣ ತಿಳಿಸಿದ್ದಾರೆ.

ಈವರೆಗೂ 5 ಲಕ್ಷ ಡೋಸ್ ಆಮದು ಮಾಡಿಕೊಳ್ಳಲಾಗಿದೆ. ಹೈದರಾಬಾದ್ ಮತ್ತು ವಿಶಾಖಪಟ್ಟಣಂ ನಂತರ ದೆಹಲಿ. ಮುಂಬೈ. ಬೆಂಗಳೂರು, ಅಹಮದಾಬಾದ್, ಚೆನ್ನೈ, ಕೊಲ್ಕತ್ತಾ ಮತ್ತು ಪುಣೆಗೆ ಪೈಲಟ್ ಕಾರ್ಯಕ್ರಮವನ್ನು ವಿಸ್ತರಿಸಲಾಗುತ್ತದೆ.

ಆಗಸ್ಟ್ 2020ರಲ್ಲಿ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ತಯಾರಿಸಿರುವುದಾಗಿ ರಷ್ಯಾ ಹೇಳಿತ್ತು. ನಂತರ ಸ್ಪುಟ್ನಿಕ್ ವಿ ಕ್ಲಿನಿಕಲ್ ಪ್ರಯೋಗಕ್ಕಾಗಿ  ಸೆಪ್ಟೆಂಬರ್ ನಲ್ಲಿ ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಮತ್ತು ರಷ್ಯಾ ನೇರ ಹೂಡಿಕೆ ನಿಧಿ ಪಾಲುದಾರಿಕೆಯನ್ನು ಘೋಷಿಸಿದ್ದವು. ವಿ ಸ್ಪುಟ್ನಿಕ್ ತುರ್ತು ಬಳಕೆಗಾಗಿ ಭಾರತದ ಔಷಧ ನಿಯಂತ್ರಕರಿಂದ ಡಾ. ರೆಡ್ಡಿ'ಸ್ ಲ್ಯಾಬೊರೇಟರಿ ಅನುಮೋದನೆ ಪಡೆದುಕೊಂಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com