The New Indian Express
ಮುಂಬೈ: ಭಾರತದ ಜನಪ್ರಿಯ ಹಾಗೂ ಜನರ ಪ್ರೀತಿ ಪಾತ್ರರಾದ ವ್ಯಕ್ತಿ ಶಾರುಖ್ ಖಾನ್. ಪುತ್ರ ಆರ್ಯನ್ ಖಾನ್ ಡ್ರಗ್ ಪ್ರಕರಣದಿಂದಾಗಿ ಹಲವು ಬ್ರ್ಯಾಂಡ್ ಗಳು ಶಾರುಖ್ ಜೊತೆಗಿನ ಒಪ್ಪಂದಗಳನ್ನು ತಡೆಹಿಡಿದಿದ್ದವು. ಆದರೆ ಒಟ್ತಾರೆಯಾಗಿ ಶಾರುಖ್ ಜನಪ್ರಿಯತೆಗೆ ಡ್ರಗ್ ಪ್ರಕರಣದಿಂದ ಕುಂದು ಉಂಟಾಗಿಲ್ಲ ಎಂದು ಮಾರ್ಕೆಟ್ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಶಾರುಖ್ ಮನೆ ಮೇಲೆ ರೈಡ್ ಆಗಿಲ್ಲ: ಎನ್ ಸಿ ಬಿ ಅಧಿಕಾರಿಗಳು ಮನ್ನತ್ ಗೆ ಭೇಟಿ ನೀಡಿದ್ದು ಆರ್ಯನ್ ಖಾನ್ ಪ್ರಕರಣ ಸಂಬಂಧ ಪೇಪರ್ ವರ್ಕ್ ಗಾಗಿ
ಆರ್ಯನ್ ಖಾನ್ ಡ್ರಗ್ ಪ್ರಕರಣ ವರದಿಯಾದಾಕ್ಷಣ ಹಲವು ಸಂಸ್ಥೆಗಳು ಶಾರುಖ್ ನಟಿಸಿದ್ದ ಜಾಹೀರಾತುಗಳ ಪ್ರಸಾರಕ್ಕೆ ತಡೆಯೊಡ್ಡಿದ್ದವು. ಆದರೆ ಅವೆಲ್ಲಾ ಜಾಹೀರಾತುಗಳು ಒಂದರ ಹಿಂದೊಂದರಂತೆ ಟಿವಿ ವಾಹಿನಿಗಳಲ್ಲಿ ಪ್ರಸಾರ ಕಾಣಲು ಶುರುಮಾಡಿವೆ.
ಇದನ್ನೂ ಓದಿ: “ಒಳ್ಳೆಯ ಮನುಷ್ಯನಾಗುತ್ತೇನೆ” ಶಾರುಖ್ ಖಾನ್ ಪುತ್ರನ ವಾಗ್ದಾನ"
ಮಕ್ಕಳ ಶೈಕ್ಷಣಿಕ ಆಪ್ ಆದ ಬೈಜು ಸಂಸ್ಥೆಗೆ ಶಾರುಖ್ ಖಾನ್ ಅವರೇ ರಾಯಭಾರಿ. ಪುತ್ರನ ಡ್ರಗ್ ಪ್ರಕರಣ ವರದಿಯ ನಂತರವೂ ಬೈಜು ಸಂಸ್ಥೆ ತನ್ನ ಜಾಹಿರಾತನ್ನು ನಿಲ್ಲಿಸಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಬೈಜು ಜಾಹಿರಾತುಗಳ ಪರ ಹಾಗೂ ವಿರೋಧದ ಚರ್ಚೆಗಳು ನಡೆದಿದ್ದವು.
ಇದನ್ನೂ ಓದಿ: 'ನನ್ನ ಮಗ ಡ್ರಗ್ಸ್ ಸೇವಿಸಲಿ, ಹುಡುಗಿಯರ ಹಿಂದೆ ಸುತ್ತಲಿ' ಎಂದಿದ್ದ ಶಾರುಖ್ ಖಾನ್ ಹಳೆಯ ವಿಡಿಯೋ ವೈರಲ್
ಟ್ವಿಟ್ತರ್ ನಲ್ಲಿ ಶಾರುಖ್ 4.2 ಕೋಟಿ ಹಿಂಬಾಲಕರನ್ನು ಪಡೆದಿದ್ದರೆ, ಇನ್ ಸ್ಟಾಗ್ರಾಂನಲ್ಲಿ 2.6 ಕೋಟಿ ಫಾಲೋವರ್ಸ್ ಅನ್ನು ಕಿಂಗ್ ಖಾನ್ ಪಡೆದಿದ್ದಾರೆ.
ಇದನ್ನೂ ಓದಿ: ರಾಮ ಜನ್ಮಭೂಮಿ ವಿವಾದ ಇತ್ಯರ್ಥ ಸಮಿತಿಯಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟ ಶಾರುಖ್ ಖಾನ್ ಗೂ ಆಹ್ವಾನವಿತ್ತಂತೆ!