ಎಸ್​​ಬಿಐಗೆ 1 ಕೋಟಿ ರೂ. ದಂಡ ವಿಧಿಸಿದ ಆರ್​ಬಿಐ

ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ 2016 ರ ಕೇಂದ್ರ ಬ್ಯಾಂಕ್​​​ನ ನಿರ್ದೇಶನಗಳನ್ನು ಪಾಲಿಸದ ಕಾರಣಕ್ಕಾಗಿ ಸ್ಟೇಟ್​​ ಬ್ಯಾಂಕ್​ ಆಫ್​ ಇಂಡಿಯಾ(ಎಸ್ ಬಿಐ)ಗೆ ಆರ್​ಬಿಐ ಒಂದು ಕೋಟಿ ರೂ. ದಂಡ ವಿಧಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬೈ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ 2016 ರ ಕೇಂದ್ರ ಬ್ಯಾಂಕ್​​​ನ ನಿರ್ದೇಶನಗಳನ್ನು ಪಾಲಿಸದ ಕಾರಣಕ್ಕಾಗಿ ಸ್ಟೇಟ್​​ ಬ್ಯಾಂಕ್​ ಆಫ್​ ಇಂಡಿಯಾ(ಎಸ್ ಬಿಐ)ಗೆ ಆರ್​ಬಿಐ ಒಂದು ಕೋಟಿ ರೂ. ದಂಡ ವಿಧಿಸಿದೆ.

ಈ ದಂಡವನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ ಸೆಕ್ಷನ್ 47 ಎ (1) (ಸಿ) ವಿಭಾಗ 46 (4) (i) ಮತ್ತು 51(1) ನಿಯಮಗಳ ಅಡಿ ಆರ್ಬಿಐಗೆ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ವಿಧಿಸಲಾಗಿದೆ ಎಂದು ಕೇಂದ್ರೀಯ ಬ್ಯಾಂಕ್ ಸುತ್ತೋಲೆಯಲ್ಲಿ ತಿಳಿಸಿದೆ.

ಎಸ್​ಬಿಐ ಬ್ಯಾಂಕ್​ ತನ್ನ ಗ್ರಾಹಕರೊಂದಿಗೆ ಮಾಡಿಕೊಂಡ ವಹಿವಾಟು ಅಥವಾ ಒಪ್ಪಂದದ ಬಗ್ಗೆ ಯಾವುದೇ ರೀತಿ ಮಾಹಿತಿ ನೀಡಿಲ್ಲ. ಅಲ್ಲದೇ ಬ್ಯಾಂಕಿನಲ್ಲಿ ನಿರ್ವಹಿಸಲಾದ ಗ್ರಾಹಕ ಖಾತೆಯಲ್ಲಿ ಆರ್ ಬಿಐ ಪರಿಶೀಲನೆ ನಡೆಸಿದಾಗ ಕೇಂದ್ರೀಯ ಬ್ಯಾಂಕ್​​ ಖಾತೆಯಲ್ಲಿನ ವಂಚನೆಯ ವರದಿ ವಿಳಂಬ ಮಾಡಿರುವುದು ಪತ್ತೆಯಾಗಿದೆ.

ಆರ್ ಬಿಐ ಒಂದು ಕೋಟಿ ರೂಪಾಯಿ ದಂಡದಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಇಲ್ಲ. ಈ ಹಣವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪಾವತಿ ಮಾಡಬೇಕಿದೆ. ಈ ದಂಡದಿಂದ ಗ್ರಾಹಕರ ಮೇಲೆ ಯಾವುದೇ ಹೊರೆ ಬೀಳುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com