ನೌಕರರ ಲಿಂಕ್ಡ್ ವಿಮಾ ಯೋಜನೆಯಡಿ ಪಾವತಿಸಬೇಕಾದ ಇಡಿಎಲ್ಐ ಪ್ರಯೋಜನಗಳ ವರ್ಧನೆ

ಇಪಿಎಫ್ ಸದಸ್ಯರ ಅನುಕೂಲಕ್ಕಾಗಿ ಭಾರತ ಸರ್ಕಾರವು ದಿನಾಂಕ 28.04.2021 ರಂದು, ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ, 1976 ಗೆ ಗೆಜೆಟ್ ಅಧಿಸೂಚನೆ ಸಂಖ್ಯೆ ಜಿಎಸ್ಆರ್ 299 (ಇ) ಉಲ್ಲೇಖಿಸಿ ಈ ಕೆಳಗಿನ ತಿದ್ದುಪಡಿಗಳನ್ನು ಮಾಡಿದೆ.
ಇಪಿಎಫ್ಒ
ಇಪಿಎಫ್ಒ

ಬೆಂಗಳೂರು: ಇಪಿಎಫ್ ಸದಸ್ಯರ ಅನುಕೂಲಕ್ಕಾಗಿ ಭಾರತ ಸರ್ಕಾರವು ದಿನಾಂಕ 28.04.2021 ರಂದು, ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ, 1976 ಗೆ ಗೆಜೆಟ್ ಅಧಿಸೂಚನೆ ಸಂಖ್ಯೆ ಜಿಎಸ್ಆರ್ 299 (ಇ) ಉಲ್ಲೇಖಿಸಿ ಈ ಕೆಳಗಿನ ತಿದ್ದುಪಡಿಗಳನ್ನು ಮಾಡಿದೆ. ಅಧಿಸೂಚಿತ ನಿಬಂಧನೆಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಮೂರು ವರ್ಷಗಳವರೆಗೆ ಜಾರಿಯಲ್ಲಿರುತ್ತವೆ.

(1) 15.02.2020 ರಿಂದ ಜಾರಿಗೆ ಬರುವಂತೆ ಯೋಜನೆಯಡಿ ಪಾವತಿಸಬೇಕಾದ ಗರಿಷ್ಠ ಖಚಿತ ಪ್ರಯೋಜನವನ್ನು ರೂ 6 ಲಕ್ಷದಿಂದ ರೂ.7 ಲಕ್ಷಕ್ಕೆ ಹೆಚ್ಚಿಸಲಾಗಿದೆ ಮತ್ತು ಪಾವತಿಸಬೇಕಾದ ಕನಿಷ್ಠ ಖಚಿತ ಪ್ರಯೋಜನವನ್ನು ರೂ .2.50 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

(2) ಮರಣಿಸಿದ ನೌಕರನು ತಾನು ಮರಣಿಸಿದ ತಿಂಗಳ ಮುಂಚಿನ 12 ತಿಂಗಳ ನಿರಂತರ ಅವಧಿಗೆ ಉದ್ಯೋಗದಲ್ಲಿದ್ದು, ಹೇಳಿದ ಅವಧಿಯಲ್ಲಿ ಸಂಸ್ಥೆಯ ಬದಲಾವಣೆ ಮಾಡಿದ ಹೊರತಾಗಿಯೂ ಮತ್ತು ಯೋಜನೆಯ ಸದಸ್ಯರಾಗಿದ್ದರೆ, ಪಾವತಿಸಬೇಕಾದ ಪ್ರಯೋಜನವನ್ನು ಅಂತಹ ಫಲಾನುಭವಿಗಳಿಗೆ ಕೊಡಲಾಗುವುದು .

ಇಡಿಎಲ್ಐ ಯೋಜನೆಯು ಸೇವೆ / ಉದ್ಯೋಗದಲ್ಲಿದ್ದಾಗ ಸಾಯುವ ಇಪಿಎಫ್ ಸದಸ್ಯರ ಕುಟುಂಬ / ನಾಮಿನಿಗೆ ಲಭ್ಯವಿರುವ ವಿಮಾ ಯೋಜನೆ. ಸಾಂಕ್ರಾಮಿಕ ರೋಗದಿಂದ ಉಂಟಾಗುವ ಪ್ರತಿಕೂಲ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಇಪಿಎಫ್‌ಒ ಕಚೇರಿಗಳು ಆದ್ಯತೆಯ ಮೇರೆಗೆ ಸಾವಿನ ಹಕ್ಕುಗಳನ್ನು ಪ್ರಕ್ರಿಯೆಗೊಳಿಸುತ್ತಿವೆ. ಸಾವಿನ ಇತ್ಯರ್ಥಕ್ಕೆ ಸಂಬಂಧಿಸಿದ ಯಾವುದೇ ಕುಂದುಕೊರತೆ / ಪ್ರಶ್ನೆಗಳನ್ನು epfigms.gov.in ಮೂಲಕ ಅಥವಾ ಇಪಿಎಫ್‌ಒ ಪ್ರಾದೇಶಿಕ ಕಚೇರಿಗಳ ಇಮೇಲ್ / ವಾಟ್ಸಾಪ್ ಸಂಖ್ಯೆಯ ಮೂಲಕ ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com