ಏರ್ ಇಂಡಿಯಾ ಮೇಲೆ ಬೃಹತ್ ಸೈಬರ್ ದಾಳಿ: 45 ಲಕ್ಷ ಪ್ರಯಾಣಿಕರ ಕ್ರೆಡಿಟ್ ಕಾರ್ಡ್, ಪಾಸ್‌ ಪೋರ್ಟ್ ವಿವರ ಸೋರಿಕೆ

ಭಾರತ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮೇಲೆ ಶುಕ್ರವಾರ ಬೃಹತ್ ಪ್ರಮಾಣದ ಸೈಬರ್ ದಾಳಿ ನಡೆದಿದೆ. ಇದರಲ್ಲಿ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳನ್ನು ಕಳವು ಮಾಡಲಾಗಿದೆ. ಕದ್ದ ದತ್ತಾಂಶವು ಪಾಸ್‌ಪೋರ್ಟ್ ಮತ್ತು ಪ್ರಯಾಣಿಕರ ಕ್ರೆಡಿಟ್ ಕಾರ್ಡ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ಸಂಸ್ಥೆ ಖಚಿತಪಡಿಸಿದೆ.
ಏರ್ ಇಂಡಿಯಾ
ಏರ್ ಇಂಡಿಯಾ

ಚೆನ್ನೈ: ಭಾರತ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಮೇಲೆ ಶುಕ್ರವಾರ ಬೃಹತ್ ಪ್ರಮಾಣದ ಸೈಬರ್ ದಾಳಿ ನಡೆದಿದೆ. ಇದರಲ್ಲಿ ಲಕ್ಷಾಂತರ ಪ್ರಯಾಣಿಕರ ವೈಯಕ್ತಿಕ ವಿವರಗಳನ್ನು ಕಳವು ಮಾಡಲಾಗಿದೆ. ಕದ್ದ ದತ್ತಾಂಶವು ಪಾಸ್‌ಪೋರ್ಟ್ ಮತ್ತು ಪ್ರಯಾಣಿಕರ ಕ್ರೆಡಿಟ್ ಕಾರ್ಡ್ ವಿವರಗಳಂತಹ ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿದೆ ಎಂದು ಸಂಸ್ಥೆ ಖಚಿತಪಡಿಸಿದೆ.

ಈ ಘಟನೆಯು ವಿಶ್ವದ ಸುಮಾರು 4,500,000 ದತ್ತಾಂಶದ ಮೇಲೆ ಪರಿಣಾಮ ಬೀರಿದೆ ಮತ್ತು ಆಗಸ್ಟ್ 26, 2011 ಮತ್ತು ಫೆಬ್ರವರಿ 3, 2021 ರ ನಡುವೆ ನೋಂದಾಯಿಸಲಾದ ವೈಯಕ್ತಿಕ ಡೇಟಾವನ್ನು ಒಳಗೊಂಡಿರುತ್ತದೆ ಎಂದು ಏರ್ ಇಂಡಿಯಾ ಕಮ್ಯೂನ್ ನಲ್ಲಿ ತಿಳಿಸಿದೆ.

"ಪ್ರಯಾಣಿಕರ ಸೇವಾ ವ್ಯವಸ್ಥೆಯ ನಮ್ಮ ಡೇಟಾ ಪ್ರೊಸೆಸರ್ (ಪ್ರಯಾಣಿಕರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಸಂಸ್ಕರಿಸುವ ಜವಾಬ್ದಾರಿಯನ್ನು ಹೊಂದಿರುವ) ಸಿಟಾ ಪಿಎಸ್ಎಸ್ ಮೇಲೆ ಸೈಬರ್ ಕಳ್ಳರು ದಾಳಿ ಮಾಡಿದ್ದಾರೆ.ಇದು ಕೆಲವು ಪ್ರಯಾಣಿಕರ ವೈಯಕ್ತಿಕ ಡೇಟಾ ಸೋರಿಕೆಗೆ ಕಾರಣವಾಗುತ್ತದೆ. ಈ ಘಟನೆಯು ವಿಶ್ವದ ಸುಮಾರು 4,500,000 ದತ್ತಾಂಶದ  ಮೇಲೆ ಪರಿಣಾಮ ಬೀರಿದೆ "ಎಂದು ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಿದೆ.

"ಇದರಲ್ಲಿ ಹೆಸರು, ಹುಟ್ಟಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್ ಪೋರ್ಟ್ ಮಾಹಿತಿ, ಟಿಕೆಟ್ ಮಾಹಿತಿ, ಸ್ಟಾರ್ ಅಲೈಯನ್ಸ್ ಮತ್ತು ಏರ್ ಇಂಡಿಯಾಫ್ಲೈಯರ್ ಡೇಟಾ (ಪಾಸ್ ವರ್ಡ್ ಹೊರತು), ಕ್ರೆಡಿಟ್ ಕಾರ್ಡ್‌ಗಳ ಡೇಟಾ ಸೇರಿದೆ."

ಇನ್ನು ಸಂಸ್ಥೆ "ನಾವು ಮತ್ತು ನಮ್ಮ ಡೇಟಾ ಪ್ರೊಸೆಸರ್ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಇದ್ದೇವೆ. ಪ್ರಯಾಣಿಕರು ತಮ್ಮ ವೈಯಕ್ತಿಕ ಡೇಟಾದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾದಾಗಲೆಲ್ಲಾ ಪಾಸ್‌ವರ್ಡ್‌ಗಳನ್ನು ಬದಲಾಯಿಸುವಂತೆ ನಾವು ಕೇಳುತ್ತೇವೆ" ಎಂದು ಹೇಳಿದೆ.

ಆದರೆ, ಕ್ರೆಡಿಟ್ ಕಾರ್ಡ್ ಹೊಂದಿರುವವರ ಸಿವಿವಿ / ಸಿವಿಸಿ ಡೇಟಾವನ್ನು ಸಂಗ್ರಹಿಸಲಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಏರ್ ಇಂಡಿಯಾದ ಮೂಲಗಳ ಪ್ರಕಾರ, ಈ ದಾಳಿಗೆ ಒಳಗಾದ  ಪ್ರಯಾಣಿಕರಿಗೆ ಸಹಾಯ ಮಾಡಲು ಸಂಸ್ಥೆ ಕಾಲ್ ಸೆಂಟರ್ ಅನ್ನು ಸ್ಥಾಪಿಸಿದೆ. "ಏರ್ ಇಂಡಿಯಾ ಏತನ್ಮಧ್ಯೆ ಭಾರತ ಮತ್ತು ವಿದೇಶಗಳಲ್ಲಿನ ವಿವಿಧ ನಿಯಂತ್ರಕ ಸಂಸ್ಥೆಗಳೊಂದಿಗೆ ಸಂಬಂಧ ಹೊಂದಿದೆ, ಮತ್ತು ಈ ಘಟನೆಯ ಬಗ್ಗೆ ಅದರ ಜವಾಬ್ದಾರಿಗಳಿಗೆ ಅನುಗುಣವಾಗಿ ಅವರಿಗೆ ತಿಳಿಸಿದೆ" ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com