ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ, ನೂತನ ಸಿಇಒ ಆಗಿ ಭಾರತದ ಪರಾಗ್ ಅಗರ್​ವಾಲ್ ನೇಮಕ

ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಅವರು ಸಾಮಾಜಿಕ ಮಾಧ್ಯಮ ವೇದಿಕೆಯ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಸೋಮವಾರ ಕಂಪನಿ ಪ್ರಕಟಿಸಿದೆ. ಅಲ್ಲದೆ ಟ್ವಿಟರ್‌ನ ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ...
ಜ್ಯಾಕ್ ಡಾರ್ಸೆ, ಪರಾಗ್ ಅಗರ್​ವಾಲ್
ಜ್ಯಾಕ್ ಡಾರ್ಸೆ, ಪರಾಗ್ ಅಗರ್​ವಾಲ್

ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡಾರ್ಸೆ ಅವರು ಸಾಮಾಜಿಕ ಮಾಧ್ಯಮ ವೇದಿಕೆಯ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಸೋಮವಾರ ಕಂಪನಿ ಪ್ರಕಟಿಸಿದೆ. ಅಲ್ಲದೆ ಟ್ವಿಟರ್‌ನ ಪ್ರಸ್ತುತ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿರುವ ಭಾರತೀಯ ಪರಾಗ್ ಅಗರವಾಲ್ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.

ಕಳೆದ 16 ವರ್ಷಗಳಿಂದ ಟ್ವಿಟರ್ ನಲ್ಲಿ ಕೆಲಸ ಮಾಡುತ್ತಿದ್ದ ಜ್ಯಾಕ್ ಡಾರ್ಸೆ ಅವರು ಇತ್ತೀಚಿಗೆ ಸ್ಕ್ವೇರ್ ಐಎನ್​ಸಿ ಕಡೆಗೆ ಅಧಿಕ ಗಮನ ನೀಡುತ್ತಿದ್ದಾರೆ, ಟ್ವಿಟರ್ ಕಡೆಗೆ ಗಮನಹರಿಸುತ್ತಿಲ್ಲ ಎಂದು ಟ್ವಿಟರ್​ನ ಪಾಲುದಾರ ಸಂಸ್ಥೆ ಎಲಿಯಟ್ ಮ್ಯಾನೇಜ್​ಮೆಂಟ್ ಕಾರ್ಪ್ ಈ ಮೊದಲು ಆರೋಪ ಮಾಡಿತ್ತು. ಅಲ್ಲದೆ, ಡೋರ್ಸೆ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು 2020ರ ಆರಂಭದಲ್ಲಿ ಒತ್ತಾಯಿಸಿತ್ತು.

ಡಾರ್ಸೆ ಅವರು ತಾವು ಸ್ಥಾಪಿಸಿದ ಹಣಕಾಸು ಪಾವತಿ ಕಂಪನಿಯಾದ ಸ್ಕ್ವೇರ್‌ನಲ್ಲಿ ಉನ್ನತ ಕಾರ್ಯನಿರ್ವಾಹಕರಾಗಿದ್ದಾರೆ. ಹೀಗಾಗಿ ಕೆಲವು ದೊಡ್ಡ ಹೂಡಿಕೆದಾರರು ಅವರು ಎರಡನ್ನೂ ಪರಿಣಾಮಕಾರಿಯಾಗಿ ಮುನ್ನಡೆಸಬಹುದೇ ಎಂದು ಬಹಿರಂಗವಾಗಿಯೇ ಪ್ರಶ್ನಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com