18 ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 36 ರೂ, ಡೀಸೆಲ್ 26.58 ಏರಿಕೆ

ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, 2020 ರ ಮೇ ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ಬೆಲೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 36 ರೂಪಾಯಿ ಹಾಗೂ 26.58 ರೂಪಾಯಿಗಳು ಏರಿಕೆಯಾಗಿದೆ.
ಪೆಟ್ರೋಲ್ ದರ
ಪೆಟ್ರೋಲ್ ದರ

ನವದೆಹಲಿ: ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, 2020 ರ ಮೇ ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ಬೆಲೆ ಅನುಕ್ರಮವಾಗಿ ಪ್ರತಿ ಲೀಟರ್ ಗೆ 36 ರೂಪಾಯಿ ಹಾಗೂ 26.58 ರೂಪಾಯಿಗಳು ಏರಿಕೆಯಾಗಿದೆ.

ದೆಹಲಿಯಲ್ಲಿ ಈಗ ಪೆಟ್ರೋಳ್ ಬೆಲೆ 107.24 ರೂಪಾಯಿಗಳಾಗಿದ್ದರೆ ಡೀಸೆಲ್ ಬೆಲೆ 95.97 ರೂಪಾಯಿಗಳಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್, ಡಿಸೆಲ್ ದರ ದೇಶದಲ್ಲಿ ಹೆಚ್ಚಳವಾಗುತ್ತಿದೆ.

ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಪೆಟ್ರೋಲ್ 100 ರೂಪಾಯಿಗಳಿಗಿಂತಲೂ ಹೆಚ್ಚಿದ್ದು, 12 ಕ್ಕೂ ಹೆಚ್ಚು ರಾಜ್ಯಗಳಲ್ಲಿ ಡಿಸೆಲ್ ಸಹ 100 ರೂಪಾಯಿ ಗಡಿ ದಾಟಿದೆ.

ಸರ್ಕಾರ ತೈಲ ಬೆಲೆ ಮೇಲೆ ಅಬಕಾರಿ ಸುಂಕ ಎಚ್ಚಳಕ್ಕೆ ಮುಂದಾದಾಗಿನಿಂದಲೂ ಮೇ.5, 2020 ರಿಂದ ಇಲ್ಲಿಯವರೆಗೆ ಪೆಟ್ರೋಲ್ ಬೆಲೆಯ ಏರಿಕೆಯ ಒಟ್ಟು ಮೊತ್ತ ಪ್ರತಿ ಲೀಟರ್ ಗೆ 35.98 ರೂಪಾಯಿಗಳಾಗಿದ್ದರೆ ಡೀಸೆಲ್ ಬೆಲೆ ಏರಿಕೆಯ ಮೊತ್ತ 26.58 ರೂಪಾಯಿಗಳಾಗಿವೆ. ಅಂತಾರಾಷ್ಟ್ರೀಯ ತೈಲ ಬೆಲೆಗಳು ಪ್ರತಿ ಬ್ಯಾರೆಲ್ ಗೆ 19 ಯುಎಸ್ ಡಾಲರ್ ಇದ್ದಾಗ ಜನಸಾಮಾನ್ಯರಿಗೆ ಅದರ ಫಲವನ್ನು ತಲುಪಿಸದೇ ಸರ್ಕಾರ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿತ್ತು.

ಈಗ ಅಂತಾರಾಷ್ಟ್ರೀಯ ಬೆಲೆಗಳು 85 ಯುಎಸ್ ಡಾಲರ್ ಗಳಿಗೆ ಬಂದು ನಿಂತಿದ್ದರೂ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಪ್ರತಿ ಲೀಟರ್ ಗೆ 32.9, ಡೀಸೆಲ್ ಮೇಲಿನ ಅಬಕಾರಿ ಸುಂಕ 31.8 ರೂಪಾಯಿಗಳಾಗಿವೆ.

ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅಬಕಾರಿ ಸುಂಕಗಳನ್ನು ಕಡಿಮೆ ಮಾಡುವ ಪ್ರಸ್ತಾವನೆಯ ಬಗ್ಗೆ ಶುಕ್ರವಾರ ಅ.22 ರಂದು ಪ್ರತಿಕ್ರಿಯೆ ನೀಡಿದ್ದು, ಆ ಪ್ರಸ್ತಾವನೆಯನ್ನು "ತನ್ನ ಕಾಲ ಮೇಲೆ ತಾನೇ ಕೊಡಲಿ ಪ್ರಹಾರ ಮಾಡಿಕೊಂಡಂತೆ" ಎಂದು ಹೇಳುವ ಮೂಲಕ ಅಬಕಾರಿ ಸುಂಕದಿಂದ ಸರ್ಕಾರದ ಯೋಜನೆಗಳಾದ ಉಚಿತ ಕೋವಿಡ್-19 ಲಸಿಕೆ, ಊಟ, ಅಡುಗೆ ಅನಿಲಗಳನ್ನು ಸಾಂಕ್ರಾಮಿಕದ ಅವಧಿಯಲ್ಲಿ ಲಕ್ಷಾಂತರ ಮಂದಿಗೆ ತಲುಪಿಸಲು ಸಹಕಾರಿಯಾಗಿದೆ ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com