ದೇಶದಲ್ಲಿ ಮತ್ತೆ ಏರಿದ ತೈಲೋತ್ಪನ್ನಗಳ ಬೆಲೆ: ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಗೊತ್ತಾ?

ಕಳೆದ ಕೆಲವು ದಿನಗಳಿಂದ ತೈಲೋತ್ಪನ್ನಗಳ ಬೆಲೆ ಎರಿಕೆಯಾಗುತ್ತಲೇ ಇದ್ದು, ಶನಿವಾರ ಕೂಡ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕಳೆದ ಕೆಲವು ದಿನಗಳಿಂದ ತೈಲೋತ್ಪನ್ನಗಳ ಬೆಲೆ ಎರಿಕೆಯಾಗುತ್ತಲೇ ಇದ್ದು, ಶನಿವಾರ ಕೂಡ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ.

ಆ ಮೂಲಕ ಪ್ರಮುಖ ನಗರಗಳಲ್ಲಿ ಇಂಧನ ದರ ಗರಿಷ್ಠ ಮಟ್ಟ ತಲುಪಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 35 ಪೈಸೆ ಹೆಚ್ಚಳದೊಂದಿಗೆ ಪ್ರತೀ ಲೀಟರ್ ಪೆಟ್ರೋಲ್ ದರ ರೂ.107.24 ರೂಪಾಯಿ ಹಾಗೂ 35 ಪೈಸೆ ಏರಿಕೆ ಕಂಡ ಲೀಟರ್ ಡೀಸೆಲ್ ಬೆಲೆ 95.97 ರೂಪಾಯಿ ದಾಖಲಾಗಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ 34 ಪೈಸೆ ಹೆಚ್ಚಳದ ನಂತರ ಲೀಟರ್ ಪೆಟ್ರೋಲ್ ದರ 113.12ರೂಪಾಯಿ ಹಾಗೂ 37 ಪೈಸೆ ಏರಿಕೆ ಬಳಿಕ ಲೀಟರ್ ಡೀಸೆಲ್ ಬೆಲೆ 104.00 ರೂಪಾಯಿ ಇದೆ.

ಇನ್ನು ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 30 ಪೈಸೆ ಹೆಚ್ಚಳದ ನಂತರ 104.22 ರೂಪಾಯಿ ಹಾಗೂ ಲೀಟರ್ ಡೀಸೆಲ್ ಬೆಲೆಯಲ್ಲಿ 24 ಪೈಸೆ ಏರಿಕೆ ಬಳಿಕ 100.25 ರೂಪಾಯಿ ನಿಗದಿಯಾಗಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 37 ಪೈಸೆ ಹೆಚ್ಚಳದ ನಂತರ ಲೀಟರ್ ಪೆಟ್ರೋಲ್ ದರ 110.98 ರೂಪಾಯಿ ಹಾಗೂ 37 ಪೈಸೆ ಏರಿಕೆ ಬಳಿಕ ಲೀಟರ್ ಡೀಸೆಲ್ ಬೆಲೆ 101.86 ರೂಪಾಯಿ ಇದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com