ಮತ್ತೆ ತೈಲೋತ್ಪನ್ನಗಳ ಬೆಲೆ ಏರಿಕೆ: ದೆಹಲಿಯಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ಬೆಲೆ, ಇಂದಿನ ದರ ಹೀಗಿದೆ
ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ಬೆಲೆ ಭಾನುವಾರ ಕೂಡ ಏರಿಕೆಯಾಗಿದೆ, ಕಳೆದ ಆರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುತ್ತಲೇ ಇದೆ.
Published: 10th October 2021 09:04 AM | Last Updated: 11th October 2021 01:07 PM | A+A A-

ಸಾಂದರ್ಭಿಕ ಚಿತ್ರ
ಮುಂಬೈ: ದೇಶದಲ್ಲಿ ಮತ್ತೆ ತೈಲೋತ್ಪನ್ನಗಳ ಬೆಲೆ ಭಾನುವಾರ ಕೂಡ ಏರಿಕೆಯಾಗಿದೆ, ಕಳೆದ ಆರು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಾಗುತ್ತಲೇ ಇದೆ.
ಇಂದು ಪೆಟ್ರೋಲ್ ದರದಲ್ಲಿ 30 ಪೈಸೆ ಮತ್ತು ಡೀಸೆಲ್ ಬೆಲೆ 35 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ಇಂದು 104 ರೂಪಾಯಿ 14 ಪೈಸೆಯಾಗಿದ್ದು, ಡೀಸೆಲ್ ದರ 92 ರೂಪಾಯಿ 82 ಪೈಸೆಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 110 ರೂಪಾಯಿ 12 ಪೈಸೆಯಾಗಿದ್ದು ಡೀಸೆಲ್ ದರ 100 ರೂಪಾಯಿ 66 ಪೈಸೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 107 ರೂಪಾಯಿ 77 ಪೈಸೆ ಹಾಗೂ ಲೀಟರ್ ಡೀಸೆಲ್ ದರ 98 ರೂಪಾಯಿ 52 ಪೈಸೆಯಾಗಿದೆ.
Prices of petrol and diesel rise by Re 0.30 (at Rs 104.14/litre) and Re 0.35 (at Rs 92.82/litre) respectively in Delhi today
— ANI (@ANI) October 10, 2021
In Mumbai, petrol is priced at Rs 110.12/litre (up by Re 0.29) and diesel costs Rs 100.66/litre (up by Re 0.37) today pic.twitter.com/0O9GXsEEe2