ಸತತ ನಾಲ್ಕನೇ ದಿನವೂ ತೈಲೋತ್ಪನ್ನಗಳ ದರ ಏರಿಕೆ: ಸಾರ್ವಕಾಲಿಗ ಗರಿಷ್ಠ ಮಟ್ಟಕ್ಕೆ ಪೆಟ್ರೋಲ್-ಡೀಸೆಲ್ ದರ

ದೇಶದಾದ್ಯಂತ ಇಂಧನ ದರ ಭಾನುವಾರವೂ ಹೆಚ್ಚಳವಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್‌ ದರವನ್ನು ಲೀಟರಿಗೆ 25 ಪೈಸೆ ಮತ್ತು ಡೀಸೆಲ್‌ ದರವನ್ನು ಲೀಟರಿಗೆ 30 ಪೈಸೆ ಹೆಚ್ಚಿಸಿವೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ದೇಶದಾದ್ಯಂತ ಇಂಧನ ದರ ಭಾನುವಾರವೂ ಹೆಚ್ಚಳವಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಭಾನುವಾರ ಪೆಟ್ರೋಲ್‌ ದರವನ್ನು ಲೀಟರಿಗೆ 25 ಪೈಸೆ ಮತ್ತು ಡೀಸೆಲ್‌ ದರವನ್ನು ಲೀಟರಿಗೆ 30 ಪೈಸೆ ಹೆಚ್ಚಿಸಿವೆ ಎಂದು ತಿಳಿದುಬಂದಿದೆ.

ಸತತ ನಾಲ್ಕನೇ ದಿನವೂ ದೇಶಾದ್ಯಂತ ಮತ್ತೆ ತೈಲೋತ್ಪನ್ನಗಳ ದರ ಏರಿಕೆಯಾಗಿದ್ದು, ಭಾನುವಾರ ಪೆಟ್ರೋಲಿಯಂ ಉತ್ಪನ್ನಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ. ಸರ್ಕಾರಿ ತೈಲ ಕಂಪನಿಗಳ ಇಂದು (ಅಕ್ಟೋಬರ್ 3, ಭಾನುವಾರ) ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡಿದ್ದು, ಇಂದು ಲೀಟರ್  ಪೆಟ್ರೋಲ್ ದರ 25 ರಿಂದ 30 ಪೈಸೆ ಹೆಚ್ಚಳವಾಗಿದ್ದರೆ, ಪ್ರತೀ ಲೀಟರ್ ಡೀಸೆಲ್ ದರ 28 ರಿಂದ 30 ಪೈಸೆ ಹೆಚ್ಚಳವಾಗಿದೆ. 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 102.39 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 90.77 ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 108.43 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 98.48 ರೂಪಾಯಿ ಆಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ  103.04 ರೂಪಾಯಿ ಹಾಗೂ ಲೀಟರ್ ಡಿಸೆಲ್ ದರ 93.54 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 99.98 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 95.28 ರೂಪಾಯಿಗೆ ಏರಿಕೆ ಆಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 105.91 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.3 ರೂಪಾಯಿಗೆ ಏರಿಕೆ ಆಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com