ಸೆಮಿಕಂಡಕ್ಟರ್ ಕೊರತೆಯಿಂದಾಗಿ ಮಾರುತಿ ಸುಜುಕಿ ಉತ್ಪಾದನಾ ಸಾಮರ್ಥ್ಯ ಕುಂಠಿತ

ಈಗಾಗಲೇ 2 ಲಕ್ಷ ಗ್ರಾಹಕರು ಕಾರುಗಳನ್ನು ಬುಕಿಂಗ್ ಮಾಡಿ ಡೆಲಿವರಿಗಾಗಿ ಕಾದಿದ್ದಾರೆ. ಗ್ರಾಹಕರಿಗೆ ನಿಗದಿತ ಸಮಯಕ್ಕೆ ಕಾರು ಡೆಲಿವರಿ ಮಾಡುವ ಬಗ್ಗೆ ಅನಿಶ್ಚಿತತೆ ಎದುರಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಸೆಮಿಕಂಡಕ್ಟರ್ ಗಳ ಕೊರತೆಯಿಂದಾಗಿ ಮುಂದಿನ ತಿಂಗಳಿನಿಂದ ಕಂಪನಿಯ ಪ್ರಾಡಕ್ಷನ್ ಮೇಲೆ ಪ್ರತಿಕೂಲ ಪರಿಣಾಮ ಕಂಡುಬರಲಿರುವುದಾಗಿ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ತಿಳಿಸಿದೆ. ಸಂಸ್ಥೆಯ ಎರಡು ಪ್ರಮುಖ ಘಟಕಗಳಾದ ಹರಿಯಾಣ ಮತ್ತು ಗುಜರಾತ್ ನಲ್ಲಿ ಕಾರು ತಯಾರಿಕೆಯ ಮೇಲೆ ಹೊಡೆತ ಬೀಳಲಿರುವುದಾಗಿ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. 

ಹರಿಯಾಣದಲ್ಲಿನ ಘಟಕದಲ್ಲಿ ವರ್ಷಕ್ಕೆ 15 ಲಕ್ಷ ಕಾರು ಸಿದ್ಧಗೊಳ್ಳುತ್ತಿದ್ದವು ಎನ್ನುವುದು ಗಮನಾರ್ಹ. ಹರಿಯಾಣ ಮತ್ತು ಗುಜರಾತ್ ಎರಡೂ ಘಟಕಗಳಲ್ಲಿ ಸಂಸ್ಥೆಯ ಶೇ.85 ಪ್ರತಿಶತ ಕಾರುಗಳು ತಯಾರಾಗುತ್ತಿದ್ದವು. ಇದೀಗ ಸೆಮಿ ಕಂಡಕ್ಟರ್ ಕೊರತೆಯಿಂದಾಗಿ ಉತ್ಪಾದನೆಯ ಸಾಮರ್ಥ್ಯ ಶೇ.60 ಪ್ರತಿಶತಕ್ಕೆ ಇಳಿಯಲಿದೆ ಎಂದು ಪರಿಣತರು ಅಂದಾಜಿಸಿದ್ದಾರೆ. 

ಈಗಾಗಲೇ 2 ಲಕ್ಷ ಗ್ರಾಹಕರು ಕಾರುಗಳನ್ನು ಬುಕಿಂಗ್ ಮಾಡಿ ಡೆಲಿವರಿಗಾಗಿ ಕಾದಿದ್ದಾರೆ. ಎಲೆಕ್ಟ್ರಾನಿಕ್ ಬಿಡಿಭಾಗಗಳ ಕೊರತೆಯಿಂದಾಗಿ ಇದೀಗ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಕಾರು ಡೆಲಿವರಿ ಮಾಡುವ ಬಗ್ಗೆ ಅನಿಶ್ಚಿತತೆ ಎದುರಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com