ಜೂನ್ 1 ರಿಂದ ದೇಶೀ ವಿಮಾನಯಾನ ದುಬಾರಿ: ಎಲ್ಲಿಂದೆಲ್ಲಿಗೆ ಎಷ್ಟು ದರ ಇಲ್ಲಿದೆ ಮಾಹಿತಿ...

ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದ ಮಿತಿಯನ್ನು ಶೇಕಡ 13 ರಿಂದ 16 ಕ್ಕೆ ಏರಿಸಲು ನಾಗರಿಕ ವಿಮಾನಯಾನ ಸಚಿವಾಲಯ (MoCA ) ನಿರ್ಧರಿಸಿದ ಕಾರಣ ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದ ಜಾರಿಗೆ ಬರಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ:  ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದ ಮಿತಿಯನ್ನು ಶೇಕಡ 13 ರಿಂದ 16 ಕ್ಕೆ ಏರಿಸಲು ನಾಗರಿಕ ವಿಮಾನಯಾನ ಸಚಿವಾಲಯ (MoCA ) ನಿರ್ಧರಿಸಿದ ಕಾರಣ ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದ ಜಾರಿಗೆ ಬರಲಿದೆ.

ಶುಕ್ರವಾರ ಸಚಿವಾಲಯದ ಆದೇಶದಂತೆ, "40 ನಿಮಿಷಗಳಿಗಿಂತ ಕಡಿಮೆ ಅವಧಿಯ ದೇಶೀಯ ಪ್ರಯಾಣದ ದರವನ್ನು 2,300 ರೂ.ಗಳಿಂದ 2,600 ರೂ.ಗೆ ಹೆಚ್ಚಿಸಲಾಗುವುದು, ಇದು ಪ್ರಸ್ತುತ ದರದ ಶೇಕಡಾ 13 ರಷ್ಟು ಹೆಚ್ಚಾಗಿದೆ." 

40 ನಿಮಿಷದಿಂದ ಒಂದು ಗಂಟೆಯ ನಡುವಿನ ಅವಧಿಯನ್ನು ಹೊಂದಿರುವ ವಿಮಾನಗಳು 3,300 ರೂ.ಗಳ ದರ ಹೊಂದಿರಲಿದೆ. ಇದಕ್ಕೆ ಹಿಂದೆ ಇವುಗಳಿಗೆ 2,900 ರೂ. ದರವಿತ್ತು.

ಅಂತೆಯೇ, 60-90 ನಿಮಿಷಗಳ ನಡುವಿನ ವಿಮಾನಯಾನಕ್ಕೆ 4,000 ರೂ, 90-120 ನಿಮಿಷ 4,700 ರೂ, 150-180 ನಿಮಿಷ 6,100 ಮತ್ತು 180-210 ನಿಮಿಷಗಳಿಗೆ 7,400 ರೂ. ನಿಗದಿಪಡಿಸಲಾಗುವುದು. ಉದಾಹರಣೆಗೆ ದೆಹಲಿ-ಮುಂಬೈ ವಿಮಾನವು ಪ್ರಸ್ತುತ ದರಕ್ಕಿಂತ 700 ರೂ. ಹೆಚ್ಚಳವಾಗಲಿದೆ.

ಪ್ರಯಾಣಿಕರ ಸಂಖ್ಯೆ ವಿಮಾನಯಾನ ದರದ ಹೆಚ್ಚಳಕ್ಕೆ ಕಾರಣವಾಗಿದೆ. ಕೊರೋನಾ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ ಸೋಂಕಿನ ಹೆಚ್ಚಳ  ದೇಶೀಯ ವಾಯುಯಾನದಲ್ಲಿ ಇಳಿಕೆಯನ್ನು ತಂದಿದೆ."ದೇಶಾದ್ಯಂತ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹಠಾತ್ ಉಲ್ಬಣ, ಪ್ರಯಾಣಿಕರ ದಟ್ಟಣೆ ಇಳಿಕೆ  ಗಮನದಲ್ಲಿಟ್ಟುಕೊಂಡು, ಈಗಿರುವ ಶೇ .80 ರಷ್ಟು ಸಾಮರ್ಥ್ಯದ ಕ್ಯಾಪ್ ಅನ್ನು ಶೇಕಡಾ 50 ರಷ್ಟು ಸಾಮರ್ಥ್ಯ ಎಂದು ಪರಿಗಣಿಸಬಹುದು " ಎಂದು ಸಚಿವಾಲಯದ ಆದೇಶ ಹೇಳಿದೆ.

ದೇಶೀಯ ಶುಲ್ಕ ಬೆಲೆ ಮಿತಿಯಲ್ಲಿ ತೆರಿಗೆಗಳು ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿ ಶುಲ್ಕಗಳು (ಎಡಿಎಫ್) ಇರುವುದಿಲ್ಲ, ಇದನ್ನು ಪ್ರಯಾಣಿಕರು ಪಾವತಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com